ನವದೆಹಲಿ: ಇತ್ತೀಚೆಗೆ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಏನ್ ಏನೋ ಮಾತಾಡುತ್ತಿದ್ದು, ಪ್ರತಿ ಭಾಷಣ ಸುದ್ದಿಗೋಷ್ಠಿಗಳಲ್ಲಿ ಭಾರತದ ಹೆಸರು ತರುತ್ತಿದ್ದಾರೆ.
ಹೌದು ಇತ್ತೀಚೆಗಷ್ಟೇ ಭಾರತ-ಪಾಕ್ ಕದನವಿರಾಮ ನನ್ನದೇ ಕೊಡ ಸಾಧನೆ ಎಂಬಂತೆ ಜಂಬ ಕೊಚ್ಚಿಕೊಂಡಿದ್ದ ಅಮೇರಿಕಾದ ಅಧ್ಯಕ್ಷ ಟ್ರಂಪ್, ಈ ಮುಂದುವರಿದು, ಭಾರತದಲ್ಲಿ ಉತ್ಪಾನೆಯಾಗುತ್ತಿರುವ ಐ ಫೋನ್ ಕಡಿಮೆ ಮಾಡುವಂತೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಚೀನಾದಿಂದ ಈಗಷ್ಟೇ ಭಾರತದಲ್ಲಿ ಉತ್ಪಾದನೆಯ ವಿಸ್ತರಿಸಿರುವ ಆ್ಯಪಲ್ ಕಂಪನಿ ಮೇಲೆ ಟ್ರಂಪ್ ಒತ್ತಡ ಹೇರುತ್ತಿದ್ಧಾರೆ. ಭಾರತದಲ್ಲಿ ನೀವು ಫ್ಯಾಕ್ಟರಿ ಕಟ್ಟೋದನ್ನು ನಿಲ್ಲಿಸಿ ಎಂದು ತಾನು ಸಿಇಒ ಟಿಮ್ ಕುಕ್ಗೆ ತಿಳಿಸಿದ್ದಾಗಿ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ ಉತ್ಪಾದನೆ ಹೆಚ್ಚಿಸುವಂತೆ ಅವರು ಆ್ಯಪಲ್ಗೆ ಹೇಳಿದ್ದಾರಂತೆ.
ನಿನ್ನೆ ಟಿಮ್ ಕುಕ್ ಜೊತೆ ಸ್ವಲ್ಪ ಮಾತುಕತೆಯಾಯಿತು. ಅವರು ಭಾರತದೆಲ್ಲೆಡೆ ನಿರ್ಮಿಸುತ್ತಿದ್ದಾರೆ. ಭಾರತದಲ್ಲಿ ನೀವು ಕಟ್ಟೋದು ಬೇಡ. ಭಾರತೀಯರು ತಮ್ಮ ಯೋಗಕ್ಷೇಮ ತಾವೇ ನೋಡಿಕೊಳ್ಳುತ್ತಾರೆ. ಅವರನ್ನು ಬಿಟ್ಟು ಬನ್ನಿ ಅಂತ ಅವರಿಗೆ ಹೇಳಿದೆ.
ಈ ಮಾತುಕತೆಯ ಪರಿಣಾಮವಾಗಿ, ಆ್ಯಪಲ್ ಕಂಪನಿ ಅಮೆರಿಕದಲ್ಲಿ ತಯಾರಿಕೆ ಹೆಚ್ಚಿಸಲಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ವಿಡಿಯೋ ಕೃಪೆ: CRUX Live