ದೊಡ್ಡಬಳ್ಳಾಪುರ: ಮಡಿವಾಳ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಮುಖ್ಯವಾಹಿನಿಗೆ ಬರಲು ಮಡಿವಾಳ ಸಮಾಜವನ್ನು ಪ್ರೊಫೆಸರ್ ಅನ್ನಪೂರ್ಣಮ್ಮ ನವರ ಕುಲಶಾಸ್ತ್ರ ಅಧ್ಯಯನದ ಪ್ರಕಾರ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂದು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮುನಿಶಾಮಯ್ಯ ಒತ್ತಾಯಿಸಿದರು.
ತಾಲೂಕಿನ ಮಧುರೆ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ, ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಶತಮಾನಗಳಿಂದ ಉಡುಪು ಶುಚಿ ಮಾಡುವ ಕಾಯಕದಿಂದ ತೊಡಗಿರುವ ನಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು. ಶರಣರು ವಚನಕಾರರಾದ ಕುಲಗುರು ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಮಾಚಿದೇವರು ಕಾಯಕನಿಷ್ಠೆ ಪ್ರಾಮಾಣಿಕತೆ ಪ್ರಬುದ್ಧತೆ ಮೆರೆದವರು ಇಂದು ಪ್ರತಿ ಸಮುದಾಯ ಕೂಡ ಮೀಸಲಾತಿಯ ಬೇಡಿಕೆಯನ್ನು ಇಡುತ್ತಿದೆ ಆದರೆ ವೈಜ್ಞಾನಿಕವಾಗಿ ಕುಲಶಾಸ್ತ್ರ ಅಧ್ಯಯನ ನಡೆಸಿದರು ನಮ್ಮ ಸಮಾಜಕ್ಕೆ ನ್ಯಾಯಯುತವಾಗಿ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂದರು.
ಕನಸವಾಡಿ ಪಂಚಾಯತಿ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ, ಈ ಸಮುದಾಯದ ಯಾವುದೇ ಕೆಲಸಗಳು ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿದ್ದರೆ ನಾವು ಮಾಡಿಕೊಡುತ್ತೇವೆ. ಇವರ ಹೋರಾಟ ಹಾಗೂ ಚಿಂತನೆಗೆ ನಮ್ಮ ಬೆಂಬಲವಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನುಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಚುಂಚೇಗೌಡ, ಮಾಜಿ ಸದಸ್ಯ ಸಿ.ಡಿ. ಸತ್ಯ ನಾರಾಯಣ ಗೌಡ, ಗ್ರಾ.ಪಂ. ಸದಸ್ಯರಾದ ಹೇಮಾ ಸುಬ್ರಹ್ಮಣ್ಯ, ಶಿಲ್ಪ, ವಿರೂಪಾಕ್ಷಯ್ಯ, ಸಂಘದ ಕಾರ್ಯದರ್ಶಿ ಡಿ.ಎಲ್. ಗಂಗಾಧರ್, ನಿರ್ದೇಶಕ ಹನುಮಂತರಾಜು, ಮುತ್ತರಾಜು, ಕೃಷ್ಣಪ್ಪ, ಕನಸವಾಡಿ ಕಾಲೋನಿ, ಪತ್ರಕರ್ತ ಎನ್.ಗಂಗರಾಜು ಮುಖಂಡರಾದ ವೆಂಕಟೇಶ್, ಮುನಿಯಪ್ಪ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ, ಕೂ,ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….