ದೊಡ್ಡಬಳ್ಳಾಪುರ: ನಗರದ ಜೈನ ದೇವಾಲಯದಲ್ಲಿ ಅಟ್ಟಾರಹ ಅಭಿಷೇಕ ಆಚಾರ್ಯ ಶ್ರೀ ನರರತ್ನಸುರಿಶ್ವರ್ಜಿ ಅವರ ದಿವ್ಯ ಆಶ್ರಯದಲ್ಲಿ ನೆರವೇರಿತು.
ಈ ವೇಳೆ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿ, ವಿಶ್ವಶಾಂತಿ, ಶುದ್ದಿ ಕುರಿತು ಮಹಾವೀರರ ಸಂದೇಶದಲ್ಲಿ ತಿಳಿಸಿದ್ದಾರೆ. ಎಲ್ಲಿ ಪ್ರತಿಯೊಂದು ಜೀವಗಳಿಗೆ ಬದುಕಲು ಬಿಡ್ಡುತಾರೋ ಆಗ ಇಡೀ ವಿಶ್ವವು ಶಾಂತಿ ಮಯವಾಗುತ್ತದೆ. ಮಾನವರು ಆಧ್ಯಾತ್ಮಿಕತೆಯಿಂದ ಪ್ರತಿಯೊಂದನ್ನೂ ಸಾಧಿಸಬಹುದು ಎಂದರು .
ಕಾರ್ಯಕ್ರಮದಲ್ಲಿ 11ಜೈನ ಸಾಧು, 22ಸಾಧಿಯರು,10ಮುಮುಕ್ಷಗಳು ಮುಖ್ಯ ಆಕರ್ಷಣೆ ವಾಗಿದ್ದರು.
ಮುಖಂಡರಾದ ಬಲವಂತ ಪಗಾರಿಯ, ರಾಜೇಶ್ ಭಂಡಾರಿ, ಮಹೇಶ್ ಸುರಾನ, ದಿಲೀಪ್ ಚುತರ್, ಶೈಲೇಶ್ ಸುರಾನ, ಜೀತೆಂದರ್ ಕಾಂಟೇರ್, ಅರವಿಂದ್ ಸೊನಿಗ್ರ, ಮನೋಜ್ ಶ್ರೀಶ್ರೀಶ್ರೀಮಾಲ್ ಸೇರಿದಂತೆ ಕಾರ್ಯಕ್ರಮದಲ್ಲಿ 500ಕ್ಕು ಹೆಚ್ಚು ಮಂದಿ ಭಾಗವಹಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ, ಕೂ,ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….