ದೊಡ್ಡಬಳ್ಳಾಪುರ: ಹಕ್ಕಿ ಜ್ವರ ಆತಂಕದಿಂದ ಕೋಳಿ ಬೆಲೆಯಲ್ಲಿ ಕುಸಿತ ಕಂಡಿದೆ, ಆದರೂ ಸಹ ಅನೇಕ ವರ್ತಕರು ಇದರ ಲಾಭವನ್ನು ಗ್ರಾಹಕರಿಗೆ ನೀಡದೆ ಗೌಪ್ಯತೆ ಕಾಪಾಡಿ ಹಗಲು ದರೋಡೆ ನಡೆಸುತ್ತಿದ್ದಾರೆ.
ಭಾನುವಾರ ಬಂತೆಂದರೆ ಮಾಂಸಾಹಾರಿಗಳಿಗೆ ನೆಚ್ಚಿನ ಚಿಕ್ಕನ್ ಬಿರಿಯಾನಿ, ಕಬಾಬ್ ಸೇರಿದಂತೆ ಇನ್ನಿತರ ಕೋಳಿ ಮಾಂಸದ ಖಾದ್ಯ. ಆದರೆ ಮಾರುಕಟ್ಟೆ ದರವನ್ನು ಗೌಪ್ಯವಾಗಿರಿಸಿ ಗ್ರಾಹಕರಿಂದ ಹೆಚ್ಚಿನ ಬೆಲೆ ಕೋಳಿ ಮಾರಾಟ ಮಾಡಲಾಗುತ್ತಿದೆ.
ಪ್ರಸ್ತುತ KPTA ಓಲ್ಸೇಲ್ ಮಾರಾಟದ ಬೆಲೆಯಂತೆ ಬಾಯಲರ್ ಕೋಳಿಗೆ kgಗೆ 100, ಮೊಟ್ಟೆ ಕೊಳಿ kgಗೆ 69, ರಾಣಿ ಬಾಯ್ಲರ್ kgಗೆ 122ಬೆಲೆಗೆ ಮಾರಾಟಗಾರರಿಗೆ ಪೂರೈಸುತ್ತಿದೆ. ಆದರೆ ಅಂಗಡಿಗಳಲ್ಲಿ ಕೆಜಿಗೆ 30ರಿಂದ 40ರೂ ಹೆಚ್ಚಿಗೆ ಪಡೆಯುವುದರ ಜೊತೆ ಕ್ಲೀನಿಂಗ್ ಹೆಸರಲ್ಲಿ ಮತ್ತಷ್ಟು ಹೆಚ್ಚುವರಿ ಪಡೆದು ಹಗಲು ದರೋಡೆ ಮಾಡುತ್ತಿದ್ದಾರೆ.
ದೊಡ್ಡಬಳ್ಳಾಪುರ ನಗರದಲ್ಲಿ ಕೆಲ ಮಾರಾಟಗಾರರು ನಿಗದಿತ ಮೂಲ ಬೆಲೆಗೆ ವೆಚ್ಚ ಸೇರಿಸಿ ಮಾರಾಟ ಮಾಡುತ್ತಿದ್ದಾರೆ, ಆದರೆ ಬಹುತೇಕರು ಹೆಚ್ಚಿನ ಸುಲಿಗೆಯ ಮುಂದೆ ಇಂತಹ ವ್ಯಾಪಾರಿಗಳು ಕಾಣುತ್ತಿಲ್ಲ.
ಈ ಕುರಿತು ಗ್ರಾಹಕರು ಪ್ರಶ್ನಿಸಿದರೆ, ಮಾರಾಟಗಾರರು ಮಾಹಿತಿ ನೀಡದೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ದಿನ ಬಳಕೆ ಬೆಲೆ ಏರಿಕೆ ನಡುವೆ ಕಡಿಮೆಯಾಗಿರುವ ಕೋಳಿ ಬೆಲೆಯ ಲಾಭವೂ ಸಹ ಗ್ರಾಹಕರಿಗೆ ದೊರಕದಾಗಿರುವುದು ವಿಪರ್ಯಾಸ.
ಪರಿಶೀಲನೆಗೆ ಸೂಚನೆ: ನಿಗದಿತ ಬೆಲೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಬೇಕು, ಅದಕ್ಕಿಂತ ಹೆಚ್ಚಿನ ಹಣ ಪಡೆದರೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ದೂರು ನೀಡಬಹುದು. ಈ ಕುರಿತು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು: ತಹಶೀಲ್ದಾರ್ ಟಿ.ಎಸ್.ಶಿವರಾಜ್. ದೊಡ್ಡಬಳ್ಳಾಪುರ
ಮಾರಾಟಗಾರಿಗೆ ಸಲಹೆ: ಬೆಲೆ ಏರಿಕೆ ಬಿಸಿಯಿಂದ ಗ್ರಾಹಕರು ಕಷ್ಟದಲ್ಲಿದ್ದಾರೆ, ಕಡಿಮೆ ಬೆಲೆ ಲಾಭ ತಲುಪಿಸುವುದು ವ್ಯಾಪಾರಿಗಳ ಜವಬ್ದಾರಿ, ಹೆಚ್ಚಿನ ಬೆಲೆ ಪಡೆಯದೆ ನಿಗದಿತ ಬೆಲೆಯಲ್ಲಿ ಮಾರಾಟ ಮಾಡಲು ವ್ಯಾಪಾರಿಗಳಿಗೆ ಸಲಹೆ ನೀಡಲಾಗುವುದು: ಎ.ಎಚ್.ಅಂಬರೀಶ್, ಕರ್ನಾಟಕ ಪೌಲ್ಟ್ರೀ ವ್ಯಾಪಾರಿಗಳ ಸಂಘದ ರಾಜ್ಯ ಕಾರ್ಯಾಧ್ಯಕ್ಷ, ದೊಡ್ಡಬಳ್ಳಾಪುರ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ.ಸುದ್ದಿಗಳು ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….