ನರೇಂದ್ರ ಮೋದಿಯವರು ಭಾರತ ದೇಶದ ಪ್ರಧಾನಿಯಾದ ನಂತರ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪ ಮಾಡಿದ್ದರು.
ಖಾಸಗೀಕರಣದ ಪರಿಣಾಮವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಷ್ಟದ ಜಾಲದಿಂದ ಹೊರಬರಲು ಸಹಕಾರಿಯಾಗುತ್ತದೆ.ಆದರೆ, ಕೇಂದ್ರದ ವಿರುದ್ಧ ಭ್ರಷ್ಟಾಚಾರ, ಸ್ವಜನಪಕ್ಷಪಾತದಂತಹ ಬೇರೆ ಹಗರಣಗಳಿಲ್ಲದ ಕಾರಣ, ಹಲವು ಪ್ರಮುಖ ಜನಪರ ಯೋಜನೆಗಳನ್ನು ಜನವಿರೋಧಿ ಎಂಬಂತೆ ಬಿಂಬಿಸಿ ಜನರನ್ನು ದಿಕ್ಕು ತಪ್ಪಿಸುವ ಕೆಲವು ಎಡಬಿಡಂಗಿಗಳು ಖಾಸಗೀಕರಣವನ್ನೂ ಸಹ ಜನರ ದೃಷ್ಟಿಯಲ್ಲಿ “ಮಾರಾಟ” ಎಂಬಂತೆ ಬಿಂಬಿಸಿ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ.
ಖಾಸಗೀಕರಣ ಎಂದರೆ ಆಡಳಿತ ಯಂತ್ರವನ್ನು ಬೇರೆಯವರಿಗೆ ಮಾರುವುದಲ್ಲ. ಸರ್ಕಾರದ “ಉದ್ಯಮ”ಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡುವುದು.
ಉದಾಹರಣೆಗೆ ಹೇಳ್ತೀನಿ ಕೇಳಿ: ಬಿಎಸ್‌ಎನ್‌ಎಲ್ ಯಾಕೆ ನಷ್ಟದಲ್ಲಿದೆ ಹೇಳಿ!?
ಹಿಂದಿನ ಯುಪಿಎ ಸರ್ಕಾರ ಲಂಚ ತೆಗೆದುಕೊಂಡು ಗುಣಮಟ್ಟದ ತರಂಗಗಳನ್ನು (spectrum) ಖಾಸಗಿ ಕಂಪನಿಗಳಿಗೆ ಮಾರಿಕೊಂಡಿತು. ಉಳಿದ ಕಳಪೆ ತರಂಗಗಳನ್ನು ತನ್ನದೇ ಸ್ವಾಧೀನದಲ್ಲಿ ಇದ್ದ (ಅಲ್ಲಿಯವರೆಗೂ network availabilityಯಲ್ಲಿ ನಂ.1 ಆಗಿದ್ದ bsnl ಗೆ ಉಳಿಸಿಕೊಂಡಿತು. ಉಳಿದ ಕಂಪನಿಗಳು ಉತ್ತಮ ಗುಣಮಟ್ಟದ ಸೇವೆ ಒದಗಿಸಲಾರಂಭಿಸಿದವು. ಜನತೆ ಬಿಎಸ್‌ಎನ್‌ಎಲ್ ಕಛೇರಿಗೆ ಸಮಸ್ಯೆ ಹೇಳಿಕೊಳ್ಳಲು ಎಡತಾಕುತ್ತಲೇ ಇದ್ದರು. ಎಷ್ಟೇ ಆದರೂ ಸರ್ಕಾರಿ ಕೆಲಸದವರಲ್ಲವೇ!? ನಿದ್ರಾಭಂಗ ಮಾಡಿಕೊಳ್ಳಲಿಲ್ಲ. ಪರಿಣಾಮವಾಗಿ ಜನ ಬೇರೆ ನೆಟ್‌ವರ್ಕ್‌ಗಳತ್ತ ಮುಖ ಮಾಡಿದರು. ವಹಿವಾಟು ಕಡಿಮೆ ಆಗುತ್ತಾ ಬಂತು. ಸಿಬ್ಬಂದಿಯ ಸಂಬಳ ಹಾಗೂ ನಿರ್ವಹಣಾ ವೆಚ್ಚಗಳು ಮಾತ್ರ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾದವು. ಇನ್ನೂ ಸಂಸ್ಥೆ ಉದ್ಧಾರವಾಗು ಎಂದರೆ ಉದ್ಧಾರ ಎಲ್ಲಿಂದ ಆಗುತ್ತದೆ!? ಇನ್ನು ಅದೇ ಸಂಸ್ಥೆಯಲ್ಲಿ ಖಾಸಗಿ ಸಹಭಾಗಿತ್ವ ಇದ್ದರೆ, ಸಿಬ್ಬಂದಿಗಳು ಅನಿವಾರ್ಯವಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಲೇಬೇಕಾಗುತ್ತದೆ.
ಇದೇ ರೀತಿಯ ಇನ್ನೊಂದು ಉದಾಹರಣೆ ಎಂದರೆ, ಈ ಮುಂಚೆ ರಾಜ್ಯದ ಪ್ರತಿಷ್ಠಿತ ಪ್ರಾಣಿ ಸಂಗ್ರಹಾಲಯದ ನಿರ್ವಹಣೆಯ ಹೊಣೆ ಖಾಸಗಿ ಸಹಭಾಗಿತ್ವದಲ್ಲಿತ್ತು. ಆಗ ಪ್ರಾಣಿಗಳೂ ಸಹ ಆಹಾರ ಕೊರತೆಯಿಲ್ಲದೆ ದಷ್ಠಪುಷ್ಠವಾಗಿರುತ್ತಿದ್ದವು. ನಂತರದಲ್ಲಿ ನಿರ್ವಹಣಾ ಹೊಣೆ ಖಾಸಗಿಯವರ ಕೈಯಿಂದ ಸರ್ಕಾರದ ಸುಪರ್ದಿಗೆ ಬಂದ ನಂತರ ಸಂಗ್ರಹಾಲಯದಲ್ಲಿ ಇರುವ ಪ್ರಾಣಿಗಳ ದಯನೀಯ ಸ್ಥಿತಿ ಹೇಳತೀರದು. ಇದಕ್ಕೆ ಕಾರಣ, ಸರ್ಕಾರಿ ಅಧಿಕಾರಿಗಳ ಲಂಚಬಾಕತನ. ಹಾಗಾಗಿ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪೈಕಿ “ಕೆಲವು” ಸಂಸ್ಥೆಗಳಲ್ಲಿ ಖಾಸಗಿ ಸಹಭಾಗಿತ್ವ (ಖಾಸಗೀಕರಣ) ಬಂದರೆ “ಲಂಚ” ಸಂಸ್ಕೃತಿ ನಾಶವಾಗುತ್ತದೆ. ಆಗ ತಾನೇತಾನಾಗಿ ಸಂಸ್ಥೆ ಲಾಭದತ್ತ ಸಾಗುತ್ತದೆ. ಇದಕ್ಕೆ ನಮ್ಮ ರೈಲ್ವೆ ಇಲಾಖೆ ಸೂಕ್ತ ಯಶಸ್ವಿ ನಿದರ್ಶನವಾಗಿದೆ.
ಈಗಾಗಲೇ ಗಬ್ಬೆದ್ದು ನಾರುತ್ತಿರುವ ವ್ಯವಸ್ಥೆಯನ್ನು ಶಚಿಗೊಳಿಸಬೇಕಾದರೆ ಸ್ವಲ್ಪ ಕಠಿಣ ನಿರ್ಧಾರಗಳು ಅನಿವಾರ್ಯವೆಂದು ಭಾವಿಸಿ, ಖಾಸಗೀಕರಣ ಎಂದರೆ ಖಾಸಗಿ ಸಹಭಾಗಿತ್ವವೇ ಹೊರತು ಮಾರಾಟವಲ್ಲ ಎಂಬ ವಾಸ್ತವತೆಯನ್ನು ಅರಿತು, ಕೇಂದ್ರದ ಈ ನಿರ್ಧಾರವನ್ನು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಒಪ್ಪಿಕೊಳ್ಳೋಣ.
ಕೊನೆಯಲ್ಲಿ ಇನ್ನೊಂದು ಮಾತು: ಸಿಂಹವನ್ನು ಸಾಕಲು ಸ್ವಲ್ಪ ಹೆಚ್ಚೇ ಖರ್ಚು ಮಾಡಬೇಕಾಗುತ್ತದೆ. ವೆಚ್ಚ ಹೆಚ್ಚಾಯಿತೆಂದು ಸಿಂಹದ ಬದಲಿಗೆ ಅಪ್ರಬುದ್ಧ ಗಾರ್ದಭವನ್ನು ಸಿಂಹಾಸನಕ್ಕೆ ಏರಿಸಲಾಗವುದೇನು…!!!? ಇಂತಿ ನಿಮ್ಮವ..ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ.ಸುದ್ದಿಗಳು ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….