ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯವತಿಯಿಂದ ನಗರದ ಡಾ.ರಾಜ್ ಕುಮಾರ್ ಕಲಾ ಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರ ಜನ್ಮದಿನವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ದೇಶ ಕಂಡ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಅಡಳಿತಾತ್ಮ ಮತ್ತು ಸಾಮಾಜಿಕ ಉನ್ನತಿಗಾಗಿ, ದೇಶದ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಸಂವಿಧಾನ ರಚಿಸಿದ ಮಾಣಿಕ್ಯ. ಹಾಗೆ ಬಾಬು ಜಗಜೀವನ್ ರಾಂ ರವರು ಹಸಿರು ಕಾಂತ್ರಿಯ ಹರಿಕಾರ ಎಂಬ ಬಿರುದು ಪಡೆದು ಪಂಚವಾರ್ಷಿಕ ಯೋಜನೆಗಳಲ್ಲಿ ವಿಶಿಷ್ಟ ರೀತಿಯ ಯಶೋಗಾಥೆಯನ್ನು ನೀಡಿದ ಧುರೀಣ ರಾಜಕಾರಣಿ ಹಾಗೂ ಉಪ ಪ್ರಧಾನಿಗಳಾಗಿದ್ದ ಇವರು ಸರಳ ಮತ್ತು ಸಜ್ಜನ ರಾಜಕಾರಣಿ ಎಂದರು.
ಡಿವೈಎಸ್ಪಿ ಟಿ. ರಂಗಪ್ಪ ಮಾತನಾಡಿ, ಸತತ ಎರಡು ವರ್ಷಗಳಿಂದ ಎಲ್ಲಾ ಜಯಂತಿಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ, ಅಂಬೇಡ್ಕರ್ ರವರ ಬಗ್ಗೆ ಮಾತನಾಡಲು ದಿನ ಗಟ್ಟಲೆಬೇಕು, ಎಷ್ಟೇ ಹೇಳಿದರು ಸಾಲದು. ಬಾಲ್ಯದಲ್ಲಿ ಅವರು ಅನುಭವಿಸಿದ ನೋವುಗಳು, ಅಸ್ಪುರ್ಶ್ಯತೆಯನ್ನು ಮೆಟ್ಟಿ ನಿಂತು ತಮ್ಮದೇ ಆದ ಆತ್ಮಸ್ಥೈರ್ಯ ತುಂಬಿಕೊಂಡು ವಿಶ್ವ ಬೆಳಗುವ ನಾಯಕನಾಗಿ ಹೊರಬಂದ ಮಹಾನಾಯಕ.
ವಿಶ್ವದಲ್ಲೇ ಅತಿ ದೊಡ್ಡ ಸಂವಿಧಾನ ಹಾಗೂ ಲಿಖಿತ ಸಂವಿಧಾನ ನಮ್ಮ ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನ, 1947 ರಿಂದ 1950 ರ ನಡುವೆ ಕೇವಲ ಮೂರು ವರ್ಷಗಳಲ್ಲಿ ಅತಿ ದೊಡ್ಡ ಸಂವಿಧಾನ ನೀಡಿದ ಮಹಾ ನಾಯಕ, ದೇಶದ ಎಲ್ಲ ರಾಜಕೀಯ ಮತ್ತು ಆಡಳಿತಾತ್ಮಕ ವಿಚಾರದ ತಳಹದಿ ನಮ್ಮ ಸಂವಿಧಾನ. ಆರ್ಥಿಕವಾಗಿ ದುರ್ಭಲವಾಗಿದ್ದ ಜನಾಂಗಗಳನ್ನು ಮೇಲೆತ್ತಲು ಶ್ರಮಿಸಿದ ಮಹಾನ್ ಚೇತನ, ಅಂಬೇಡ್ಕರ್ ರವರ ಜೀವನ ಚರಿತ್ರೆ ಓದಿದರೆ ಸಾಲದು ಅದನ್ನು ಜೀವನದಲ್ಲೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್ ಟಿ.ಎಸ್ ಶಿವರಾಜ್, ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣ ಗೌಡ, ಇಒ ಮುರುಡಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಶುಭಮಂಗಳ, ಸಿಡಿಪಿಒ ಅನಿತಾಲಕ್ಷ್ಮೀ, ಹುಲಿಕುಂಟೆ ಮೂರ್ತಿ, ತಾಲ್ಲೂಕು ಮಾದಾರ ಚನ್ನಯ ಅಧ್ಯಕ್ಷ ಆದಿತ್ಯ ನಾಗೇಶ್, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಂಜನಮೂರ್ತಿ ಸೇರಿದಂತೆ ವಿವಿಧ ಸಂಘನೆಗಳ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..