ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ಎರಡನೇ ಅಲೆಯ ಆತಂಕದ ಬೆನ್ನಲ್ಲೆ, ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ಜಿಲ್ಲೆಯ 48 ಜನರಿಗೆ ಸೋಂಕು ದೃಢಪಟ್ಟಿದೆ.
ಬುಧವಾರದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ನೀಡಿರುವ ಕೋವಿಡ್-19 ವರದಿಯಲ್ಲಿ ಹೊಸಕೋಟೆ ತಾಲೂಕಿನಲ್ಲಿ ಹನ್ನೆರಡು ಪುರುಷರು, ಓರ್ವ ಮಹಿಳೆ ಸೇರಿ 13. ದೇವನಹಳ್ಳಿ ತಾಲೂಕಿನ ಒಂಬತ್ತು ಪುರುಷರು, ಮೂವರು ಮಹಿಳೆಯರು ಸೇರಿ 12. ನೆಲಮಂಗಲ ತಾಲೂಕಿನ ಆರು ಪುರುಷರು, ಓರ್ವ ಮಹಿಳೆಯರು ಸೇರಿ 7 ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಾಲ್ವರು ಪುರುಷರು, ಹತ್ತು ಮಂದಿ ಮಹಿಳೆ ಸೇರಿ 14 ಮಂದಿ ಸೇರಿದಂತೆ, ಜಿಲ್ಲೆಯ 48 ಮಂದಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 280 ಮಂದಿ ಸೋಂಕಿತರಿಗೆ ನಿಗಾವಹಿಸಲಾಗಿದೆ ಎನ್ನಲಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1124ಕ್ಕೆ ಏರಿಕೆಯಾಗಿದ್ದರೆ, 51422 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ. 89 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಆರೋಗ್ಯ ಇಲಾಖೆಯಿಂದ ತಪಾಸಣೆ ತೀವ್ರವಾಗಿ ನಡೆಸಲಾಗುತ್ತಿದ್ದು, ಇಂದಿನ ವರದಿಯ ಪ್ರಕಾರ 4168 ಮಂದಿಯ ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..