ಬೆಂಗಳೂರು: ಸಿಬಿಎಸ್ ಇ 10ನೇ ತರಗತಿ ಪರೀಕ್ಷೆ ರದ್ದಾದ ಹಿನ್ನೆಲೆ ರಾಜ್ಯದ SSLC ಪರೀಕ್ಷೆ ಬಗ್ಗೆಯ ಕುರಿತು ಕೆಲ ಮಾದ್ಯಮಗಳಲ್ಲಿ ಕಪೋಕಲ್ಪಿತ ವರದಿ ಪ್ರಸಾರವಾದ ಬೆನ್ನಲ್ಲೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ವಿ್ ವಿದ್ಯಾರ್ಥಿಗಳಗೆ ಹಾಗೂ ಪೋಷಕರಿಗೆ ಸಂದೇಶ ನೀಡಿದ್ದಾರೆ
SSLC ಪರೀಕ್ಷೆ ಕುರಿತು ಉಂಟಾದ ಸುಳ್ಳು ಸುದ್ದಿಗಳಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಸ್ಪಷ್ಟ ಸಂದೇಶ ನೀಡಿರುವ ಅವರು, ಕರ್ನಾಟಕದಲ್ಲಿ SSLC ಪರೀಕ್ಷೆ ಜೂನ್ 21ರಿಂದ ಪ್ರಾರಂಭವಾಗಲಿದೆ. ಪರೀಕ್ಷೆ ನಡೆಯಲು ಇನ್ನೂ ಸಮಯಾವಕಾಶವಿದೆ. ಹೀಗಾಗಿ ಸಿಬಿಎಸ್ ಇ ಪರೀಕ್ಷೆಗಳನ್ನು ರದ್ಧು ಮಾಡಿದಂತೆ ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆಗಳ ಕುರಿತು ಈಗಲೇ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..