ದೊಡ್ಡಬಳ್ಳಾಪುರ: ರಾಸಾಯನಿಕಗಳ ಬಳಕೆಯಿಂದ ಭೂಮಿ ಬಂಜರಾಗುವುದನ್ನು ತಪ್ಪಿಸಿ, ಫಲವತ್ತತೆ ಹೆಚ್ಚಿಸುವ ಜಾಗೃತಿ ಮೂಡಿಸಲು ‘ಭೂಮಿ ಸುಪೋಷಣ ಮತ್ತು ಸಂರಕ್ಷಣಾ ಅಭಿಯಾನ’ವನ್ನು ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಯದ ಆವರಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಸ್ವದೇಶಿ ಜಾಗರಣಾ ಮಂಚ್ ಪ್ರಮುಖರಾದ ಜಗದೀಶ್ ಜಿ ಉದ್ಘಾಟಿಸಿದರು. ರೈತ ದಂಪತಿಗಳಾದ ಸ್ನೇಹ ಸುಬ್ರಹ್ಮಣ್ಯ, ಮಂಜುಳಾ ಶ್ರೀನಿವಾಸ್, ರೂಪ ಧನಪಾಲರೆಡ್ಡಿ ಹಾಗೂ ಲಕ್ಷ್ಮೀ ಗಜೇಂದ್ರ, ಲಕ್ಷ್ಮಮ್ಮನಾರಾಯಣಸ್ವಾಮಿ ಅವರುಗಳು ಕಳಸಕ್ಕೆ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ದೇಸಿ ಹಸುವಿಗೆ ಗೋ ಪೂಜೆ ಸಲ್ಲಿಸಲಾಯಿತು.
ಅಭಿಯಾನದ ಕುರಿತು ಮಾಹಿತಿ ನೀಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣಕುಮಾರ್, ಭೂಮಿ ಸುಪೋಷಣೆಗಾಗಿ ಕೃಷಿಕರು, ಸಾಮಾನ್ಯ ಜನರನ್ನು ಸಂಪರ್ಕಿಸುವುದು, ಈಗಾಗಲೇ ಸುಪೋಷಣೆಯಲ್ಲಿ ತೊಡಗಿರುವ ಕೃಷಿಕರಿಂದ ಮಾಹಿತಿ ನೀಡುವುದು ಹಾಗೂ ಸಾವಯವ ಆಸಕ್ತರನ್ನು ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ’ ಎಂದರು.
‘ಭೂತಾಯಿಯ ರಕ್ಷಣೆಯ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಅಭಿಯಾನಕ್ಕೆ ಅಕ್ಷಯ ಕೃಷಿ ಪರಿವಾರ, ಸಾವಯವ ಕೃಷಿ ಪರಿವಾರ, ಸ್ವದೇಶಿ ಜಾಗರಣ ಮಂಚ್, ಗ್ರಾಮ ವಿಕಾಸ, ವನವಾಸಿ ಕಲ್ಯಾಣ ಸೇರಿದಂತೆ ಹಲವು ಸಂಘಟನೆಗಳು ಕೈಜೋಡಿಸಿವೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಲಕ್ಷ್ಮೀ ನಾರಾಯಣ್, ಮಾಜಿ ಗ್ರಾಪಂ ಸದಸ್ಯ ಚೌಡಪ್ಪ, ನಿವೃತ್ತ ಶಿಕ್ಷಕ ಈಶ್ವರಯ್ಯ, ಅರ್ಚಕರಾದ ಸತ್ಯರಾಮಯ್ಯ, ಸುದರ್ಶನ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..