ದೊಡ್ಡಬಳ್ಳಾಪುರ: ಕೋವಿಡ್ ಸೋಂಕು ದೃಢಟ್ಟಿರುವವರ ಹೆಸರುಳ್ಳ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೋಂಕಿಗೆ ಒಳಗಾದವರ ಮಾನಸಿಕವಾಗಿ ಘಾಸಿಗೊಳಿಸುತ್ತಿರುವ ಆರೋಪ ಕೇಳಿ ಬಂದಿದೆ.
ತಾಲೂಕಿನ ಸಾಸಲು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮೇ.7 ರಂದು ಸೋಂಕು ದೃಢಪಟ್ಟಿರುವ ಪಟ್ಟಿ ಎನ್ನಲಾಗುತ್ತಿರುವ, 16 ಮಂದಿ ಸೋಂಕಿತರ ಹೆಸರು, ಊರು, ಮೊಬೈಲ್ ಸಂಖ್ಯೆ ಹಾಗೂ ಬಿಯು ಸಂಖ್ಯೆಯುಳ್ಳ ಕೋವಿಡ್-19 ಪಟ್ಟಿ ವೈರಲ್ ಆಗಿದೆ.
ಈಗಾಗಲೇ ಸೋಂಕಿಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿರುವ ಸೋಂಕಿತರಿಗೆ, ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗಳಲ್ಲಿ ಪಟ್ಟಿ ಬಹಿರಂಗ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಂತ ಕೃತ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಈ ಪಟ್ಟಿ ಗ್ರಾಮಪಂಚಾಯಿತಿ, ಪೊಲೀಸ್, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರಿಗೆ ಮಾತ್ರ ಲಭ್ಯವಾಗುತ್ತದೆ. ಆದರೆ ಈ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಈ ಇಲಾಖೆಗಳ ಅಧಿಕಾರಿ ಅಥವಾ ಸಿಬ್ಬಂದಿಗಳ ಕರ್ತವ್ಯ ಲೋಪವಿದೆ ಎಂದು ಸೋಂಕಿತ ಕುಟುಂಬದವರ ಆರೋಪಿಸುತ್ತಿದ್ದಾರೆ.
ಆದರೆ ಸೋಂಕಿತರು ಹೋಂ ಕ್ವಾರಂಟೈನ್ ಒಳಗಾಗಿದ್ದರು ಸಹ, ನಿಯಮ ಪಾಲಿಸದೆ ಬಹಿರಂಗವಾಗಿ ಓಡಾಡುತ್ತಿರುವುದು, ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲೆಂದು ಸೋಂಕಿತರ ಪಟ್ಟಿ ಹರಿಬಿಡಲು ಕಾರಣ ಎಂಬ ವಾದ ಸಹ ಕೇಳಿ ಬರುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…