ದೊಡ್ಡಬಳ್ಳಾಪುರ: ಲಾಕ್‍ಡೌನ್ ಕಾರಣ ಸಂಕಷ್ಟಕ್ಕೆ ನೆರವಾಗಿ ಇಂದಿರಾ ಕ್ಯಾಂಟೀನ್ ಹಾಗೂ ದಾನಿಗಳು ನೀಡಲಾಗುತ್ತಿರುವ ಉಪಹಾರದ ಪ್ಯಾಕೆಟ್ ಗಳನ್ನು ರಸ್ತೆ ಬದಿಯಲ್ಲಿ ಎಸೆಯಲಾಗುತ್ತಿರುವ ಘಟನೆ ನಗರದಲ್ಲಿ ಕಂಡು ಬಂದಿದೆ.
ಕೋವಿಡ್-19 ಎರಡನೇ ಅಲೆ ತಡೆಗಟ್ಟಲು ಘೋಷಿಸಲಾದ ಲಾಕ್‍ಡೌನ್ ಹಿನ್ನಲೆ ಬಹಳಷ್ಟು ಜನರಿಗೆ ಅನಾನುಕೂಲ ತಂದೊಡ್ಡಿದೆ.
ಮಾ.10ದು ಘೋಷಿಸಲಾದ ಬಿಗಿ ಕ್ರಮ ಹೆಸರಲ್ಲಿನ ಲಾಕ್‍ಡೌನ್ ನಿಂದಾಗಿ ಕಾರ್ಮಿಕರು, ದಿನಗೂಲಿ ನೌಕರರು ಸೇರಿದಂತೆ ವಿವಿಧ ಕ್ಷೇತ್ರಗಳನ್ನು ನಂಬಿ ಜೀವನ ನಡೆಸುತ್ತಿರುವ ಲಕ್ಷಾಂತರ ಜನರನ್ನು ಸಂಕಷ್ಟಕ್ಕೆದೂಡಿದೆ.
ಈ ನಿಟ್ಟಿನಲ್ಲಿ ಬಿಪಿಎಲ್ ಕಾರ್ಡ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚುವರಿ ಉಚಿತ ಪಡಿತರ ವಿತರಿಸುತ್ತಿದೆ. ನಗರ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ, ಸಂಘ ಸಂಸ್ಥೆಗಳು ಆಹಾರ ಕಿಟ್ ವಿತರಿಸುತ್ತಿದ್ದರೆ, ಮತ್ತೊಂದೆಡೆ ಲಾಕ್ಡೌನ್ನಿಂದಾಗಿ ಕಂಗಾಲಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಿದ್ದು, ಸರ್ಕಾರದ ಉಚಿತ ಊಟ ನಿರ್ಧಾರ ಹಸಿದ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದೆ. ಅಲ್ಲದೆ ಶಾಸಕ ಟಿ.ವೆಂಕಟರಮಣಯ್ಯ ದಾನಿಗಳ ನೆರವಿನಿಂದ ನಗರದಲ್ಲಿ ಅನ್ನ ದಾಸೋಹ ನಡೆಸುತ್ತಿದ್ದಾರೆ.
ಈ ಎಲ್ಲಾ ಯೋಜನೆಗಳು ನಿರ್ಗತಿಕರ ಪಾಲಿಗೆ ವರದಾನವಾಗಿದ್ದರೆ, ಕೆಲವರಲ್ಲಿ ಮೈಗಳ್ಳತನ ರೂಡಿ ಮಾಡಿಕೊಳ್ಳಲೂ ಕಾರಣವಾಗುತ್ತಿರುವುದಲ್ಲದೆ, ಕೆಲ ಬೇಜವಬ್ದಾರಿ ಜನರ ತಾತ್ಸಾರಕ್ಕೆ ಕಾರಣವಾಗಿದೆ.
ಉಚಿತವಾಗಿ ಸಿಗುತ್ತಿರುವ ಉಪಹಾರವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ, ಕೆಲವರು ರಸ್ತೆ ಬದಿಯಲ್ಲಿ ಎಸೆಯುತ್ತಿರುವ ಘಟನೆಗಳು ನಗರ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಲಾಕ್‌ಡೌನ್ ಕಾರಣ ಸಮಸ್ಯೆಗೆ ಒಳಗಾಗಿರುವವರಿಗೆ ಉಪಹಾರ ನೀಡಲಾಗುತ್ತಿದೆ. ಕೆಲವರು ನೆಪ ಮಾತ್ರಕ್ಕೆ ದಾನಿಗಳು ನೀಡುವ ಉಪಹಾರವನ್ನು ಪಡೆದು ತಿನ್ನದೆ ರಸ್ತೆ ಬದಿಯಲ್ಲಿ ಎಸೆತ್ತಿರುವುದು, ಸಾರ್ವಜನಿಕರು ಹಾಗೂ ದಾನಿಗಳ ಬೇಸರಕ್ಕೆ ಕಾರಣವಾಗುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….