ದೊಡ್ಡಬಳ್ಳಾಪುರ: ಕೋವಿಡ್-19 ಲಸಿಕೆ ಪೂರೈಕಯಾಗದ ಹಿನ್ನಲೆ, ಸರದಿಯಲ್ಲಿ ಕಾದು ಬಸವಳಿದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಘಟನೆ ನಗರದ ಆಯುರ್ವೇದ ಆಸ್ಪತ್ರೆಯ ಬಳಿ ನಡೆದಿದೆ.
ಕೋವಿಡ್-19 ಲಸಿಕೆ ಪಡೆಯಲು ಮುಂಚೂಣಿ ವರ್ಗದವರು, ವಿವಿಧ ಕಾರ್ಖಾನೆಗಳ ಕಾರ್ಮಿಕರು ಬೆಳಗ್ಗೆ 7.30ರಿಂದ ಕಾದು ನಿಂತಿದ್ದರು. ಆದರೆ 11.30ರ ವೇಳೆ ಲಸಿಕೆ ಪೂರೈಕೆಯಿಲ್ಲ ಎಂಬ ಅಧಿಕಾರಿಗಳ ಹೇಳಿಕೆಯಿಂದ ಕೆರಳಿ ಆಕ್ರೋಶ ಹೊರಹಾಕಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ವಿರುದ್ಧವೂ ಆಕ್ರೋಶ ಹೊರಹಾಕಿದ ಸಾರ್ವಜನಿಕರು, ಸಮರ್ಪಕವಾಗಿ ಲಸಿಕೆ ವಿತರಣೆಗೆ ಒತ್ತಾಯಿಸಿದರು.
ಲಸಿಕೆ ಪೂರೈಕೆಯಾಗದಿರುವುದರಿಂದ ಸಮಸ್ಯೆ ಎದುರಾಗಿದೆ, ಲಸಿಕೆ ಬಂದ ನಂತರ ಸರಣಿ ಸಂಖ್ಯೆಯಂತೆ ಇಂದು ಬಂದವರಿಗೆ ಆದ್ಯತೆ ನೀಡಿ ಲಸಿಕೆ ಕೊಡಿಸಲಾಗುವುದೆಂದು, ಅನುಮತಿ ಪತ್ರ ಪಡೆದು ಸರಣಿ ಸಂಖ್ಯೆಗಳನ್ನು ನೀಡಿ ಪರಿಸ್ಥಿತಿ ತಿಳಿಗೊಳಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….