ದೊಡ್ಡಬಳ್ಳಾಪುರ: ಅಗತ್ಯ ವಸ್ತುಗಳೆಂದು ಪರಿಗಣಿಸಿ ಎರಡು ಗಂಟೆಗಳ ಕಾಲ ಮಾಂಸ ಮಾರಾಟಕ್ಕೆ ನೀಡಲಾಗಿದ್ದ ವಿನಾಯಿತಿ ಅವಧಿ ಮುಗಿದಿದ್ದು, ನಗರಸಭೆ ಸಿಬ್ಬಂದಿಗಳು ಮಾಂಸದ ಅಂಗಡಿಗಳ ಬಾಗಿಲು ಮುಚ್ಚಿಸುತ್ತಿದ್ದಾರೆ.
ಬೆಳಗ್ಗೆ 6 ರಿಂದ 8 ಗಂಟೆಯ ವರೆಗೆ ನೀಡಲಾಗಿದ್ದ ವಿನಾಯಿತಿ ಹಿನ್ನೆಲೆಯಲ್ಲಿ ಹಾಗೂ ಭಾನುವಾರದ ಕಾರಣ, ಮಾಂಸ ಮಾರಾಟಕ್ಕೆ ಪ್ರಸಿದ್ಧಿಯಾಗಿರುವ ಪಾಲನಜೋಗಹಳ್ಳಿ ಹಾಗೂ ಎಪಿಎಂಸಿ ಮಾರುಕಟ್ಟೆ ನಡುವಿನ ರಸ್ತೆ ಬದಿಯಲ್ಲಿ ಮಾಂಸ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ನಡೆಸಿದ್ದು ಕಂಡುಬಂತು.
ಎಂಟು ಗಂಟೆ ಗಡುವು ಮುಗಿದ ನಂತರ ಅನೇಕ ಮಾಂಸ ಮಾರಾಟಗಾರರು ಸ್ವಯಂ ಅಂಗಡಿ ಮುಚ್ಚಿದರೆ, ಕೆಲವರನ್ನು ನಗರಸಭೆ ಸಿಬ್ಬಂದಿಗಳು ಒತ್ತಾಯ ಪೂರ್ವಕವಾಗಿ ಬಾಗಿಲು ಮುಚ್ಚಿಸಿದರು.
ಕೇವಲ ಎರಡು ಗಂಟೆ ವಿನಾಯಿತಿ ಕಾರಣ ಅನೇಕ ಮಾಂಸದ ಅಂಗಡಿ ಮಾಲೀಕರು ಬಾಗಿಲು ತೆಗೆಯಲು ಮುಂದಾಗದ ಕಾರಣ, ಬಾಗಿಲು ತೆರೆದ ಅಂಗಡಿಗಳ ಬಳಿ ಹೆಚ್ಚಿನ ಜನದಟ್ಟಣೆ ಉಂಟಾಗಿತ್ತು. 8 ಗಂಟೆ ನಂತರ ತಡವಾಗಿ ಬಂದವರು ಮಾಂಸ ಸಿಗದೆ ಪರದಾಡುತ್ತಿದ್ದು ಕಂಡು ಬಂತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..