ಸಾವಿಗೇ ಸವಾಲೊಡ್ಡಿದ ವೀರ ಮೇಜರ್ ಮನೋಜ್ ಕುಮಾರ್ ಪಾಂಡೆ ಜನ್ಮದಿನದವಿಂದು

ಬೆಂಗಳೂರು: ಕಾರ್ಗಿಲ್ ಯುದ್ಧ ನಡೆಯುತ್ತಾ 5 ವಾರಗಳಾಗಿತ್ತು. ಆದರೂ ಹೆಚ್ಚಿನ ಯಶಸ್ಸು ಸಾಧಿಸಿರಲಿಲ್ಲ. ಪ್ರಧಾನಿಗಳ ಭೇಟಿ ಸೈನಿಕರಲ್ಲಿ‌ ಆತ್ಮವಿಶ್ವಾಸ ಮತ್ತು ಮನೋಬಲವನ್ನು ಇಮ್ಮಡಿಗೊಳಿಸಿತ್ತು.

ಭಾರತ ಈಗ ಮಹತ್ತರ ಸಾಧನೆಯೊಂದಕ್ಕೆ ಇಳಿದಿತ್ತು.‌ ಅದು 17 ಸಾವಿರ ಎತ್ತರದ ಶಿಖರವನ್ನು‌ ವಿಮೋಚನಗೊಳಿಸಬೇಕಿದ್ದ ಸಾಹಸ.‌ ಅದೇನು ಅಷ್ಟು ಸುಲಭದ ವಿಷಯವಲ್ಲ. ಇನ್ನೇನು ಸೂರ್ಯರಶ್ಮಿ ಹಿಮಾಲಯದ ಎತ್ತರದಲ್ಲಿರುವ ಶಿಖರದ ತುದಿಗೆ ಮೊದಲ ಬೆಳಕು ಚೆಲ್ಲಲು ಕೆಲವೇ ಘಂಟೆಗಳು ಬಾಕಿ ಉಳಿದಿತ್ತು.‌ ಬೆಳಗಾದರೆ ಶಿಖರವೇರಲು ಸಾಧ್ಯವಿರಲಿಲ್ಲ‌. ಶತ್ರುವಿನ ಗುಂಡಿಗೆ ಎದೆಗೊಡಬೇಕಾಗಿತ್ತು. ಇಂತಹ ಶಿಖರವನ್ನು ಜಯಿಸಲೇಬೇಕೆಂದು ನಮ್ಮ ಸೈನಿಕರಿಗೆ ಆದೇಶ ನೀಡಲಾಗಿತ್ತು. ಅದು ದೇಶದ ಘನತೆಯ ಪ್ರಶ್ನೆಯೂ ಆಗಿತ್ತು.

ಇಂತಹ ಮಹತ್ತರ ಕಾರ್ಯಕ್ಕೆ ಸಿದ್ಧರಾದವರು ಮೇಜರ್ ಮನೋಜ್ ಕುಮಾರ್ ಪಾಂಡೆ ಮತ್ತು ಅವನ ಸಂಗಡಿಗರು.

ಮೇಜರ್ ಮನೋಜ್ ಕುಮಾರ್ ಪಾಂಡೆ ಉತ್ತರ ಪ್ರದೇಶದ ಸೀತಾಪುರದಲ್ಲಿ ಮೋಹಿನಿ ಪಾಂಡೆ ಮತ್ತು ಗೋಪಿಚಂದ್ ಪಾಂಡೆ ದಂಪತಿಯ ಮಗನಾದ ಇವರು, ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಆಫ್  ಸೈನಿಕ ಸ್ಕೂಲನಲ್ಲಿ ಶಿಕ್ಷಣ ಪಡೆದವರು, ಇವರ ಸಹೋದರ ಮನ್ಮೋಹನ್ ಪಾಂಡೆ.

ತನ್ನ‌ 22 ನೇ ವಯಸ್ಸಿನಲ್ಲಿ ಸೇನೆಗೆ ಸೇರಬೇಕೆಂದು ಬಂದಾಗ ತನಗೆ ಕೊಟ್ಟ ಎಲ್ಲ ಪರೀಕ್ಷೆ ಪಾಸಾಗಿ ಕೊನೆಗೆ ಕೆಲ ಅಧಿಕಾರಿಗಳು ಅವನಿಗೆ “ನೀನು ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದರೆ ಒಳ್ಳೆಯ ಸಂಬಳ ಸಿಗುತ್ತಲ್ಲ” ಎಂದಾಗ ‘ನನಗೆ ಬೇಕಾಗಿರುವ ಪರಮ್ ವೀರ್ ಚಕ್ರವನ್ನು ಕೇವಲ ಇಲ್ಲಿ‌ ಮಾತ್ರ ಅದನ್ನು ಪಡೆಯಬಹುದು‌. ಅದಕ್ಕೆ ಸೈನ್ಯಕ್ಕೆ ಸೇರಿದೆ’ ಎಂದು ಹೇಳಿದ.

ಅವನ ಅದೃಷ್ಟವೋ ದುರಾದೃಷ್ಟವೋ ಸೇನೆಗೆ ಸೇರಿದ ಎರಡೇ ವರ್ಷದಲ್ಲಿ ಕಾರ್ಗಿಲ್‌ ಯುದ್ಧ ನಡೆಯಿತು. ಆತ ಮತ್ತು‌ ಅವನ‌ ಸಂಗಡಿಗರು ಅತ್ಯಂತ ಪ್ರೀತಿ ಮತ್ತು ಹುಮ್ಮಸ್ಸಿನಿಂದ ಯುದ್ಧಕ್ಕೆ ಹೊರಟರು.‌ ಕಗ್ಗತ್ತಲಿನಲ್ಲಿ ಗುಡ್ಡವನ್ನೂ ಏರಿದರು. ಪಾಕಿಸ್ಥಾನದ ಸೈನಿಕರು ಗುಡ್ಡದ ಮೇಲೆ ಅಡಗಿ ಕುಳಿತು ಭಾರತೀಯ ಸೈನಿಕರ ಮೇಲೆ ದಾಳಿ ಮಾಡಲು ಸಿದ್ಧರಿದ್ದರು.

ಈತ ಗುಡ್ಡವನ್ನು ಏರಿ ತನ್ನ ಬ್ಯಾಗಿನಲ್ಲಿದ್ದ ಗ್ರೆನೇಡನ್ನು ತೆಗೆದು ಪಾಕಿಸ್ಥಾನದ ಬಂಕರ್ ಮೇಲೆ‌ ಎಸೆದ. ಬಂಕರ್ ಛಿದ್ರ-ಛಿದ್ರವಾಯಿತು. ಆದರೆ ಇನ್ನೊಂದು ಬಂಕರ್­ನಿಂದ ಬಂದ ಗುಂಡೊಂದು ಮನೋಜ್­ನ ದೇಹ ತೂರಿ ಅವನ ಬಲಗೈ‌ ನೇತಾಡತೊಡಗಿತು. ಆತ ಆ ಸ್ಥಿತಿಯಲ್ಲಿಯೇ ತನ್ನ ಸ್ನೇಹಿತರಿಗೆ ಹೇಳಿದ “ನನ್ನ ಈ ಬಲಗೈ ತುಂಬಾ ತೊಂದರೆ ಕೊಡ್ತಿದೆ ಇದನ್ನು ನನ್ನ ಸೊಂಟಕ್ಕೆ ಕಟ್ಟಿ ಎಂದು. ತನ್ನ ಎಡಗೈಯಿಂದ ಇನ್ನೊಂದು ಗ್ರೆನೇಡ್ ತೆಗೆದು ಎಸೆಯುವಷ್ಟರಲ್ಲಿ ಎದುರಿನಿಂದ ಬಂದ ಬುಲೆಟ್ ಅವನ ತಲೆಯನ್ನು ಛೇದಿಸಿ ಬಿಡುತ್ತದೆ. ಆತ ನೆಲಕ್ಕೆ ಉರುಳುತ್ತ ಹೇಳಿದ್ದು ‘ನ ಛೋಡ್ನ’ ಬಿಡಬೇಡಿ ಅವರನ್ನು ಒಬ್ಬೊಬ್ಬರನ್ನೂ ಕೊಲ್ಲಿ ಎಂದು.

ಹೀಗೆ ಹೇಳುತ್ತ ಈ ಗುಡ್ಡ ನಮ್ಮದಾಯಿತು ಎಂದು ಭಾರತದ ಬಾವುಟ ಹಾರಿಸಿ‌ ತಾಯಿ ಭಾರತಾಂಬೆಗೆ ಆತ್ಮಾರ್ಪಣೆ ಮಾಡುತ್ತಾನೆ. ಈತ ತನ್ನ ಡೈರಿಯಲ್ಲಿ ಹೀಗೆ ಬರೆದುಕೊಂಡಿದ್ದ “ಅಕಸ್ಮಾತಾಗಿ ನನ್ನ ರಕ್ತದ ತಾಕತ್ತು ತೋರಿಸುವ ಮುನ್ನ ಸಾವು ನನ್ನ ಮುಂದೆ ಬಂದರೆ ಸಾವನ್ನೇ ಸಾಯಿಸಿಬಿಡುತ್ತೇನೆ” ಹೌದು, ಈತ ಸಾವಿಗೇ ಸವಾಲೊಡ್ಡಿದ ವೀರ. ಬರೆದಂತೇ ನಡೆದ. ಇಂತಹ ವೀರನನ್ನು‌ ಕಾರ್ಗಿಲ್ ಯುದ್ಧದಲ್ಲಿ‌ ಕಳೆದುಕೊಂಡೆವು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಧೈರ್ಯ ಮತ್ತು ನಾಯಕತ್ವಕ್ಕಾಗಿ ಮರಣೋತ್ತರವಾಗಿ ಭಾರತದ ಅತ್ಯುನ್ನತ ಮಿಲಿಟರಿ ಗೌರವವಾದ ಪರಮ್ ವೀರ್ ಚಕ್ರವನ್ನು ನೀಡಲಾಯಿತು. (ಸಂಗ್ರಹ ಚಿತ್ರಗಳನ್ನು ಬಳಸಲಾಗಿದೆ)

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ದೊಡ್ಡಬಳ್ಳಾಪುರ ಸೀರೆಗೆ ಜಿಐ ಟ್ಯಾಗ್‌ಗೆ ಯತ್ನ: ಸೂರತ್‌ ಸೀರೆ ನಿಷೇಧಕ್ಕೆ ತಜ್ಞರ ಅಭಿಪ್ರಾಯ ಸಂಗ್ರಹ: ಸಚಿವರ ಭರವಸೆ

ದೊಡ್ಡಬಳ್ಳಾಪುರ ಸೀರೆಗೆ ಜಿಐ ಟ್ಯಾಗ್‌ಗೆ ಯತ್ನ: ಸೂರತ್‌ ಸೀರೆ ನಿಷೇಧಕ್ಕೆ ತಜ್ಞರ ಅಭಿಪ್ರಾಯ

ದೊಡ್ಡಬಳ್ಳಾಪುರ (Doddaballapura) ಸೀರೆಗೆ ಜಿಐ ಟ್ಯಾಗ್‌ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದು, ಸೂರತ್‌ ಸೀರೆಗಳ ನಿಷೇದಕ್ಕೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ

[ccc_my_favorite_select_button post_id="117062"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್‌ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ

[ccc_my_favorite_select_button post_id="117043"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!