ದೊಡ್ಡಬಳ್ಳಾಪುರ: ತಾಲೂಕಿನ ಜಿ.ಹೊಸಹಳ್ಳಿ ಗ್ರಾಮಸ್ಥರಿಗೆ ಹಲವು ದಿನಗಳಿಂದ ಚಿರತೆ ಆತಂಕ ಎದುರಾಗಿದ್ದು, ಕೃಷಿ ಚಟುವಟಿಕೆಗೆ ಹಿನ್ನಡೆಯುಂಟಾಗುತ್ತಿದೆ.
ಮಾಕಳಿ, ಉಜ್ಜನಿ ಬೆಟ್ಟದ ಸಾಲಿಗೆ ಸಮೀಪದ ಜಿ.ಹೊಸಹಳ್ಳಿ ಗ್ರಾಮದ ಜಮೀನುಗಳಲ್ಲಿ ಹಲವು ದಿನಗಳಿಂದ ಚಿರತೆ ಸಂಚರಿಸುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಜಮೀನಿನಲ್ಲಿ ಮನೆ ಮಾಡಿಕೊಂಡಿರುವ ರೈತರಿಗೆ ಚಿರತೆ ಆತಂಕ ಹೆಚ್ಚಾಗಿ ಕಂಡುಬರುತ್ತಿದ್ದು, ಜಮೀನಿನಲ್ಲಿ ಚಿರತೆಯ ಹೆಜ್ಜೆಯ ಗುರುತುಗಳು ಕಂಡುಬರುತ್ತಿವೆ..ಅಲ್ಲದೆ ಸಾಕಿದ ನಾಯಿಯನ್ನು ಎಳೆದೊಯ್ದು ಕೊಂದು ತಿನ್ನುತ್ತಿವೆ ಎಂದು ಸ್ಥಳೀಯ ಶಂಕರ್ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಾಕಳಿ ಹಾಗೂ ಉಜ್ಜನಿ ಬೆಟ್ಟದ ತಪ್ಪಲಿನ ಗ್ರಾಮಗಳಾದ ಮಾಕಳಿ, ಗುಂಡಮಗೆರೆ, ಕೊಟ್ಟಗೆಮಾಚೇನಹಳ್ಳಿ, ಪಚ್ಚಾರಲಹಳ್ಳಿಯಲ್ಲಿ ಕಂಡು ಬಂದಿದ್ದ ಚಿರತೆ ಹಾವಳಿ ಈಗ ಜಿ.ಹೊಸಹಳ್ಳಿ ರೈತರನ್ನು ಕಾಡಲಾರಂಭಿಸಿದ್ದು, ಅವಘಡ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸಿ ಚಿರತೆ ಸೆರೆ ಹಿಡಿಯಲು ಕ್ರಮಕೈಗೊಳ್ಳಬೇಕೆಂದು ಶಂಕರ್ ರೆಡ್ಡಿ ಒತ್ತಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..