ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜ ಇಲಾಖೆ ಸದ್ದಿಲ್ಲದೆ 91 ಸಾವಿರಕ್ಕೂ ಹೆಚ್ಚಿನ ಪಡಿತರ ಚೀಟಿಗಳನ್ನು ರದ್ದುಪಡಿಸಿದೆ.
ಪಡಿತರ ಚೀಟಿ ಹೊಂದಿರುವವರ ಪೈಕಿ ಕನಿಷ್ಠ 91,189 ಜನರು ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಸೇರಿದವರಲ್ಲ, ಆದರೂ ಸರ್ಕಾರದ ಸಬ್ಸಿಡಿಗಳನ್ನು ಬಳಸುತ್ತಿದ್ದಾರೆ. ಇಲಾಖೆ ಇಂತವರನ್ನು ಗುರುತಿಸಿ ಅವರ ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ.
ಸಬ್ಸಿಡಿ ಪಡಿತರವನ್ನು ಪಡೆಯುತ್ತಿರುವ ಅನೇಕ ವ್ಯಕ್ತಿಗಳು ಮೂರು ಹೆಕ್ಟೇರ್ ಭೂಮಿಯನ್ನು ಹೊಂದಿದ್ದಾರೆ ಅಥವಾ ವಾರ್ಷಿಕ ಆದಾಯವು 1.28 ಲಕ್ಷ ರೂ. ಇದೆ ಎಂದು ಕಾರಣ ನೀಡಲಾಗಿದೆ.
ಇಂತಹ ಹೆಚ್ಚಿನ ಪ್ರಕರಣಗಳನ್ನು ಇಲಾಖೆ ಪರಿಶೀಲಿಸುತ್ತಿದೆ. ಇತ್ತೀಚಿನ ವರದಿಯ ಅನ್ವಯ, ಬಿಪಿಎಲ್ ಕಾರ್ಡ್ ಹೊಂದಿರುವವರ ಆದಾಯ ತೆರಿಗೆ ವಿವರಗಳ ಆಧಾರದ ಮೇಲೆ ಒಟ್ಟು 91,189 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ 50,060 ಜನರು ಆಂತ್ಯೋದಯ ಅನ್ನ ಯೋಜನೆ ಕಾರ್ಡ್‌ಗಳನ್ನು ಹೊಂದಿದ್ದಾರೆ, 1.20 ಲಕ್ಷ ರೂ.ಗಿಂತ ಹೆಚ್ಚಿನ ಕೌಟುಂಬಿಕ ಆದಾಯ ಹೊಂದಿರುವ 85,204 ಆದಾಯ ತೆರಿಗೆ ಪಾವತಿದಾರರು ಮತ್ತು 2,18,125 ಜನರು ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್‌ಗಿಂತ ಹೆಚ್ಚು ಭೂಮಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರ ವಿವರವಾದ ವರದಿಯನ್ನು ಕೋರಿದ್ದು ಹಾಗೂ ಸಬ್ಸಿಡಿಯನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲರನ್ನು ಕಂಡುಹಿಡಿಯಲು ಅದೇ ಮಾದರಿಯನ್ನು ಬಳಸಿಕೊಳ್ಲಲು ಇತರ ರಾಜ್ಯಗಳನ್ನು ಕೇಳಿದೆ.
ರಾಜ್ಯದಲ್ಲಿ ಒಟ್ಟು ಪಡಿತರ ಚೀಟಿ ಹೊಂದಿರುವವರ ಸಂಖ್ಯೆ 1,48,89,430. ಸ್ವೀಕರಿಸಲಾದ ಹೊಸ ಪಡಿತರ ಚೀಟಿ ಅರ್ಜಿ3,37,920-ಅನರ್ಹ ಪಡಿತರ ಚೀಟಿಗಳು 5,53,969. ತಿರಸ್ಕರಿಸಲಾದ ಅರ್ಜಿ 57,423. ಪರಿಶೀಲಿಸಲಾಗಿರುವ ಅರ್ಜ 6,092.
ಡೇಟಾ ಎಲಿಮಿನೇಷನ್ ಮಾನದಂಡಗಳು ಆಧಾರ್ ಕಾರ್ಡ್‌ಗಳ ಡೇಟಾವನ್ನು ಆಧರಿಸಿದೆ. ಅನರ್ಹ ಫಲಾನುಭವಿಗಳನ್ನು ಗುರುತಿಸಲು ಭೂಮಿ ಡೇಟಾ ಸಂಚಯದ ದಾಖಲೆಗಳನ್ನು ಸಹ ಪರಿಶೀಲಿಸಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಡೇಟಾಬೇಸ್‌ನಲ್ಲಿ ಸೇರ್ಪಡೆ ದೋಷಗಳನ್ನು ತೆಗೆದುಹಾಕಲು ಆಹಾರ ಫಲಾನುಭವಿಗಳ ಡೇಟಾಬೇಸ್ ಅನ್ನು ಈಗ ಬೇರೆ ಬೇರೆ ಇಲಾಖೆಗಳ ಫಲಾನುಭವಿಗಳ ಪಟ್ಟಿಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಇಲಾಖೆ ಯಾವುದೇ ಪಡಿತರ ಚೀಟಿ ನೀಡಿಲ್ಲ, ಮತ್ತು ಸಾಂಕ್ರಾಮಿಕ ರೋಗದ ಒಂದು ವರ್ಷಕ್ಕೂ ಹೆಚ್ಚು ಕಾಲಅಕ್ರಮ ಫಲಾನುಭವಿಗಳನ್ನು ತೆಗೆದು ಹಾಕಲು ಬಳಸಿಕೊಳ್ಳಲಾಗಿದೆ. ಡೇಟಾವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಸಲ್ಲಿಕೆಯ ಆಧಾರದ ಮೇಲೆ ಒಟ್ಟು 79,069 ಅಂತ್ಯೋದಯ ಪಡಿತರ ಚೀಟಿಗಳು ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್ ಅನಿಲ್ ಕುಮಾರ್ ರಾಷ್ಟ್ರೀಯ ವಾಹಿನಿಗೆ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯು ಇಲಾಖೆಗೆ ತಿಂಗಳಿಗೆ 5.01 ಕೋಟಿ ರೂ., ಮತ್ತು ವಾರ್ಷಿಕವಾಗಿ 60.20 ಕೋಟಿ ರೂ ಉಳಿತಾಯಕ್ಕೆ ಕಾರಣವಾಗಲಿದೆ.
ಪಡಿತರ ಚೀಟಿ ಹೊಂದಿರುವ ಕೆಲವರು ಮೃತರಾಗಿದ್ದಾರೆ ಇತರರು ರಾಜಕೀಯ ಸಂಪರ್ಕಗಳನ್ನು ಹೊಂದಿದ್ದಾರೆ ಅಥವಾ ಉತ್ತಮ ವೃತ್ತಿಯನ್ನು ಹೊಂದಿದ್ದಾರೆ, ಆದರೆ ಇನ್ನೂ ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ ಮತ್ತು ಮಾಸಿಕ ಸಬ್ಸಿಡಿ ಪಡಿತರವನ್ನು ಪಡೆಯುತ್ತಾರೆ ಎನ್ನಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..