ಬೆಂಗಳೂರು: ಅನ್ ಲಾಕ್ ಆಗಿದ್ದೇ ತಡ ಮನೆಯಲ್ಲಿದ್ದು ಬೇಜಾರಲ್ಲಿದ್ದ ಜನ ಈಗ ಪ್ರವಾಸಿ ತಾಣಗಳತ್ತ ಲಗ್ಗೆಯಿಡ್ತಿದ್ದು.ವಿಕೇಂಡ್ ಭಾನುವಾರವಾದ ಇಂದು ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ.
ಮುಂಜಾನೆ ಯಿಂದಲೇ ನಂದಿಬೆಟ್ಟ ನೋಡೋಕೆ ಪ್ರವಾಸಿಗರ ಆಗಮನವಾಗಿದ್ದು.9 ಗಂಟೆ ನಂತರ ಚೆಕ್ ಪೋಸ್ಟ್ ಗೇಟ್ ಓಪನ್ ಮಾಡಿದ್ದೇ ತಡ ನಾ ಮುಂದು ತಾ ಮುಂದು ಅಂತ ನಂದಿಬೆಟ್ಟ ಏರಿದ್ದಾರೆ.
ನೂರಾರು ಕಾರು ಹಾಗೂ ಬೈಕ್ ಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಇನ್ನೂ ಮಾಸ್ಕ್ ಧರಿಸದ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡ್ತಿರೋ ಪ್ರವಾಸಿಗರಿಗೆ ಬೆಳ್ಳಂ ಬೆಳಿಗ್ಗೆ ಪೋಲೀಸರು ಶಾಕ್ ಕೊಟ್ಟಿದ್ದು ದಂಡ ವಿಧಿಸುತ್ತಿದ್ದಾರೆ.
ಚೆಕ್ ಪೋಸ್ಟ್ ಬಳಿ ವಾಹನಗಳ ಪರಿಶೀಲನೆಯಲ್ಲಿ ತೊಡಗಿರೋ ನಂದಿಗಿರಿಧಾಮ ಹಾಗೂ ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೊಲೀಸರು ತಲಾ 5೦೦ ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಇನ್ನೂ ಬೆಟ್ಟದ ಮೇಲೆ ಪ್ರವಾಸಿಗರು ತುಂಬಿ ತುಳುಕಿದ್ದು ಕರೊನಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
ನಂದಿಬೆಟ್ಟದಲ್ಲಿ ಎಲ್ನೋಡಿದ್ರೂ ಕಾರ್ ಕಾರ್.. ಟ್ರಾಫಿಕ್ ಜಾಮ್: ಬೆಳ್ಳಂ ಬೆಳಿಗ್ಗೆ ಕಾರು ಹಾಗೂ ಬೈಕ್ ಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಲಗ್ಗೆಯಿಟ್ಟಿದ್ದಾರೆ. ಪರಿಣಾಮ ನಂದಿಗಿರಿಧಾಮದ ಅಂಕು ಡೊಂಕಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು.
ಇನ್ನೂ ನಂದಿಬೆಟ್ಟದ ಮೇಲ್ಭಾಗದಲ್ಲೂ ಇದೇ ಪರಿಸ್ಥಿತಿ ಕಂಪ್ಲೀಟ್ ಆಗಿ ಟ್ರಾಫಿಕ್ ಜಾಮ್ ವಾಹನಗಳ ರಸ್ತೆಗಳಲ್ಲಿ ಕಿಕ್ಕಿರಿದು ತುಂಬಿದ್ದು ವಾಹನ ಸವಾರರು ಹೈರಾಣಾದ್ರು.
ಅನ್ ಲಾಕ್ ಆದ ನಂತರ ಮೊದಲ ಭಾನುವಾರ ವಾದ ಇಂದು ಸರಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬೈಕ್ ಹಾಗೂ 1500 ಕ್ಕೂ ಹೆಚ್ಚು ಕಾರುಗಳಲ್ಲಿ ಸರಿ ಸುಮಾರು ಅಂದಾಜು 10000 ಕ್ಕೂ ಹೆಚ್ಚು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಆಗಮಿಸಿ ಸೌಂದರ್ಯವನ್ನ ಕಣ್ತುಂಬಿಕೊಂಡಿದ್ದಾರೆ.
ನಂದಿಬೆಟ್ಟದಲ್ಲಿ ಕೋರೋನಾ ನಿಯಮಗಳನ್ನು ಗಾಳಿಗೆ ತೂರಿದ್ದು ಬಹುತೇಕರು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ನಂದಿಬೆಟ್ಟ ಕರೊನಾ ಹಾಟ್ ಸ್ಪಾಟ್ ಆಗುವ ಆತಂಕ ಮೂಡಿದೆ.
ಬೆಟ್ಟದಲ್ಲಿ ಜನ ತುಂಬಿ ತುಳುಕಿದ್ದು ಇಡೀ ದಿನ ಪ್ರಾಕೃತಿಕ ಸೊಬಗನ್ನ ಸವಿದ ಜನ ಸಖತ್ ಎಂಜಾಯ್ ಮಾಡಿದ್ರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..