ದೊಡ್ಡಬಳ್ಳಾಪುರ: ಶಿಶು ಅಭಿವೃದ್ದಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಅಂಗನವಾಡಿಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ-9 ಹಾಗೂ ಸಹಾಯಕಿಯರ-20 ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2021ರ ಜುಲೈ 09 ರಿಂದ ಆಗಸ್ಟ್ 09ಸಂಜೆ 5.30ರ ಒಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತರು www.anganwadirecruit.kar.nic.in ಮೂಲಕ ಅರ್ಜಿ ಸಲ್ಲಿಸುವಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನಿತಾಲಕ್ಷ್ಮೀ ಕೋರಿದ್ದಾರೆ.
ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಅಂಗನವಾಡಿಗಳು: ಮಾದಗೊಂಡನಹಳ್ಳಿ, ಬೆನಕಿನಪುರ, ಮದುರನಹೊಸಹಳ್ಳಿ, ಕೊನೇನಹಳ್ಳಿ, ರಘುನಾಥಪುರ, ಬೈರಸಂದ್ರ, ದೊಡ್ಡತುಮಕೂರು, ಕರೇನಹಳ್ಳಿ ( ಮಿನಿ), ನಾಗಶೆಟ್ಟಿಹಳ್ಳಿ(ಮಿನಿ)
ಸಹಾಯಕಿಯರ ಹುದ್ದೆ ಖಾಲಿ ಇರುವ ಅಂಗನವಾಡಿಗಳು: ತುರುವನಹಳ್ಳಿ, ದರ್ಗಾಜೋಗಹಳ್ಳಿ, ಕರುವಿಗೆರೆ, ಸೋತೇನಹಳ್ಳಿ, ವಿವೇಕಾನಂದ ನಗರ-2, ಚೀಲೇನಹಳ್ಳಿ, ಮಲ್ಲಸಂದ್ರ, ಮಧುರನ ಹೊಸಹಳ್ಳಿ, ರಾಮ್ ಪುರ, ಆಲೇನಹಳ್ಳಿ, ಗುಮ್ಮನಹಳ್ಳಿ, ಮಾರಸಂದ್ರ, ಮುತ್ತೂರು, ಮಜರಾಹೊಸಹಳ್ಳಿ, ತಿಪ್ಪಾಪುರ, ರಾಜೀವ್ ಗಾಂಧಿ ಬಡಾವಣೆ-1, ಅರೆಹಳ್ಳಿ ಗುಡ್ಡದಹಳ್ಳಿ, ರೋಜಿಪುರ-1, ರೋಜಿಪುರ-2 ಅರಳು ಮಲ್ಲಿಗೆ-2.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಾತಿಯ ಕುರಿತು ಯಾವುದೇ ಹಣಕಾಸಿನ ವ್ಯವಹಾರಕ್ಕೆ ಅವಕಾಶವಿಲ್ಲವೆಂದು ಅನಿತಾಲಕ್ಷ್ಮೀ ಸ್ಪಷ್ಟಪಡಿಸಿದ್ದು, ಅಂತಹ ಮಾಹಿತಿ ತಿಳಿದು ಬಂದಲ್ಲಿ ಶಿಸ್ತು ಕ್ರಮ ಹಾಗೂ ನೇಮಕಾತಿಯನ್ನು ಅಮಾನ್ಯಗೊಳಿಸಲಾಗುವುದು ಎಂದಿದ್ದಾರೆ.
ನೇಮಕಾತಿಯಲ್ಲಿ ಹಣ ಕಾಸಿನ ವ್ಯವಹಾರ ಕಂಡುಬಂದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..