ದೊಡ್ಡಬಳ್ಳಾಪುರ: ಮಾಂಸ ಪ್ರಿಯರ ಪಾಲಿಗೆ ಕಹಿ ಸುದ್ದಿ. ಲಾಕ್‍ಡೌನ್ ಬಿಡುವಿನ ನಂತರ ಕೋಳಿ ಮಾಂಸ ಬೆಲೆ ಗಗನಕ್ಕೇರಿದೆ.
ಕಳೆದ ಎರಡು ವಾರಗಳಿಂದ ಚಿಕನ್ ದರ ತೀವ್ರವಾಗಿದ್ದು. ಮಾರುಕಟ್ಟೆಗೆ ಕೋಳಿ ಸಾಕಷ್ಟು ಸರಬರಾಜಾಗದ ಕಾರಣ ಇದೀಗ ಕೆಜಿ ಮಾಂಸದ ಬೆಲೆ 255 ರೂಪಾಯಿ ತಲುಪಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಲಾಕ್’ಡೌನ್ ಸಡಿಲಗೊಂಡ ಬೆನ್ನಲ್ಲೇ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆ ಹೆಚ್ಚಳದಿಂದಾಗಿ ಬೆಲೆ ಕೂಡ ದುಬಾರಿಯಾಗಿದೆ.
ಬ್ರಾಯ್ಲರ್ ಕೋಳಿಗೆ 175 ರೂ. ! ಸಾಮಾನ್ಯವಾಗಿ ಬ್ರಾಯ್ಲರ್ ಕೋಳಿ ಮಾಂಸದ ಬೆಲೆ ಕಿ.ಗ್ರಾಂಗೆ 90 ರೂ.ನಿಂದ 100 ರೂ.ಗಳಷ್ಟಿರುತ್ತದೆ. ಏರಿಕೆ ಆದರೂ 10 ರೂ. ಮಾತ್ರ. ಆದರೆ ಕಳೆದ ಎರಡು ವಾರಗಳಿಂದ ದರ ಏರಿಕೆಯಷ್ಟೇ ವಿನಾ ಇಳಿಯುತ್ತಿಲ್ಲ. ಚರ್ಮ ತೆಗೆದ ಕೋಳಿ ಮಾಂಸ ಕೆ.ಜಿ.ಗೆ 280 ರೂ. ಇದ್ದರೆ, ಚರ್ಮ ಇರುವ ಕೋಳಿ ಮಾಂಸ ಕೆ.ಜಿ.ಗೆ 255 ಆಗಿದೆ.
ಕೋಳಿ ಘಟ್ಟದಿಂದ ಆಮದು ಕೊರತೆ: ಲಾಕ್ ಡೌನ್ ಕಾರಣ ಕೋಳಿ ಉತ್ಪಾದನೆ ಕಡಿಮೆಯಾಗಿದೆ. ಕೋವಿಡ್ ಲಾಕ್‌ಡೌನ್ ಪರಿಣಾಮ ಜಿಲ್ಲೆಯ ಬಹುತೇಕ ಕೋಳಿ ಫಾರಂಗಳು ಖಾಲಿ-ಖಾಲಿ ಆಗಿದ್ದು, ರೈತರು ಬೆಳೆದ ಫಸಲು, ಕೃಷಿ ಚಟುವಟಿಕೆ ಸಾಮಗ್ರಿ ಇಡುವ ಗೋದಾಮುಗಳಾಗಿ ಮಾರ್ಪಟ್ಟಿವೆ. ಈ ಕಾರಣ ಕೋಳಿ ಬೆಲೆ ಏರಿಕೆಯಾಗಿದೆ.
ಕೋಳಿ ಮಾಂಸದ ಅಂಗಡಿ ಮಾಲೀಕ ಮನೋಹರ್ ಅವರು ಮಾತನಾಡಿ, ಪ್ರಸ್ತುತ ನಾವು 1 ಕೆಜಿ ಕೋಳಿ ಮಾಂಸಕ್ಕೆ ರೂ.280 ಪಡೆಯುತ್ತಿದ್ದೇವೆ. ಬದುಕಿರುವ ಕೋಳಿಗೆ ರೂ.175 ಪಡೆಯುತ್ತಿದ್ದೇವೆ. ಅಂಗಡಿಯಲ್ಲಿ ಕೆಲಸ ಮಾಡುವವರಿಗೂ ನಾವು ವೇತನ ನೀಡಬೇಕಿರುವ ಹಿನ್ನೆಲೆಯಲ್ಲಿ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..