ಒಲಿಂಪಿಕ್ಸ್‌: ನಿಮ್ಮೆಲ್ಲರಿಗೂ ದೇಶದ 135 ಕೋಟಿ ಭಾರತೀಯರ ಶುಭಾಶಯಗಳೇ ಆಶೀರ್ವಾದ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಲಿರುವ ಭಾರತೀಯ ಕ್ರೀಡಾಪಟುಗಳ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಪ್ರಧಾನಮಂತ್ರಿಯವರ ಸಂವಾದವು ಕ್ರೀಡಾಪಟುಗಳನ್ನು ಆಟಗಳಲ್ಲಿ ಭಾಗವಹಿಸುವ ಮುನ್ನ ಪ್ರೇರೇಪಿಸುವ ಪ್ರಯತ್ನವಾಗಿದೆ. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಯುವ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ  ನಿಸಿತ್ ಪ್ರಾಮಾಣಿಕ್ ಮತ್ತು ಕಾನೂನು ಸಚಿವ ಕಿರೆನ್ ರಿಜಿಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅನೌಪಚಾರಿಕ ಮತ್ತು ಮುಕ್ತ ಸಂವಾದದಲ್ಲಿ, ಪ್ರಧಾನ ಮಂತ್ರಿಯವರು ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದರು ಮತ್ತು ತ್ಯಾಗಕ್ಕಾಗಿ ಅವರ ಕುಟುಂಬಗಳಿಗೆ ಧನ್ಯವಾದಗಳನ್ನು ತಿಳಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ದೀಪಿಕಾ ಕುಮಾರಿ (ಬಿಲ್ಲುಗಾರಿಕೆ) ಅವರನ್ನು  ಪ್ರಧಾನಿಯವರು ಅಭಿನಂದಿಸಿದರು. ಪ್ರಯಾಣವು ಮಾವಿನ ಹಣ್ಣುಗಳಿಗೆ ಗುರಿ ಇಡುವ ಮೂಲಕ ಪ್ರಾರಂಭವಾದ ಅವರ ಬಿಲ್ಲುಗಾರಿಕೆ ಮತ್ತು ಕ್ರೀಡಾಪಟುವಾಗಿ ಅವರ ಪ್ರಯಣ ಹೇಗಿತ್ತು ಎಂಬ ಬಗ್ಗೆ ವಿಚಾರಿಸಿದರು. ಪ್ರವೀಣ್ ಜಾಧವ್ (ಬಿಲ್ಲುಗಾರಿಕೆ) ಕಷ್ಟಕರ ಸಂದರ್ಭಗಳ ನಡುವೆಯೂ ಸೂ ಕ್ತ ಹಾದಿಯಲ್ಲಿಯೇ ಸಾಗುತ್ತಿರುವುದಕ್ಕೆ ಪ್ರಧಾನಿ ಶ್ಲಾಘಿಸಿದರು. ಪ್ರಧಾನಿಯವರು ಅವರ ಕುಟುಂಬದೊಂದಿಗೂ ಸಂವಾದ ನಡೆಸಿದರು ಮತ್ತು ಅವರ ಪ್ರಯತ್ನವನ್ನು ಶ್ಲಾಘಿಸಿದರು. ಮೋದಿಯವರು ಜಾಧವ್ ಕುಟುಂಬ ಸದಸ್ಯರೊಂದಿಗೆ ಮರಾಠಿಯಲ್ಲಿ ಮಾತುಕತೆ ನಡೆಸಿದರು.

ನೀರಜ್ ಚೋಪ್ರಾ (ಜಾವೆಲಿನ್ ಥ್ರೋ) ಅವರೊಂದಿಗೆ ಮಾತನಾಡಿದ ಪ್ರಧಾನಿಯವರು, ಭಾರತೀಯ ಸೇನೆಯೊಂದಿಗೆ ಕ್ರೀಡಾಪಟುವಿನ ಅನುಭವ ಮತ್ತು ಗಾಯದಿಂದ ಚೇತರಿಸಿಕೊಂಡ ಬಗ್ಗೆ ವಿಚಾರಿಸಿದರು. ಮೋದಿ ಅವರು ನಿರೀಕ್ಷೆಯ ಭಾರದಿಂದ ಕುಗ್ಗದೆ ತಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡುವಂತೆ ಅವರಿಗೆ ಸಲಹೆ ಮಾಡಿದರು. ದ್ಯುತಿ ಚಂದ್ (ಸ್ಪ್ರಿಂಟ್) ಅವರೊಂದಿಗೆ ಮಾತನಾಡಿದ ಮೋದಿ ನಿಮ್ಮ ಹೆಸರಿನ ಅರ್ಥ ‘ಕಾಂತಿ’ಎಂದರು.  ತಮ್ಮ ಕ್ರೀಡಾ ಕೌಶಲ್ಯದ ಮೂಲಕ ಬೆಳಕು ಪಸರಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.

ಇಡೀ ಭಾರತವು ಕ್ರೀಡಾಪಟುಗಳ ಬೆಂಬಲಕ್ಕೆ ಇರುವುದರಿಂದ ನಿರ್ಭಯವಾಗಿ ಮುಂದೆ ಸಾಗುವಂತೆ ಪ್ರಧಾನಿ ಕೇಳಿಕೊಂಡರು. ಪ್ರಧಾನಿಯವರು ಆಶಿಶ್ ಕುಮಾರ್ (ಬಾಕ್ಸಿಂಗ್) ಅವರನ್ನು ಬಾಕ್ಸಿಂಗ್ ಆಯ್ಕೆಮಾಡಿಕೊಂಡದ್ದು ಏಕೆ ಎಂದು ಕೇಳಿದರು. ಕೋವಿಡ್-19 ರೊಂದಿಗೆ ಹೋರಾಡುತ್ತಲೇ ತರಬೇತಿಯನ್ನು ಹೇಗೆ ಪಡೆದಿರಿ ಎಂದು ಪ್ರಧಾನಿ ಕೇಳಿದರು. ತಂದೆಯನ್ನು ಕಳೆದುಕೊಂಡರೂ ತಮ್ಮ ಗುರಿಯಿಂದ ಹಿಂದೆ ಸರಿಯದಿರುವುದಕ್ಕೆ ಪ್ರಧಾನಿ ಅವರನ್ನು ಶ್ಲಾಘಿಸಿದರು. ಚೇತರಿಕೆಯ ಪ್ರಕ್ರಿಯೆಯಲ್ಲಿ ಕುಟುಂಬ ಮತ್ತು ಸ್ನೇಹಿತರ ಬೆಂಬಲವನ್ನು ಕ್ರೀಡಾಪಟು ನೆನಪಿಸಿಕೊಂಡರು. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಂದೆಯನ್ನು ಕಳೆದುಕೊಂಡ ಸಂದರ್ಭ ಮತ್ತು ಅವರು ತಮ್ಮ ಆಟದ ಮೂಲಕ ತಂದೆಗೆ ಹೇಗೆ ಗೌರವ ಸಲ್ಲಿಸಿದರು ಎಂಬುದನ್ನು ಮೋದಿ ಸ್ಮರಿಸಿಕೊಂಡರು.

ಮೇರಿ ಕೋಮ್ (ಬಾಕ್ಸಿಂಗ್) ಅನೇಕ ಕ್ರೀಡಾಪಟುಗಳಿಗೆ ಆದರ್ಶಪ್ರಾಯ ಎಂದು ಪ್ರಧಾನಿ ಶ್ಲಾಘಿಸಿದರು. ಸಾಂಕ್ರಾಮಿಕ ಸಮಯದಲ್ಲಿ ತನ್ನ ಕುಟುಂಬವನ್ನು ನೋಡಿಕೊಳ್ಳಲು ಮತ್ತು ತಮ್ಮ ಆಟವನ್ನು ಮುಂದುವರಿಸಲು ಅವರಿಗೆ ಹೇಗೆ ಸಾಧ್ಯವಾಯಿತು ಎಂದು ವಿಚಾರಿಸಿದನು. ಅವರ ನೆಚ್ಚಿನ ಪಂಚ್ ಮತ್ತು ಅವರ ನೆಚ್ಚಿನ ಆಟಗಾರನ ಬಗ್ಗೆ ಪ್ರಧಾನಿ ಕೇಳಿದರು. ಅವರಿಗೆ ಪ್ರಧಾನಿ ಶುಭ ಹಾರೈಸಿದರು. ಹೈದರಾಬಾದ್‌ನ ಗಚಿಬೌಲಿಯಲ್ಲಿ ಅವರ ಅಭ್ಯಾಸ ಹೇಗೆ ನಡೆದಿದೆ ಎಂದು ಪಿ.ವಿ ಸಿಂಧು (ಬ್ಯಾಡ್ಮಿಂಟನ್) ಅವರನ್ನು ಪ್ರಧಾನಿ ವಿಚಾರಿಸಿದರು. ಆಕೆಯ ತರಬೇತಿಯಲ್ಲಿ ಆಹಾರದ ಮಹತ್ವ ಬಗ್ಗೆಯೂ ಕೇಳಿದರು. ಪ್ರಧಾನಿಯವರು ಸಿಂಧು ಪೋಷಕರಿಗೆ ತಮ್ಮ ಮಕ್ಕಳನ್ನು ಕ್ರೀಡಾಪಟು ಮಾಡಲು ಬಯಸುವ ಪೋಷಕರಿಗೆ ಟಿಪ್ಸ್ ಮತ್ತು ಸಲಹೆಗಳನ್ನು ನೀಡುವಂತೆ ಕೇಳಿದರು. ಅವರಿಗೆ ಒಲಿಂಪಿಕ್ಸ್‌ನಲ್ಲಿ ಯಶಸ್ಸನ್ನು ಬಯಸಿದ ಪ್ರಧಾನ ಮಂತ್ರಿಯವರು, ನೀವು ಮರಳಿ ಬರುವಾಗ ನಿಮ್ಮನ್ನು ಸ್ವಾಗತಿಸುವಾಗ ತಾವೂ ಸಹ ನಿಮ್ಮೊಂದಿಗೆ ಐಸ್ ಕ್ರೀಮ್ ತಿನ್ನುವುದಾಗಿ ಹೇಳಿದರು.

ಪ್ರಧಾನಿ ಎಳವೆನಿಲ್ ವಲರಿವನ್ (ಶೂಟಿಂಗ್) ಅವರಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಏಕೆ ಎಂದು ಪ್ರಧಾನಿ ಕೇಳಿದರು. ಅಹಮದಾಬಾದ್ನಲ್ಲಿ ಬೆಳೆದ ಶೂಟರ್ ಜೊತೆ ಗುಜರಾತಿಯಲ್ಲಿ ಮಾತನಾಡಿದ ಮೋದಿ ತಮಿಳು ಭಾಷೆಯಲ್ಲಿ ಅವರ ಪೋಷಕರಿಗೆ ಶುಭಾಶಯ ಕೋರಿದರು. ತಾವು ಶಾಸಕರಾಗಿದ್ದ ಮಣಿ ನಗರದಲ್ಲಿಕನ ಅವರ ಆರಂಭಿಕ ವರ್ಷಗಳನ್ನು ನೆನಪಿಸಿಕೊಂಡರು. ಅವರು ತಮ್ಮ ಅಧ್ಯಯನ ಮತ್ತು ಕ್ರೀಡಾ ತರಬೇತಿ ಎರಡನ್ನೂ ಹೇಗೆ ಸರಿದೂಗಿಸುತ್ತಾರೆ ಎಂದು ವಿಚಾರಿಸಿದರು.

ಸೌರಭ್ ಚೌಧರಿ (ಶೂಟಿಂಗ್) ಅವರೊಂದಿಗೆ ಮಾತನಾಡಿದ ಪ್ರಧಾನಿಯವರು, ಏಕಾಗ್ರತೆ ಮತ್ತು ಮಾನಸಿಕ ಸಮತೋಲನವನ್ನು ಸುಧಾರಿಸುವಲ್ಲಿ ಯೋಗದ ಪಾತ್ರದ ಬಗ್ಗೆ ವಿವರಿಸಿದರು. ಹಿಂದಿನ ಮತ್ತು ಈ ಒಲಿಂಪಿಕ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಹಿರಿಯ ಆಟಗಾರ ಶರತ್ ಕಮಲ್ (ಟೇಬಲ್ ಟೆನಿಸ್) ಅವರನ್ನು ಪ್ರಧಾನಿ ಕೇಳಿದರು. ಅವರ ಅಪಾರ ಅನುಭವವು ಇಡೀ ತಂಡಕ್ಕೆ ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.

ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರನ್ನು ಬಡ ಮಕ್ಕಳಿಗೆ ಕ್ರೀಡೆಯಲ್ಲಿ ತರಬೇತಿ ನೀಡಿದ್ದಕ್ಕಾಗಿ ಪ್ರಧಾನಿ ಪ್ರಶಂಸಿಸಿದರು. ಆಡುವಾಗ ಅವರು ಕೈಯಲ್ಲಿ ತ್ರಿವರ್ಣ ಧರಿಸುವ ಅಭ್ಯಾಸದ ಬಗ್ಗೆ ಪ್ರಧಾನಿ ಶ್ಲಾಘಿಸಿದರು. ನೃತ್ಯದ ಬಗೆಗಿನ ತಮ್ಮ ಉತ್ಸಾಹವು ಕ್ರೀಡೆಗಳಲ್ಲಿ ಒತ್ತಡ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ಅವರು ಕೇಳಿದರು.

ತಮ್ಮ ಕುಟುಂಬ ಪರಂಪರೆಯಿಂದಾಗಿ ಹೆಚ್ಚಿರುವ ನಿರೀಕ್ಷೆಗಳನ್ನು ಹೇಗೆ ನಿಭಾಯಿಸುತ್ತೀರಿ ಎಂದು ವಿನೇಶ್ ಫೋಗಟ್ (ಕುಸ್ತಿ)  ಅವರಿಗೆ ಪ್ರಧಾನಿ ಕೇಳಿದರು. ಸವಾಲುಗಳನ್ನು ಹೇಗೆ ಎದುರಿಸುತ್ತೀರಿ ಎಂದು ಪ್ರಧಾನಿ ಅವರಿಗೆ ಕೇಳಿದರು. ಪ್ರಧಾನಿಯವರು  ವಿನೇಶ್ ತಂದೆಯೊಂದಿಗೆ ಮಾತಾಡಿದರು ಮತ್ತು ಅಂತಹ ಹೆಣ್ಣುಮಕ್ಕಳನ್ನು ಬೆಳೆಸಿದ ವಿಧಾನಗಳ ಬಗ್ಗೆ ಕೇಳಿದರು. ಸಾಜನ್ ಪ್ರಕಾಶ್ (ಈಜು) ಅವರ ಗಂಭೀರ ಗಾಯದ ಬಗ್ಗೆ ಮತ್ತು ಅದನ್ನು ಜಯಿಸಿದ ಬಗ್ಗೆ ಪ್ರಧಾನಿ ವಿಚಾರಿಸಿದರು.

ಮನ್‌ಪ್ರೀತ್ ಸಿಂಗ್ (ಹಾಕಿ) ಅವರೊಂದಿಗೆ ಮಾತನಾಡುತ್ತಾ, ನಿಮ್ಮೊಂದಿಗೆ ಮಾತನಾಡುವುದು ಮೇಜರ್ ಧ್ಯಾನ್ ಚಂದ್ ಅವರಂತಹ ಹಾಕಿ ದಂತಕಥೆಗಳನ್ನು ನೆನಪಿಸುತ್ತದೆ ಮತ್ತು ನಿಮ್ಮ ತಂಡವು ಹಾಕಿ ಪರಂಪರೆಯನ್ನು ಜೀವಂತವಾಗಿರಿಸುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಸಾನಿಯಾ ಮಿರ್ಜಾ (ಟೆನಿಸ್) ಅವರೊಂದಿಗೆ, ಟೆನಿಸ್ ಕ್ರೀಡೆಯ ಹೆಚ್ಚುತ್ತಿರುವ ಜನಪ್ರಿಯತೆ ಬಗ್ಗೆ ಪ್ರಧಾನಿ ಮಾತನಾಡಿದರು. ಹೊಸ ಆಕಾಂಕ್ಷಿಗಳಿಗೆ ಸಲಹೆ ನೀಡುವಂತೆ ಹಿರಿಯ ಆಟಗಾರ್ತಿಗೆ ಕೇಳಿದರು. ಟೆನಿಸ್‌ನಲ್ಲಿ ತನ್ನ ಸಹ ಆಟಗಾರರೊಂದಿಗಿನ ಸಮೀಕರಣದ ಬಗ್ಗೆಯೂ ವಿಚಾರಿಸಿದರು. ಕಳೆದ 5-6 ವರ್ಷಗಳಲ್ಲಿ ಅವರು ಕ್ರೀಡೆಯಲ್ಲಿ ಕಂಡಿರುವ ಬದಲಾವಣೆಯ ಬಗ್ಗೆ ಕೇಳಿದರು. ಇತ್ತೀಚಿನ ವರ್ಷಗಳಲ್ಲಿ ಭಾರತವು ಆತ್ಮ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಮತ್ತು ಅದು ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಾನಿಯಾ ಮಿರ್ಜಾ ಹೇಳಿದರು.

ಭಾರತೀಯ ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡುವಾಗ, ಸಾಂಕ್ರಾಮಿಕ ರೋಗದಿಂದಾಗಿ ಕ್ರೀಡಾಪಟುಗಳಿಗೆ ಆತಿಥ್ಯ ನೀಡಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ವಿಷಾದಿಸಿದರು. ಸಾಂಕ್ರಾಮಿಕ ರೋಗವು ಒಲಿಂಪಿಕ್ಸ್ ವರ್ಷದಲ್ಲಿಯೂ ಅವರ ಅಭ್ಯಾಸವನ್ನು ಬದಲಿಸಿದೆ ಎಂದು ಅವರು ಹೇಳಿದರು. ಒಲಿಂಪಿಕ್ಸ್‌ನಲ್ಲಿ ತಮ್ಮ ಕ್ರೀಡಾಪಟುಗಳಿಗೆ ಹುರಿದುಂಬಿಸುವಂತೆ ನಾಗರಿಕರಿಗೆ ಸೂಚಿಸಿದ ತಮ್ಮ ಮನ್ ಕಿ ಬಾತ್ ಭಾಷಣವನ್ನು ಅವರು ನೆನಪಿಸಿಕೊಂಡರು. ಅವರು #Cheer4India ದ ಜನಪ್ರಿಯತೆಯನ್ನು ಗಮನಿಸಿದರು.

ಇಡೀ ದೇಶ ಕ್ರೀಡಾಪಟುಗಳ ಹಿಂದೆ ಇದೆ ಮತ್ತು ಎಲ್ಲಾ ದೇಶವಾಸಿಗಳ ಆಶೀರ್ವಾದ ಅವರಿಗಿದೆ ಎಂದು ಹೇಳಿದರು. ಸಾರ್ವಜನಿಕರು ನಮೋ (NaMo) ಅಪ್ಲಿಕೇಶನ್‌ಗೆ ಲಾಗಿನ್ ಆಗಬಹುದು ಮತ್ತು ಕ್ರೀಡಾಪಟುಗಳಿಗೆ ಹುರಿದುಂಬಿಸಬಹುದು. “135 ಕೋಟಿ ಭಾರತೀಯರ ಈ ಶುಭಾಶಯಗಳು ಕ್ರೀಡಾಂಗಣವನ್ನು ಪ್ರವೇಶಿಸುವ ಮೊದಲು ನಿಮ್ಮೆಲ್ಲರಿಗೂ ದೇಶದ ಆಶೀರ್ವಾದವಾಗಿದೆ” ಎಂದು ಪ್ರಧಾನಿ ಹೇಳಿದರು.

ಕ್ರೀಡಾಪಟುಗಳಲ್ಲಿ ಸಾಮಾನ್ಯ ಗುಣಲಕ್ಷಣಗಳಾದ ದಿಟ್ಟತನ, ಆತ್ಮವಿಶ್ವಾಸ ಮತ್ತು ಧನಾತ್ಮಕತೆಯ ಬಗ್ಗೆ ಪ್ರಧಾನಿ ಮಾತನಾಡಿದರು. ಎಲ್ಲಾ ಕ್ರೀಡಾಪಟುಗಳಿಗೆ ಶಿಸ್ತು, ಸಮರ್ಪಣೆ ಮತ್ತು ದೃಢತೆಯ ಸಾಮಾನ್ಯ ಅಂಶಗಳಿವೆ ಎಂದು ಅವರು ಹೇಳಿದರು. ಕ್ರೀಡಾಪಟುಗಳಲ್ಲಿ  ಬದ್ಧತೆ ಮತ್ತು ಸ್ಪರ್ಧಾತ್ಮಕತೆ ಎರಡೂ ಇರುತ್ತವೆ ಎಂದು ಪ್ರಧಾನಿ ತಿಳಿಸಿದರು. ಅದೇ ಗುಣಗಳು ನವ ಭಾರತದಲ್ಲಿ ಕಂಡುಬರುತ್ತಿವೆ. ಕ್ರೀಡಾಪಟುಗಳು ನವಭಾರತವನ್ನು ಪ್ರತಿಬಿಂಬಿಸುತ್ತಾರೆ ಮತ್ತು ರಾಷ್ಟ್ರದ ಭವಿಷ್ಯವನ್ನು ಸಂಕೇತಿಸುತ್ತಾರೆ ಎಂದು ಪ್ರಧಾನಿ ಹೇಳಿದರು.

ಹೊಸ ಚಿಂತನೆ ಮತ್ತು ಹೊಸ ವಿಧಾನದೊಂದಿಗೆ ದೇಶವು ಇಂದು ಪ್ರತಿಯೊಬ್ಬ ಆಟಗಾರರ ಬೆಂಬಲಕ್ಕೆ ಹೇಗೆ ನಿಂತಿದೆ ಎಂಬುದಕ್ಕೆ ಎಲ್ಲಾ ಕ್ರೀಡಾಪಟುಗಳು ಸಾಕ್ಷಿಯಾಗಿದ್ದಾರೆ ಎಂದು ಅವರು ಹೇಳಿದರು. ಇಂದು ನಿಮ್ಮ ಪ್ರೇರಣೆ ದೇಶಕ್ಕೆ ಮುಖ್ಯವಾಗಿದೆ. ಕ್ರೀಡಾಪಟುಗಳು ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಮುಕ್ತವಾಗಿ ಆಡಲು ಮತ್ತು ಅವರ ಆಟ ಮತ್ತು ತಂತ್ರವನ್ನು ಸುಧಾರಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಕ್ರೀಡಾಪಟುಗಳನ್ನು ಬೆಂಬಲಿಸಲು ಇತ್ತೀಚಿನ ವರ್ಷಗಳಲ್ಲಿ ತಂದಿರುವ ಬದಲಾವಣೆಗಳ ಬಗ್ಗೆ ಪ್ರಧಾನಿ ತಿಳಿಸಿದರು.

ಆಟಗಾರರಿಗೆ ಉತ್ತಮ ತರಬೇತಿ ಶಿಬಿರಗಳು ಮತ್ತು ಉತ್ತಮ ಉಪಕರಣಗಳನ್ನು ಒದಗಿಸಲು ಪ್ರಯತ್ನಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಇಂದು, ಆಟಗಾರರಿಗೆ ಹೆಚ್ಚಿನ ಅಂತರರಾಷ್ಟ್ರೀಯ  ವೇದಿಕೆ ಕಲ್ಪಿಸಲಾಗುತ್ತಿದೆ. ಕ್ರೀಡಾ ಸಂಸ್ಥೆಗಳು ಕ್ರೀಡಾಪಟುಗಳ ಸಲಹೆಗಳಿಗೆ ಆದ್ಯತೆ ನೀಡಿರುವುದರಿಂದ ಇಷ್ಟು ಕಡಿಮೆ ಸಮಯದಲ್ಲಿ ಹಲವು ಬದಲಾವಣೆಗಳು ಸಂಭವಿಸಿವೆ ಎಂದು ಅವರು ಹೇಳಿದರು.

ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ಆಟಗಾರರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ ಎಂದು ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ‘ಫಿಟ್ ಇಂಡಿಯಾ, ‘ಖೇಲೋ ಇಂಡಿಯಾ’ಮುಂತಾದ ಅಭಿಯಾನಗಳು ಇದಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು. ಮೊದಲ ಬಾರಿಗೆ ಭಾರತದ ಆಟಗಾರರು ಹೆಚ್ಚು ಪ್ರಕಾರದ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಭಾರತವು ಮೊದಲ ಬಾರಿಗೆ ಅರ್ಹತೆ ಪಡೆದ ಅನೇಕ ಕ್ರೀಡೆಗಳಿವೆ ಎಂದು ಅವರು ಹೇಳಿದರು.

ಯುವ ಭಾರತದ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ನೋಡಿದಾಗ, ಗೆಲುವು ಮಾತ್ರ ನವ ಭಾರತದ ಅಭ್ಯಾಸವಾಗಿ ಪರಿಣಮಿಸುವ ದಿನಗಳು ದೂರವಿಲ್ಲ ಎಂದು ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದರು. ಆಟಗಾರರು ಅತ್ಯುತ್ತಮವಾದದ್ದನ್ನು ನೀಡುವಂತೆ ಸಲಹೆ ನೀಡಿದರು ಮತ್ತು ದೇಶವಾಸಿಗಳು ಭಾರತ ತಂಡವನ್ನು ಹುರಿದುಂಬಿಸುವಂತೆ (Cheer4India) ಮನವಿ ಮಾಡಿದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಸೋಮವಾರ ಅಂತಿಮ ಕಣದಲ್ಲಿ ‘ಎ’ ತರಗತಿಯಿಂದ 9, ‘ಬಿ’ ತರಗತಿಯಿಂದ 19 ಜನ ಉಳಿದಿದ್ದಾರೆ.

[ccc_my_favorite_select_button post_id="115412"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ (Accident) ಉಂಟಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ

[ccc_my_favorite_select_button post_id="115379"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!