ಬೆಂ.ಗ್ರಾ.ಜಿಲ್ಲೆ: ಹಿಂದು ಜಾಗರಣ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು ಮತ್ತು ಎಲ್ಲಾ ಹೋಬಳಿ ಘಟಕಗಳ ಉದ್ಘಾಟನೆ ಮತ್ತು ಹೊಸ ಜವಾಬ್ದಾರಿ ಘೋಷಣೆ ಮಾಡಿದೆ.
ಹೊಸಕೋಟೆ ನಗರದ ಹೆಚ್.ಕೆ.ಐ.ರಾಧಾ ಕಲ್ಯಾಣ ಮಂಟಪದಲ್ಲಿ ನಡೆದ ಸರಳ ಸಮಾರಂಭದಲ್ಲಿ, ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕಿನ ಮತ್ತು ಹೋಬಳಿ ಮಟ್ಟದ ಘಟಕಗಳ ಉದ್ಘಾಟನೆ ಮಾಡಲಾಯಿತು.
ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾದ್ಯಕ್ಷರಾಗಿ ದೀಪಕ್ ಕುಮಾರ್ ಜೈನ್, ಜಿಲ್ಲಾ ಖಜಾಂಚಿಯಾಗಿ ಲಕ್ಷ್ಮಿನಾರಾಯಣ್, ಕಾರ್ಯದರ್ಶಿಯಾಗಿ ದೇವನಹಳ್ಳಿ ಪ್ರಶಾಂತ್, ನೆಲಮಂಗಲ ನ್ಯಾಯ ಜಾಗರಣದ ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಮುನಿರಾಮಯ್ಯ ಬೆತ್ತನಗೆರೆ, ದೊಡ್ಡಬಳ್ಳಾಪುರ ತಾಲೂಕು ಪ್ರಚಾರ ಪ್ರಮುಖರಾಗಿ ಗುಣಸಾಗರ್, ಹೊಸಕೋಟೆ ಪ್ರಧಾನ ಕಾರ್ಯದರ್ಶಿಯಾಗಿ ಶಿವು ಆರಾಧ್ಯ, ದೇವನಹಳ್ಳಿ ಸಂಪರ್ಕ ಪ್ರಮುಖರಾಗಿ ಸುಭ್ರಮಣಿರವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಪ್ರಾಂತ ಕಾರ್ಯದರ್ಶಿ ದೋ.ಕೇಶವಮೂರ್ತಿ, ಜಿಲ್ಲಾದ್ಯಕ್ಷ ನಂದಾರಾಂಸಿಂಗ್, ಪ್ರಧಾನ ಕಾರ್ಯದರ್ಶಿಗಳಾದ ದೊಡ್ಡತುಮಕೂರು ಆನಂದ್, ನೆಲಮಂಗಲ ಮಂಜು ಮತ್ತು ಹೇಮಂತ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..