ದೊಡ್ಡಬಳ್ಳಾಪುರ: ಕೋವಿಡ್ ನಿರ್ಬಂಧಗಳ ಸಂಪೂರ್ಣ ತೆರಿವಿನ ನಂತರ ಬಂದಿರುವ ನವರಾತ್ರಿ ರಜೆಯ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲೆಡೆಯ ದೇವಾಲಯಗಳು ಭಕ್ತರಿಂದ ತುಂಬಿ ಹೋಗಿದ್ದು ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥವಾಗಿದ್ದು, ದೇವಾಲಯಗಳಿಗೆ ಬಂದಿದ್ದ ಭಕ್ತಾದಿಗಳ ವಾಹನಗಳು ರಸ್ತೆಯಲ್ಲೇ ಗಂಟೆಗಟ್ಟೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಉಂಟಾಗಿತ್ತು.
ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಹಲವಾರು ಕೈಗಾರಿಕೆಗಳಿಗೆ ರಜೆ ನೀಡಲಾಗಿದೆ. ಇದೇ ರೀತಿ ಸರ್ಕಾರಿ ನೌಕರರು ಸಹ ಶನಿವಾರ ಒಂದು ದಿನ ವಯಕ್ತಿಕ ರಜೆಗಳನ್ನು ಪಡೆದರೆ ಸಾಲು ಸಾಲು ರಜೆಗಳು ಬಂದಿವೆ. ಈ ಎಲ್ಲಾ ಕಾರಣಗಳಿಂದಾಗಿ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಿಂದಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದಲ್ಲದೆ ದೇವರ ದರ್ಶನಕ್ಕು ಸಾಲುಗಟ್ಟಿ ನಿಲ್ಲುವಂತಾಗಿತ್ತು.
ನೆಲಮಂಗಲ-ದೊಡ್ಡಬಳ್ಳಾಪುರ ರಸ್ತೆಯ ಕನಸವಾಡಿಯಲ್ಲಿನ ಶನಿಮಹಾತ್ಮಸ್ವಾಮಿ ದೇವಾಲಯಕ್ಕು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರ ಆಗಮಿಸಿದ್ದರಿಂದ ನೆಲಮಂಗಲ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ವಾಹನಗಳು ಮುಂದೆ ಹೋಗಲು ಸಾಧ್ಯವಾಗದೆ ಒಂದು ಗಂಟೆಗೂ ಹೆಚ್ಚು ಸಮಯ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.
ಗ್ರಾಹಕರಿಂದ ತುಂಬಿದ ಹೋಟೆಲ್ ಗಳು: ಎರಡು ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ನಗರದ ಹೊರಭಾಗದಲ್ಲಿನ ಪ್ರಮುಖ ಹೋಟೆಲ್ಗಳಲ್ಲಿ ಸ್ಥಳೀಯರಷ್ಟೇ ಅಲ್ಲದೆ ಹೊರಗಿನ ಗ್ರಾಹಕರು ಸಹ ಹೋಟೆಲ್ಗಳಿಗೆ ಬಂದಿದ್ದರಿಂದಾಗಿ ಕಾಫಿ ಕುಡಿಯಲು ಸಾಲುಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…