ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಡಿವೈಎಸ್ಪಿ ಟಿ.ರಂಗಪ್ಪರ ಮಡದಿ ರಶ್ಮಿ ರಂಗಪ್ಪ ಮಿಸಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಎಂಟು ಸುತ್ತಿನಲ್ಲಿ ಸಾಧನೆ ಮಾಡಿದ ರಶ್ಮಿ ರಂಗಪ್ಪ ಮಿಸಸ್ ಇಂಡಿಯಾ ಐ ಯಾಮ್ ಪವರ್ ಫುಲ್ ಪ್ರಶಸ್ತಿ ಪಡೆದಿದ್ದು ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ರಶ್ಮಿ ಅವರ ಪತಿ ಟಿ.ರಂಗಪ್ಪ ಅವರು ದೊಡ್ಡಬಳ್ಳಾಪುರದಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದು , ಹಿರಿಯ ಮಗಳ ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಾರೆ. ಎರಡನೇ ಮಗಳ ಐದನೇ ತರಗತಿ.
ಸಮೃದ್ಧ ಸಂಸಾರದ ಭಾರ ಹೊತ್ತ ರಶ್ಮಿರಂಗಪ್ಪ ಅವರು ತಾನು ಎನಾದ್ರು ಸಾಧನೆ ಮಾಡಬೇಕೆಂಬ ಹಠ ಮಾತ್ರ ಬಿಟ್ಟಿರಲಿಲ್ಲ. ಇದೇ ಹಠ ಅವರನ್ನ ದೇಶವೇ ತನ್ನತ್ತ ನೋಡುವಂತೆ ಮಾಡಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದ ರಶ್ಮಿರಂಗಪ್ಪ ಶಿವಣಿ ಗ್ರಾಮದ ಅಪ್ಪಟ ರೈತನ ಮಗಳು.
ಹುಟ್ಟಿನಿಂದಲೇ ಸೌಂದರ್ಯವತಿ ಆಗಿರುವ ರಶ್ಮಿ ಶಿವಮೊಗ್ಗಾದ ಸಹ್ಯಾದ್ರಿ ಕಾಲೇಜ್ನಲ್ಲಿ ಬಿಕಾಂ ಮುಗಿಸಿದ್ದಾರೆ. ಇಷ್ಟರಲ್ಲಿಯೇ 2004ರಲ್ಲಿ ಪೊಲೀಸ್ ಅಧಿಕಾರಿ ರಂಗಪ್ಪ ಜೊತೆ ವಿವಾಹವಾಯಿತು. ವಿವಾಹದ ಬಳಿಕ ಹತ್ತಾರು ಕಡೆ ಪತಿಯ ವರ್ಗಾವಣೆ ಕಾರಣಕ್ಕೆ ಸುತ್ತಾಟ ನಡುವೆಯೂ ಈ ಸಾಧನೆ ಮಾಡಿದ್ದಾರೆ.
ರಶ್ಮಿ ರಂಗಪ್ಪ ಬಹುತೇಕ ಟಿವಿ ಶೋಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದರು. ಈ ವೇಳೆ ಸ್ಪರ್ಧೆಗಳ ನಡೆಸುವ ನಂದಿನಿ ನಾಗರಾಜ್ ಅವರ ಪರಿಚಯವಾಗಿತ್ತು. ಮನೆ ನಿರ್ವಹಣೆ ಮಾಡುತ್ತಿದ್ದ ರಶ್ಮಿ ರಂಗಪ್ಪರಿಗೆ ಮಿಸೆಸ್ ಇಂಡಿಯಾ ಐಆಮ್ ಫಾವರ್ ಫುಲ್ ಸ್ಪರ್ಧೆ ಬಗ್ಗೆ ಗೊತ್ತಾಯಿತು. ಇದಕ್ಕಾಗಿ ನಿರಂತರ ಪ್ರಯತ್ನ ಮಾಡಿದ್ರು. ನಿರೀಕ್ಷೆಯಂತೆ ಎಂಟು ಸುತ್ತುಗಳಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಇದು ವಿಶೇಷವಾಗಿ ಗೃಹಿಣಿಯರಿಗೆ ಮಾತ್ರವೇ ನಡೆಯುವ ಸ್ಪರ್ಧೆ. ವಯಸ್ಸಿನ ಮಿತಿ ಇಲ್ಲಾ. ಆದ್ರೆ ರಾಷ್ಟ್ರೀಯ ಸ್ಪರ್ಧೆಗೆ ಹೋಗುವ ಬಗ್ಗೆ ರಶ್ಮಿ ಅವರು ಹೆಚ್ಚು ಗಮನ ಹರಿಸಲಿಲ್ಲ. ಆದರೆ ಗೆಳೆತಿಯರು ಸಂಬಂಧಿಕರು ಒತ್ತಾಯದ ಕಾರಣ ಸ್ಪರ್ಧೆಗೆ ಕೇವಲ ಹತ್ತು ದಿನ ಇರುವಾಗಲೇ ತಯಾರಿ ನಡೆಸಿ ಈಗ ಪ್ರಶಸ್ತಿ ಗೆದ್ದಿದ್ದಾರೆ.
ಜೈಪುರದಲ್ಲಿ ನಡೆದ ರಾಷ್ಟ್ರೀಯ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವ್ಯಕ್ತಿತ್ವ, ಸಾಮಾನ್ಯ ಜ್ಞಾನ, ವಿಭಿನ್ನ ಶೈಲಿಯ ವಾಕ್, ರಾಪ್ ವಾಕ್, ಈಜುವುದು, ಯೋಗ ಹೀಗೆ ಎಂಟು ಸುತ್ತುಗಳಿದ್ದವು. ಪ್ರತಿಯೊಂದು ರಾಜ್ಯದಿಂದ ಸ್ಪರ್ಧಿಗಳು ಆಗಮಿಸಿದ್ದರು. ಇಂತಹ ತುರುಸಿನ ಸ್ಪರ್ಧೆಯಲ್ಲಿ ರಶ್ಮಿ ರಂಗಪ್ಪ ಜಯದ ಮಾಲೆ ಧರಿಸಿದ್ದಾರೆ.
ಮದುವೆ ಆಯಿತು ಎಂದರೆ ಜೀವನ ಮುಗಿಯಿತು ಎನ್ನುವ ಮಹಿಳೆಯರಿಗೆ ರಶ್ಮಿ ರಂಗಪ್ಪ ಒಂದು ರೀತಿಯಲ್ಲಿ ಸ್ಪೂರ್ತಿಯಾಗಿದ್ದಾರೆ. ಬರುವ ಮಾರ್ಚ್, ಎಪ್ರೀಲ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಮಿಸೆಸ್ ಇಂಡಿಯಾ ಐಎಮ್ ಫಾವರ್ ಫುಲ್ ಸ್ಪರ್ಧೆ ಸಿಂಗಪೂರನಲ್ಲಿ ನಡೆಯುತ್ತಿದೆ. ಇದು ಜಾಗತಿಕ ಮಟ್ಟದ ಸ್ಪರ್ಧೆ ಆದ ಹಿನ್ನೆಲೆ ಇನ್ನಷ್ಟು ಸವಾಲುಗಳು ಎದುರಿಸಬೇಕಾಗುತ್ತಿದೆ. ಇದಕ್ಕಾಗಿ ರಶ್ಮಿ ರಂಗಪ್ಪ ತಾಲೀಮು ಆರಂಭಿಸಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….