ದೊಡ್ಡಬಳ್ಳಾಪುರ: ನಗರದ ಜೆಡಿಎಸ್ ಕಚೇರಿ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಜೆಡಿಎಸ್ ಕಚೇರಿ: ಬಸವ ಭವನ ಸಮೀಪವಿರುವ ಜೆಡಿಎಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ಮುಖಂಡರಾದ ದೇವರಾಜಮ್ಮ, ಶಿವಕುಮಾರ್, ರವಿಕುಮಾರ್, ಕೆಂಪರಾಜ್, ಅಶ್ವಥ್ ಮತ್ತಿತರರಿದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ನಗರದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಎನ್.ಶ್ರೀನಿವಾಸಯ್ಯ ಮಾತನಾಡಿ, ರಾಮಾಯಣದ ಪಾತ್ರಗಳು ಸತ್ಯ, ಕರುಣೆ, ತ್ಯಾಗ, ಪ್ರೀತಿಯ ಪ್ರತೀಕಗಳಾಗಿವೆ. ರಾಮಾಯಣದಲ್ಲಿನ ಬದುಕಿನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೂಲಕ ಜಗತ್ತಿಗೆ ಕೊಟ್ಟಿರುವ ಉನ್ನತ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಆಗ ವಾಲ್ಮೀಕಿ ಜಯಂತಿ ಮತ್ತಷ್ಟು ಅರ್ಥಪೂರ್ಣವಾಗುತ್ತದೆ. ವಿಶ್ವದ ಏಕತೆ ಹಾಗೂ ಸಮಗ್ರತೆಯನ್ನು ಬಲಗೊಳಿಸುವ ಅಂಶಗಳು ರಾಮಾಯಣದ ಕೃತಿಯಲ್ಲಿವೆ. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಬೇಕು ಎಂಬುದು ರಾಮನ ಆದರ್ಶ ರಾಜ್ಯದ ಪರಿಕಲ್ಪನೆಯಾಗಿತ್ತು ಎಂದು ಹೇಳಿದರು.
ಪ್ರಾಧ್ಯಾಪಕರಾದ ಸಿ.ರಾಮಚಂದ್ರ, ನರಸಿಂಹಮೂರ್ತಿ, ದಿನಕರ್, ಎಸ್.ರಾಜೇಶ್, ಸತೀಶ್, ಸಂಧ್ಯಾರಾಣಿ, ಶೈಲಾ, ಶ್ರೀನಿವಾಸ್ ಉಪಸ್ಥಿತರಿದ್ದರು.
ಅರವಿಂದ ವಿದ್ಯಾಸಂಸ್ಥೆ: ನಗರದ ಶ್ರೀ ಅರವಿಂದ ವಿದ್ಯಾಸಂಸ್ಥೆ ಯಲ್ಲಿ. ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಸಂಸ್ಥೆಯ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ ಮಹರ್ಷಿ ವಾಲ್ಮೀಕಿಯವರು ಬೇಡನಾಗಿದ್ದು ಮಹರ್ಷಿಯಾದರು. ಇವರ ಜೀವನ ಗಾಥೆ ಕೆಲ ಸಮುದಾಯದವರು ಮುಖ್ಯವಾಹಿನಿಗೆ ಬರಲು ಪ್ರೇರಣೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಡಿ.ಕೆ.ವೆಂಕಪ್ಪ, ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಮುಖ್ಯ ಶಿಕ್ಷಕಿಯರಾದ ಅಶ್ರಫ್ ಉನ್ನೀಸಾ ಫರೀದಾ ಸಿಬ್ಬಂದಿ ವರ್ಗದವರಾದ ಬಾಗ್ಯಮ್ಮ ಸರ್ವಮಂಗಳ, ತುಳಸಿ, ಸುದರ್ಶನ್, ವಸಂತರಾಜು ಹರೀಶ್ ರಾಮಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……