ದೊಡ್ಡಬಳ್ಳಾಪುರ: ಕೊಟ್ಟಿಗೆಮಾಚೇನಹಳ್ಳಿ ಗ್ರಾಮದ ಸಂಪರ್ಕ ಸೇತುವೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಮತ್ತೆ ಕುಸಿದು ಬಿದ್ದು, ಈ ವ್ಯಾಪ್ತಿಯ ಸಂಪರ್ಕ ಕಡಿತಗೊಂಡಿದೆ. ಆ ಮೂಲಕ ಈ ವ್ಯಾಪ್ತಿಯ ಗ್ರಾಮಸ್ಥರ ಬಹು ವರ್ಷಗಳ ಸಮಸ್ಯೆ ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳಂತು ಕಂಡುಬರುತ್ತಿಲ್ಲ.
ಸತತ ನಾಲ್ಕು ವರ್ಷಗಳಿಂದ ಗ್ರಾಮಕ್ಕೆ ಶಾಶ್ವತ ಸಂಪರ್ಕ ಸೇತುವೆಗಾಗಿ ಮನವಿ ಸಲ್ಲಿಸಿದರು ಅಧಿಕಾರಿಗಳಾಗಲಿ, ಜನಪ್ರತಿನಿದಿಗಳಾಗಲಿ ಸ್ಪಂದಿಸದಿರುವುದು ಗ್ರಾಮಸ್ಥರ ತಾಳ್ಮೆಯನ್ನು ಕೆಡಿಸಿದೆ.
ಹೊಸಹಳ್ಳಿ-ಕೊಟ್ಟಿಗೆಮಾಚೇನಹಳ್ಳಿ ನಡುವಿನ ಸಂಪರ್ಕ ಸೇತುವೆ. 2017ರಲ್ಲಿ ಸುರಿದ ಮಳೆಗೆ ಈ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಕೊಚ್ಚಿಹೊಗಿತ್ತು.
ಕೊಟ್ಟಿಗೆಮಾಚೇಹಳ್ಳಿ, ಕುಕ್ಕಲಹಳ್ಳಿ, ಬ್ಯಾಡರಹಳ್ಳಿ ಗ್ರಾಮಗಳ ಎರಡು ಸಾವಿರ ಜನಸಂಖ್ಯೆಗೆ ಈ ಸೇತುವೆಯೆ ಇತರ ಗ್ರಾಮಕ್ಕೆ ಸಂಪರ್ಕ ಸೇತುವೆ. ಆದರೆ ನಾಲ್ಕು ವರ್ಷಗಳಿಂದ ಸೇತುವೆ ನಿರ್ಮಿಸದೆ ತಾತ್ಕಾಲಿಕ ಸೇತುವೆ ನಿರ್ಮಿಸುತ್ತಾರೆ. ಆದರೆ ಮಳೆಗೆ ಅದು ಕುಸಿದಾಗ ಮೊಸಳೆ ಕಣ್ಣಿರು, ಆರೋಪ ಪ್ರತ್ಯಾರೋಪ ಮಾಡುವವರು ಬಿಟ್ಟರೆ. ಈ ಗ್ರಾಮಗಳಿಗೆ ಶಾಶ್ವತ ಸೇತುವೆ ನಿರ್ಮಿಸಲು ಯಾರೋಬ್ಬರು ಕಾಳಜಿ ತೋರುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಶುಕ್ರವಾರ ಸುರಿದ ಮಳೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿದಿದ್ದು ಗ್ರಾಮಕ್ಕೆ ಬಂದಿದ್ದ ಸಾರಿಗೆ ಬಸ್ ಅಲ್ಲಿಯೆ ಉಳಿಯುವಂತಾಗಿದೆ. ಇದರಿಂದಾಗಿ ಶಾಲೆ, ಕಾಲೇಜು, ಕಚೇರಿಗೆ ತೆರಳುವವರಿಗೆ ಸಾರಿಗೆ ವ್ಯವಸ್ಥೆ ಇಲ್ಲದೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಇನ್ನು ಈ ಸೇತುವೆ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಸಲ್ಲಿಸಿದರೆ..ಸರ್ಕಾರ ಅನುದಾನ ನೀಡುತ್ತಿಲ್ಲ ಬನ್ನಿ ಎಲ್ಲರೂ ಸೇರಿ ಪ್ರತಿಭಟನೆಗೆ ಮಾಡೋಣ ಎನ್ನುತ್ತಾರೆಂದು ಗ್ರಾಪಂ ಸದಸ್ಯ ಆನಂದ್ ಅಳಲು ತೋಡಿಕೊಂಡಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ………