ದೊಡ್ಡಬಳ್ಳಾಪುರ: ನಗರದ ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್ ಎಲ್ ಜಾಲಪ್ಪ ಶಿಕ್ಷಣ ಸಂಸ್ಥೆಯಿಂದ “ವಿಶ್ವ ಶಾಂತಿಗಾಗಿ ನಾವೆಲ್ಲರೂ ಜೋತೆಗೂಡಿದ್ದೇವೆ” ಎಂಬ ವಿಷಯದ ಕುರಿತು ಭಿತ್ತಿಪತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ತಾಲ್ಲೂಕಿನ 9 ಶಾಲೆಗಳ ಒಟ್ಟು 66 ವಿದ್ಯಾರ್ಥಿಗಳು ಬಾಗವಹಿಸಿದ್ದರು.
“ವಿಶ್ವ ಶಾಂತಿಗಾಗಿ ನಾವೆಲ್ಲರೂ ಜೋತೆಗೂಡಿದ್ದೇವೆ” ಎಂಬ ವಿಷಯದ ಕುರಿತು ಶಾಲಾ ಮಕ್ಕಳು ತಮ್ಮ ಭಾವನೆಗಳನ್ನು ಚಿತ್ರ ಬಿಡಿಸುವ ಮೂಲಕ ವ್ಯಕ್ತಪಡಿಸಿದರು.
ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಸರಸ್ವತಿ ಶಾಲೆಯ ವರ್ಷ ಬಿಂದು.ಎನ್, ಎರಡನೇ ಬಹುಮಾನವನ್ನು ಜ್ಞಾನಗಂಗ ಇಂಗ್ಲಿಷ್ ಶಾಲೆಯ ಆಶಾ.ಆರ್, ತೃತೀಯ ಬಹುಮಾನವನ್ನು ಜ್ಞಾನಗಂಗಾ ಕನ್ನಡ ಶಾಲೆಯ ಕೀರ್ತನ.ಕೆ.ಎಸ್ ಹಾಗೂ ಸಮಾಧಾನಕರ ಬಹುಮಾನವನ್ನು ಜ್ಞಾನಗಂಗಾ ಇಂಗ್ಲಿಷ್ ಶಾಲೆಯ ಚಂದ್ರಕಲಾ.ಆರ್, ಮತ್ತು ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಪ್ರೌಢಶಾಲೆಯ ರಮ್ಯ.ಆರ್ ಪಡೆದುಕೊಂಡರು.
ಸ್ಪರ್ಧೆಯನ್ನು ಮುಖ್ಯ ಅಥಿತಿಗಳಾದ ಲಯನ್ ಶಾಶಾ ಕುಲೋತ್ತುಂಗನ್ ಉದ್ಘಾಟಿಸಿದರು. ತೀರ್ಪುಗಾರರಾಗಿ ಜಲವರ್ಣ ಕಲಾವಿದೆ ಎ.ವಿ.ಸೌಮ್ಯ, ಸಹಾಯಕ ಪ್ರಾಧ್ಯಾಪಕಿ ನಿಶಾಂತ್ ಸುಲ್ತಾನಾ ಸ್ಪರ್ಧೆಯ ತೀರ್ಪು ನೀಡಿದರು.
ಶ್ರೀ ದೇವರಾಜ್ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ದೇವಿಕಾರಾಣಿ, ಆರ್ ಎಲ್ ಜಾಲಪ್ಪ ಶಿಕ್ಷಣ ಸಂಸ್ಥೆಯ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಸಂಸ್ಥಾಪಕ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ಕಾರ್ಯದರ್ಶಿ ಕೆ.ಎಂ.ಮುನಿರಾಮೇಗೌಡ, ಸಹ ಕಾರ್ಯದರ್ಶಿ ಕೆ.ವೀಣಾ, ಮಂಜುಳ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……