ಚಿನ್ನ, ಬೆಳ್ಳಿ, ದುಡ್ಡು, ತಿನ್ನಲಿಕ್ಕಾಗಲ್ಲ: ಜಿಲ್ಲಾಧಿಕಾರಿ ಆರ್.ಲತಾ

ಚಿಕ್ಕಬಳ್ಳಾಪುರ: ರೈತರು ಬೆಳೆದ ಅನ್ನವನ್ನಲ್ಲದೇ ಚಿನ್ನ, ಬೆಳ್ಳಿ, ದುಡ್ಡನ್ನು ತಿನ್ನಲು ಸಾಧ್ಯವಿಲ್ಲ ಅಂತಹ ರೈತರಿಗೆ ಅತ್ಯಾಧುನಿಕ ಕೃಷಿ ಪದ್ದತಿಯ ತಾಂತ್ರಿಕ ವಿಧಾನಗಳನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ ಜಿ.ಕೆ.ವಿ.ಕೆ ಮತ್ತು ಕೃಷಿ ವಿಶ್ವವಿದ್ಯಾಲಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಅವರು ಶುಕ್ರವಾರ ಕೃಷಿ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯ, ಜಿ.ಕೆ.ವಿ.ಕೆ, ಜುವಾರಿ ಆಗ್ರೋ ಕೆಮಿಕಲ್ಸ್ ಲಿಮಿಟೆಡ್ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ನಡೆದ ಕೃಷಿ ವಸ್ತುಪ್ರದರ್ಶನ-2021-22ರ ಪ್ರಯುಕ್ತ ಕೃಷಿ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಬೆಳೆ ಬೆಳೆದರಷ್ಟೇ ನಾವೆಲ್ಲ ಬದುಕಲು ಸಾಧ್ಯ. ಚಿನ್ನ, ಬೆಳ್ಳಿ, ಹಣವನ್ನು ತಿಂದು ಬದುಕಲು ಸಾಧ್ಯವಿಲ್ಲ. ರೈತರು ಈ ದೇಶದ ಬೆನ್ನೆಲುಬು. ಕೊರೋನಾ ಸಂದರ್ಭದಲ್ಲಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆದರೆ ರೈತ ಮಾತ್ರ ತನ್ನ ಕೃಷಿಯನ್ನು ಮುಂದುವರೆಸಿ ಎಲ್ಲರ ಹಸಿವನ್ನು ನೀಗಿಸಿದ್ದಾನೆ. ರೈತರು ತುಂಬಾ ಶ್ರಮ ಜೀವಿಗಳು. ಕಷ್ಟದ ಸಮಯದಲ್ಲೂ ಎಲ್ಲರ ಕೈ ಹಿಡಿದಿದ್ದಾರೆ    ರೈತರಿಲ್ಲದ ಯಾವುದೇ ಜಿಲ್ಲೆ, ರಾಜ್ಯ, ದೇಶ ಅಥವಾ ಸಮಾಜವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಎಂದರು. 

ಜಿ.ಕೆ.ವಿ.ಕೆ ಮತ್ತು ಕೃಷಿ ವಿಶ್ವವಿದ್ಯಾಲಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಕಳೆದ 90 ದಿನಗಳ ಹಿಂದೆ ಮರಳುಕುಂಟೆ ಗ್ರಾಮಕ್ಕೆ ಬಂದು ತಾವು ಪಠ್ಯದಲ್ಲಿ ಓದಿದ ವಿಷಯವನ್ನು ಅಳವಡಿಸಿಕೊಂಡು ಇಲ್ಲಿನ ರೈತರೊಂದಿಗೆ ಬೆರೆತು ಅವರ ಜಮೀನಿನಲ್ಲಿಯೇ ಹಲವಾರು ಬೆಳೆಗಳನ್ನು ಯಶಸ್ವಿಯಾಗಿ ಬೆಳೆದು  ತೋರಿಸಿದ್ದೀರಿ, ಆ ಎಲ್ಲಾ ಬೆಳೆಗಳನ್ನು ಸೇರಿಸಿ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದೀರಿ. ಇದು ರೈತರಿಗೆ ಬಹಳಷ್ಟು ಸಹಕಾರಿಯಾಗಿದೆ. ಇಂತಹ ತಾಂತ್ರಿಕ ಕೃಷಿ ಪದ್ಧತಿಗಳನ್ನು ರೈತರು ಅಳವಡಿಸಿಕೊಂಡು ಹೆಚ್ಚಿನ ಬೆಳೆ ಬೆಳೆಯುವ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳುವಂತೆ ಹಾಗೂ ಇತ್ತೀಚೆಗೆ ಬಿದ್ದ ವರ್ಷಧಾರೆಯಿಂದಾಗಿ ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗಳು ಭರ್ತಿಯಾಗಿರುವುದು ಸಂತೋಷದ ವಿಷಯ. ಇಂತಹ ಪೂರಕ ವಾತಾವರಣವನ್ನು ಸದ್ಬಳಕೆ ಮಾಡಿಕೊಂಡು ಇನ್ನಷ್ಟು ಅಭಿವೃದ್ಧಿಯಾಗಬೇಕುಂದು ರೈತರಲ್ಲಿ ಮನವಿ ಮಾಡಿದರು.

ಕೃಷಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಕೃಷಿ ವೈದ್ಯರಿದ್ದಂತೆ, ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ಬೆಳೆಗಳ್ನು ಬೆಳೆಯಬೇಕು. ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬೇಕು. ಅತಿ ಹೆಚ್ಚಿನ ಬೆಳೆ ಬೆಳೆದಾಗ ಯಾವ ರೀತಿ ದಾಸ್ತಾನು ಮಾಡಬೇಕು ಹಾಗೂ ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು ಆದಾಯವನ್ನು ಯಾವ ರೀತಿ ದ್ವಿಗುಣ ಮಾಡಿಕೊಳ್ಳಬೇಕು ಎಂಬ ಬಗ್ಗೆ ರೈತರಿಗೆ ತಿಳಿಸಿಕೊಡಬೇಕು. ಅತ್ಯಾಧುನಿಕ ಕೃಷಿ ಪದ್ಧತಿಯ ತಾಂತ್ರಿಕ ವಿಧಾನಗಳನ್ನು ಅಳವಡಿಕೊಂಡು ಸರಿಯಾದ ವ್ಯಸಾಯ ಕ್ರಮವನ್ನು ಅನುಸರಿಸುವ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವುದರಲ್ಲಿ ನಿಜವಾದ ಸಾರ್ಥಕತೆ ಇದೆ. ಅಂತಹ ಸಾರ್ಥಕತೆಯ ಬದುಕು ನಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಆಶಯಗಳನ್ನು ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪಿ.ಶಿವಶಂಕರ್ ಅವರು ಮಾತನಾಡಿ,ಕೃಷಿ ಪದವಿ ವಿದ್ಯಾರ್ಥಿಗಳು ರೈತರೊಂದಿಗೆ ಬೆರೆತು ಕೃಷಿ ಪದ್ಧತಿಯ ತಾಂತ್ರಿಕ ವಿಧಾನಗಳನ್ನು ರೈತರಿಗೆ ತಿಳಿಸಿಕೊಟ್ಟ ರೀತಿಯಲ್ಲಿಯೇ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ರೂಪಿಸುವುದು ಒಳಿತು. ಜಿಲ್ಲೆಯ ರೈತರು ಕೃಷಿಯಲ್ಲಿ ಅತ್ಯಾಧುನಿಕ ವಿಧಾನಗಳನ್ನು ಅಳವಡಿಕೊಂಡಿದ್ದಾರೆ. ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು 90 ದಿನಗಳ ಕಾಲಾವಧಿಯಲ್ಲಿ ಕೃಷಿ ಚಟುವಟಿಕೆಯನ್ನು ಕೈಗೊಂಡು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಪೂರ್ವಭಾವಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಮಣ್ಣಿನ ಪರೀಕ್ಷೆ, ಮಣ್ಣಿನ ಗುಣಧರ್ಮ, ಬೇಸಾಯ ಮಾಡುವ ಬೆಳೆಗೆ ನೀರಿನ ಪೋಷಕಾಂಶಗಳ ಅವಶ್ಯಕತೆ, ಕಳೆಗಳ ನಾಶ ನಿರ್ವಹಣೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ನೆರವಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆಯ ಸಹ ವಿಸ್ತರಣಾ ನಿರ್ದೇಶಕರಾದ ಡಾ.ಕೆ.ನಾರಾಯಣಗೌಡ, ಎಂ.ಎಸ್.ಐ.ಎಲ್ ನಿರ್ದೇಶಕರಾದ ಶ್ರೀಧರ್, ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ರಾಮಾಂಜಿನಪ್ಪ, ಕೃಷಿ ಇಲಾಖೆಯ ಉಪನಿರ್ದೇಶಕರಾದ ಚಂದ್ರಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಪಿ.ನಾಗೇಶ್, ತಾ.ಪಂ.ಅಧ್ಯಕ್ಷರು ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಎಪಿಎಂಸಿ ಉಪಾಧ್ಯಕ್ಷರಾದ ಜಿ.ಬಿ.ನಾರಾಯಣಸ್ವಾಮಿ, ತಾ.ಪಂ.ಮಾಜಿ ಅಧ್ಯಕ್ಷರಾದ ಪಿ.ಮೋಹನ್, ಎ.ಪಿ.ಎಂ.ಸಿ ಮಾರುಕಟ್ಟೆಯ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಕೃಷಿ ತಜ್ಞರು, ಮರಳುಕುಂಟೆ ಗ್ರಾ.ಪಂ.ಅಧ್ಯಕ್ಷರು, ಸದಸ್ಯರು, ಗ್ರಾಮದ ಜನಪ್ರತಿನಿಧಿಗಳು, ರೈತ ಮುಖಂಡರು, ಶಾಲಾ ಶಿಕ್ಷಕರು/ಸಿಬ್ಬಂದಿ, ಜಿ.ಕೆ.ವಿ.ಕೆ ಮತ್ತು ಕೃಷಿ ವಿಶ್ವವಿದ್ಯಾಲಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

ರಾಜಕೀಯ

ಈ ಸರ್ಕಾರ ಮೊದಲು ದೆತು ದೆತು ಅಂತಾರೆ, ಬಳಿಕ ದಿಲಾತು ದಿಲಾತು ಅಂತಾರೆ: ಬಸವರಾಜ ಬೊಮ್ಮಾಯಿ

ಈ ಸರ್ಕಾರ ಮೊದಲು ದೆತು ದೆತು ಅಂತಾರೆ, ಬಳಿಕ ದಿಲಾತು ದಿಲಾತು ಅಂತಾರೆ:

ಈ ಸರ್ಕಾರದಲ್ಲಿ ಹೆಂಗಿದೆ ಅಂದರೆ ಮೊದಲು ದೆತು ದೆತು ಅಂತಾರೆ, ದಿಲಾತು ದಿಲಾತು ಅಂತಾರೆ ನಂತರ ದೇನೆವಾಲಾಂಕೊ ದಿಕಾತು ಅಂತ ಹೇಳುತ್ತಾರೆ‌. ಉತ್ತರ ಕರ್ನಾಟಕ ಶಿಕ್ಷಣಕ್ಕೆ ಪ್ರಾಥಮಿಕ ಆದ್ಯತೆ ಕೊಡಬೇಕು: ಬಸವರಾಜ ಬೊಮ್ಮಾಯಿ (Basavaraj

[ccc_my_favorite_select_button post_id="117677"]
ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಚಲನಚಿತ್ರ ಹಾಸ್ಯ ನಟ ಉಮೇಶ್ (Umesh) ಮತ್ತು ಜಾನಪದ ಕಲಾವಿದ ಶ್ಯಾಕಲದೇವನಪುರ ರಾಮಚಂದ್ರಯ್ಯ (Ramachandraiah) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. 

[ccc_my_favorite_select_button post_id="117539"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ಇಲ್ಲಿನ ನಿಸರ್ಗ ಯೋಗ ಕೇಂದ್ರದ ಯೋಗಪಟು ಎಂ. ಆರ್. ಜಾಹ್ನವಿ (M.R. Jahnavi) ಅವರಿಗೆ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ 2023-24ನೇ ಸಾಲಿಗೆ ನೀಡಲಾಗುವ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಬಾಲ

[ccc_my_favorite_select_button post_id="117462"]
ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ಸುಮಾರು 40 ಅಡಿ ಆಳದ ಪಾಳು ಬಾವಿಗೆ (Water well) ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ಶನಿವಾರ ಬೆಳಕಿಗೆ ಬಂದಿದೆ.

[ccc_my_favorite_select_button post_id="117569"]
ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ಕಂಟೇನರ್ (container) ಚಾಲಕ ನಿರ್ಲಕ್ಷ್ಯದಿಂದ ಏಕಾಏಕಿ ತಿರುವ ಪಡೆದ ವೇಳೆ ಎದುರು ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ‌ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ (Bike) ಸವಾರ ಸಾವನಪ್ಪಿರುವ ಘಟನೆ ಕನ್ನಮಂಗಲ ಗೇಟ್ ಬಳಿ

[ccc_my_favorite_select_button post_id="117565"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]
error: Content is protected !!