ದೊಡ್ಡಬಳ್ಳಾಪುರ: ಕೃಷಿ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷರಾಗಿ ಬಿ.ವಿ.ಲೋಕೇಶ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರ ಎಪಿಎಂಸಿ ಸಭಾಂಗಣದಲ್ಲಿ ಚುನಾವಣಾಧಿಕಾರಿಯಾಗಿ ಟಿ.ಎಸ್.ಶಿವರಾಜ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ನಡೆಸಲಾಯಿತು.
ಈ ಪ್ರಕ್ರಿಯೆಯಲ್ಲಿ ಚುನಾವಣೆ ಶಿರಸ್ತೆಧಾರ್ ಕೆ.ಕಿರಣ್ ಕುಮಾರ್, ಐಟಿ ಉದ್ಯೋಗಿ ರವಿಕುಮಾರ್ ಇದ್ದರು.
ನೂತನ ಉಪಾಧ್ಯಕ್ಷರನ್ನು ಎಪಿಎಂಸಿ ಅಧ್ಯಕ್ಷ ಎನ್.ವಿಶ್ವನಾಥ್, ನಿರ್ದೇಶಕರಾದ ಎಂ.ಗೋವಿಂದರಾಜು ಹಾಗೂ ಇತರರು ಅಭಿನಂದಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……