ಮೇಷ: ಈ ರಾಶಿಯವರು ಹಲವು ಅಡೆತಡೆಗಳಿದ್ದರೂ ನಿಮ್ಮ ಕಾರ್ಯಸಾಧನೆಗೆ ತೊಂದರೆಯಾಗದು. ಮಿತ್ರರ ಸಹಕಾರ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಫಲ ಸಿಗುವುದು. ಆದರೆ ಕೌಟುಂಬಿಕವಾಗಿ ಪ್ರೀತಿ ಪಾತ್ರರ ಆಗಮನವಾಗಲಿದ್ದು, ತಾಳ್ಮೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ.
ವೃಷಭ: ಈ ರಾಶಿಯವರು ಅಂದುಕೊಂಡ ಕಾರ್ಯಗಳನ್ನು ನೆರವೇರಿಸಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದು. ಆದರೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಮುನ್ನಡೆ ಸಿಗುವುದು.
ಮಿಥುನ: ಈ ರಾಶಿಯವರು ಯಾವುದೇ ಹೊಸ ಕೆಲಸಗಳಿಗೆ ಕೈ ಹಾಕುವ ಮೊದಲು ಮುನ್ನಚ್ಚರಿಕೆ ವಹಿಸಬೇಕಾಗುತ್ತದೆ. ಸಂಗಾತಿಯ ಸಲಹೆಗೆ ಕಿವಿಗೊಡಬೇಕಾಗುತ್ತದೆ. ಉದ್ಯೋಗದಲ್ಲಿ ಸ್ಥಾನ ಪಲ್ಲಟವಾಗಬಹುದು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ.
ಕಟಕ: ಈ ರಾಶಿಯವರು ವೃತ್ತಿರಂಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವುದು. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಮಾನಸಿಕ ಚಿಂತೆಗಳು ಕಾಡಬಹುದು. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ.
ಸಿಂಹ: ಈ ರಾಶಿಯವರು ಸ್ವ ಸಾಮರ್ಥ‍್ಯದಲ್ಲಿ ನಂಬಿಕೆಯಿಟ್ಟು ಕೆಲಸ ಮಾಡಬೇಕು. ಸಂಗಾತಿಯ ಮನೋಕಾಮನೆ ಪೂರೈಸಬೇಕಾಗುತ್ತದೆ. ಹಿರಿಯರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಈ ದಿನ ಸಾಲ ಕೊಡಲು ಹೋದರೆ ಮರಳಿ ಬಾರದು, ಎಚ್ಚರ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆಯಿದೆ.
ಕನ್ಯಾ: ಈ ರಾಶಿಯವರು ಹಿತ ಶತ್ರುಗಳ ಕಾಟದಿಂದ ಪಾಲಿಗೆ ಬಂದ ಅವಕಾಶಗಳು ಕೈ ತಪ್ಪಿ ಹೋಗುವುದು. ಆದರೆ ನಿರಾಸೆ ಬೇಡ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ಆದರೆ ಪ್ರೀತಿ ಪಾತ್ರರ ಭೇಟಿ ಮನಸ್ಸಿಗೆ ನೆಮ್ಮದಿ ನೀಡುವುದು. ದೇವತಾ ಪ್ರಾರ್ಥನೆ ಮಾಡಿ.
ತುಲಾ: ಈ ರಾಶಿಯವರು ದೂರ ಸಂಚಾರದಲ್ಲಿ ಅಪಘಾತಗಳಾಗದಂತೆ ಎಚ್ಚರಿಕೆ ವಹಿಸಬೇಕು. ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗದ ಯೋಗವಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಅಧಿಕ ಧನಲಾಭ ತರುವ ಯೋಜನೆಗಳ ಬಗ್ಗೆ ಚಿಂತನೆ ನಡೆಸುವಿರಿ.
ವೃಶ್ಚಿಕ: ಈ ರಾಶಿಯವರು ಅಂದುಕೊಂಡ ಯೋಜನೆಗಳನ್ನು ಪೂರ್ತಿ ಮಾಡಲು ಇದು ಸಕಾಲ. ವಾಹನ ಖರೀದಿ ಯೋಗವಿದೆ. ದೇಹಾರೋಗ್ಯದಲ್ಲಿ ಏರುಪೇರಾಗಬಹುದು, ಎಚ್ಚರಿಕೆ ಅಗತ್ಯ. ಸರಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿದೆ.
ಧನಸ್ಸು: ಈ ರಾಶಿಯವರು ಕೆಳ ಹಂತದ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ನಾನಾ ತೊಡಕುಗಳು ಬರಬಹುದು. ತಾಳ್ಮೆಯಿಂದ ಎದುರಿಸಬೇಕು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶ ಬಳಸಿಕೊಳ್ಳಬೇಕು. ದೇವಾಲಯ ಸಂದರ್ಶಿಸುವಿರಿ.
ಮಕರ: ಈ ರಾಶಿಯವರಿಗೆ ವ್ಯಾಪಾರ, ವ್ಯವಹಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಲೆಕ್ಕ ತಪ್ಪಿದರೆ ತೊಂದರೆ ತಪ್ಪಿದ್ದಲ್ಲ. ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮನೆಯಲ್ಲಿ ಶುಭ ಮಂಗಳ ಕಾರ್ಯಕ್ಕೆ ಸಿದ್ಧತೆ ನಡೆಸಲು ಓಡಾಟ ನಡೆಸಬೇಕಾಗುತ್ತದೆ.
ಕುಂಭ: ಈ ರಾಶಿಯವರಿಗೆ ಪ್ರೀತಿ ಪಾತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗುವುದು. ಹಾಗಿದ್ದರೂ ಸಂಗಾತಿಯ ಕಿರಿ ಕಿರಿ ತಪ್ಪದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಉತ್ಸಾಹದಿಂದ ಕಾರ್ಯನಿರ್ವಹಿಸುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮೀನ: ಈ ರಾಶಿಯವರು ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸಲು ಇದು ಸಕಾಲ. ಹಣಕಾಸಿನ ವಿಚಾರವಾಗಿ ಚಿಂತೆಗಳು ದೂರವಾಗುವುದು. ಬಾಕಿ ಹಣ ಸಂದಾಯವಾಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ.
ಮಾಸ: ಕಾರ್ತಿಕ ಮಾಸ
ಪಕ್ಷ: ಕೃಷ್ಣ ಪಕ್ಷ
ತಿಥಿ: ನವಮಿ
ನಕ್ಷತ್ರ: ಪುಬ್ಬಾ ನಕ್ಷತ್ರ
ರಾಹುಕಾಲ: 04:28 ರಿಂದ 05:55
ಗುಳಿಕಕಾಲ: 03:03 ರಿಂದ 04:29
ಯಮಗಂಡಕಾಲ: 12:11 ರಿಂದ 01:37
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….