ದೊಡ್ಡಬಳ್ಳಾಪುರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಜ್ಞಾನ ದೀಪ ಕಾರ್ಯಕ್ರಮವನ್ನು ಚಾಲನೆ ನೀಡಲಾಗಿದೆ.
ಈ ಕಾರ್ಯಕ್ರಮದ ಅನ್ವಯ ತಾಲೂಕಿನ ಆರೂಢಿ ಸರ್ಕಾರಿ ಮಾದರಿ ಪಾಠ ಶಾಲೆಗೆ ಓರ್ವ ತರಗತಿ ಶಿಕ್ಷಕರನ್ನು ನೇಮಿಸಲಾಗುದ್ದು, ಮತ್ತೊರ್ವ ಶಿಕ್ಷಕರ ನೇಮಕ ಮಾಡಿ ಟ್ಯೂಷನ್ ತರಗತಿಗೆ ಚಾಲನೆ ನೀಡಲಾಗಿದೆ.
ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಎಚ್.ನರಸೀಯಪ್ಪ ಟ್ಯೂಷನ್ ತರಗತಿಗೆ ಚಾಲನೆ ನೀಡಿದರು.
ಈ ಕುರಿತು ಮಾಹಿತಿ ನೀಡಿದ ವಿದ್ಯಾಧಾರೆ ಫೌಂಡೇಷನ್ ನಿರ್ದೇಶಕ ಎ.ಸಿ.ಹರೀಶ್ ಖಾಸಗಿ ಶಾಲೆಗಳ ಅಬ್ಬರಕ್ಕೆ ಸರ್ಕಾರಿ ಶಾಲೆಗಳಿಗೆ ಪೆಟ್ಟು ಉಂಟಾಗುತ್ತಿದ್ದು, ಸರ್ಕಾರಿ ಶಾಲೆಗಳ ಉಳಿವಿಗೆ ಸಂಘ ಸಂಸ್ಥೆಗಳ ನೆರವು ಅಗತ್ಯವಾಗಿದೆ. ಕೇವಲ ಪಠ್ಯ ಓದಿಗೆ ಮಾನ್ಯತೆ ನೀಡುವ ಖಾಸಗಿ ಶಾಲೆಗಳಿಗಿಂತ ಮಕ್ಕಳ ಉತ್ತಮ ಜೀವನ ರೂಪಿಸುವ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಶಿಕ್ಷಕ ನೇಮಕ ಅಗತ್ಯವಾಗಿದ್ದು. ಸಂಘ ಸಂಸ್ಥೆಗಳ ನೆರವಿನ ಜೊತೆಗೆ ಶಿಕ್ಷಣ ಇಲಾಖೆ ಸಹ ಯಾವುದೇ ಒತ್ತಡಕ್ಕೆ ಮಣಿಯದೆ ಉತ್ತಮ ಶಿಕ್ಷಕರನ್ನು ಗ್ರಾಮೀಣ ಭಾಗದ ಶಾಲೆಗಳಿಗೆ ವರ್ಗಾಯಿಸಬೇಕೆಂದರು.
ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ನಾಯಕ್, ಯೋಜನಾಧಿಕಾರಿ ಸುಧಾ ಭಾಸ್ಕರ್, ಮುಖ್ಯ ಶಿಕ್ಷಕ ಸಿದ್ದರಾಮಯ್ಯ, ವಿದ್ಯಾಧಾರೆ ಫೌಂಡೇಷನ್ ನಿರ್ದೇಶಕ ರೇಣುಕಾಪ್ರಸಾದ್, ಪೋಷಕರಾದ ಕೆಂಪಲಿಂಗಣ್ಣ, ಗೌರಮ್ಮ, ಗಂಗಾಭಿಕೆ, ನರಸಿಂಹಮೂರ್ತಿ, ಶ್ರೀನಿವಾಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಲಯ ಮೇಲ್ವಿಚಾರಕ ಲೋಕೇಶ್, ಸೇವಾ ಪ್ರತಿನಿಧಿ ಮಮತಾ ಮತ್ತಿತರರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….