ದಿನ ಭವಿಷ್ಯ:ಗುರುವಾರ, ಡಿಸೆಂಬರ್ 16, 2021, ದೈನಂದಿನ ರಾಶಿ ಭವಿಷ್ಯ / ಈ ರಾಶಿಯವರಿಗೆ ದುರ್ಜನರ ಸಹವಾಸ ಸಾಧ್ಯತೆ. ಜಾಗ್ರತೆ ಇರಲಿ, ನಂಬುವ ಮುನ್ನ ಯೋಚಿಸಿ

ಮೇಷ: ಈ ರಾಶಿಯವರ ನಂಬಿಕೆಯಿಂದ ಲಾಭ, ಸಮೃದ್ಧಿ, ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ, ಪ್ರಯಾಣದಲ್ಲಿ ಎಚ್ಚರವಿರಲಿ, ವಿಷ ಜಂತುಗಳ ಭಯ, ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವರು. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ.

ವೃಷಭ: ಈ ರಾಶಿಯವರು ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ್ಯ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಖರ್ಚು ಹೆಚ್ಚಾಗಲಿದೆ, ನಿಮ್ಮ ಹಣ ಒಳ್ಳೇಕಾರ್ಯಕ್ಕೆ ವಿನಿಯೋಗವಾಗಲಿದೆ, ಉತ್ತಮ ಫಲ. 

ಮಿಥುನ: ಈ ರಾಶಿಯವರಿಗೆ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ. ಸ್ವಲ್ಪ ಗೊಂದಲದ ವಾತಾವರಣ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ಸ್ವಲ್ಪ ಸಮಸ್ಯೆ, ಚಂದ್ರನ ಪ್ರಾರ್ಥನೆ ಮಾಡಿ.

ಕಟಕ: ಈ ರಾಶಿಯವರಿಗೆ ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ. ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು! ಯಾವುದೇ ಕೊರತೆ ಇಲ್ಲ, ಭೂ ವ್ಯಾಪಾರಿಗಳಿಗೆ ಎಚ್ಚರಿಕೆಯ ದಿನ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.

ಸಿಂಹ: ಈ ರಾಶಿಯವರಿಗೆ ಸ್ವಲ್ಪ ಅದೃಷ್ಟ ಕೈಕೊಡಲಿದೆ, ಸ್ತ್ರೀಯರಿಂದ ಅಸಹಕಾರ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರ ಸಲಹೆಯಿಂದ ಕಾರ್ಯಾನುಕೂಲ, ತಾಯಿಯಿಂದ ಅನುಕೂಲ, ಪರಶುರಾಮ ಪ್ರಾರ್ಥನೆ ಮಾಡಿ. 

ಕನ್ಯಾ: ಈ  ರಾಶಿಯವರು ಸ್ತ್ರೀಯರಿಂದ ಸಹಾಯ, ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾರಿಷ್ಟ ಶಾಂತಿ ಮಾಡಿಸಿ. ನಷ್ಟ ಸಂಭವ, ಆರೋಗ್ಯದಲ್ಲಿ ವ್ಯತ್ಯಾಸ, ನೋವಲ್ಲಿದ್ದವರ ಕಡೆಗಣಿಸಬೇಡಿ, ಸಾಲ ಕೊಡಬೇಡಿ, ಶತ್ರುಗಳ ಬಾಧೆ ಬಾಧಿಸಲಿದೆ, ಪರಶುರಾಮರ ಸ್ಮರಣೆ ಮಾಡಿ. 

ತುಲಾ: ಈ ರಾಶಿಯವರು ಸ್ತ್ರೀಯರಿಂದ ಕೆಲಸದಲ್ಲಿ ವಿಘ್ನತೆ, ಎಚ್ಚರಿಕೆ ಇರಲಿ, ಸಂಗಾತಿಯಿಂದ ಅಸಮಧಾನ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ. ಸಂಗಾತಿಯಿಂದ ಸಹಕಾರ, ಕಿರಿಕಿರಿ ಮಿಶ್ರಫಲ, ಹಣ ವ್ಯತ್ಯಾಸ, ಪ್ರಯಾಣಿಕರಿಗೆ ಶುಭದಿನ, ಆಟೋಮೊಬೈಲ್ಸ್ ಕ್ಷೇತ್ರದವರಿಗೆ ಶುಭಫಲ, ಶಿವಕೇಶವ ಪ್ರಾರ್ಥನೆ ಮಾಡಿ. 

ವೃಶ್ಚಿಕ: ಈ ರಾಶಿಯ ವ್ಯಾಪಾರಿಗಳಿಗೆ ಶುಭಲಾಭ, ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ, ಚಂದ್ರ-ಗುರು ಪ್ರಾರ್ಥನೆ ಮಾಡಿ.

ಧನಸ್ಸು: ಈ ರಾಶಿಯವರು ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ, ಮನಸ್ಸಿಗೆ ಸಮಾಧಾನ, ಮಿಶ್ರಫಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. ಅತಿ ಭೋಜನದಿಂದ ಆರೋಗ್ಯ ವ್ಯತ್ಯಾಸ, ಮಿತಾಹಾರ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಫಲ, ಉದ್ಯೋಗಿಗಳಿಗೆ ಅದೃಷ್ಟ ದಿನ, ಆದಿತ್ಯ ಹೃದಯ ಪಠಿಸಿ.

ಮಕರ: ಈ ರಾಶಿಯವರು ಶಶಯೋಗದಿಂದ ಉತ್ತಮ ಫಲ, ಸರ್ಕಾರಿ ನೌಕರರಿಗೆ ಶುಭಫಲ, ಬುದ್ಧಿಶಕ್ತಿಯಿಂದ ಯಶಸ್ಸು, ಆರೋಗ್ಯದ ಕಡೆ ಗಮನ ಕೊಡಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಲಾಭದ ದಿನ, ಸರ್ಕಾರಿ ನೌಕರರಿಗೆ ಶುಭಫಲ, ನಷ್ಟ ಸಾಧ್ಯತೆ, ಸಹೋದರರಿಂದ ಸಹಕಾರ, ಶನೈಶ್ಚರ ಪ್ರಾರ್ಥನೆ ಮಾಡಿ. 

ಕುಂಭ: ಈ ರಾಶಿಯ ವಿದ್ಯಾರ್ಥಿಗಳು ಎಚ್ಚರವಾಗಿರಬೇಕು, ದುರ್ಜನರ ಸಹವಾಸ ಸಾಧ್ಯತೆ. ಜಾಗ್ರತೆ ಇರಲಿ, ನಂಬುವ ಮುನ್ನ ಯೋಚಿಸಿ, ಸ್ತ್ರೀಯರಿಂದ ಸಹಕಾರ, ವಿದೇಶದಿಂದ ಶುಭಸುದ್ದಿ, ಧನ ಸಮೃದ್ಧಿ, ಗುರು ಪ್ರಾರ್ಥನೆ ಮಾಡಿ. 

ಮೀನ: ಈ ರಾಶಿಯವರು ಪ್ರಯಾಣದಲ್ಲಿ ತೊಡಕು, ಸ್ತ್ರೀಯರು ಎಚ್ಚರವಾಗಿರಬೇಕು, ನೀರಿನಿಂದ ಕೊಂಚ ಸಮಸ್ಯೆ ಸಾಧ್ಯತೆ, ಸಹೋದರರ ಸಹಕಾರ, ಪ್ರಶಂಸೆ ಸಿಗಲಿದೆ, ಸ್ತ್ರೀಯರ ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ. 

ಮಾಸ: ಮಾರ್ಗಶಿರ ಮಾಸ

ಪಕ್ಷ: ಶುಕ್ಲ ಪಕ್ಷ       

ತಿಥಿ: ತ್ರಯೋದಶಿ 

ನಕ್ಷತ್ರ: ಭರಣಿ ನಕ್ಷತ್ರ

ರಾಹುಕಾಲ: 01:44 ರಿಂದ  03:10

ಗುಳಿಕಕಾಲ: 09:27 ರಿಂದ 10:53

ಯಮಗಂಡಕಾಲ: 06:36 ರಿಂದ 08:01

ಈ ದಿನದ ವಿಶೇಷ:

1.ಹನುಮ ಜಯಂತಿ 

2. ಧನುರ್ಮಾಸ ಪ್ರಾರಂಭ 

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮೊ:9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಈ ಸರ್ಕಾರ ಮೊದಲು ದೆತು ದೆತು ಅಂತಾರೆ, ಬಳಿಕ ದಿಲಾತು ದಿಲಾತು ಅಂತಾರೆ: ಬಸವರಾಜ ಬೊಮ್ಮಾಯಿ

ಈ ಸರ್ಕಾರ ಮೊದಲು ದೆತು ದೆತು ಅಂತಾರೆ, ಬಳಿಕ ದಿಲಾತು ದಿಲಾತು ಅಂತಾರೆ:

ಈ ಸರ್ಕಾರದಲ್ಲಿ ಹೆಂಗಿದೆ ಅಂದರೆ ಮೊದಲು ದೆತು ದೆತು ಅಂತಾರೆ, ದಿಲಾತು ದಿಲಾತು ಅಂತಾರೆ ನಂತರ ದೇನೆವಾಲಾಂಕೊ ದಿಕಾತು ಅಂತ ಹೇಳುತ್ತಾರೆ‌. ಉತ್ತರ ಕರ್ನಾಟಕ ಶಿಕ್ಷಣಕ್ಕೆ ಪ್ರಾಥಮಿಕ ಆದ್ಯತೆ ಕೊಡಬೇಕು: ಬಸವರಾಜ ಬೊಮ್ಮಾಯಿ (Basavaraj

[ccc_my_favorite_select_button post_id="117677"]
ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಚಲನಚಿತ್ರ ಹಾಸ್ಯ ನಟ ಉಮೇಶ್ (Umesh) ಮತ್ತು ಜಾನಪದ ಕಲಾವಿದ ಶ್ಯಾಕಲದೇವನಪುರ ರಾಮಚಂದ್ರಯ್ಯ (Ramachandraiah) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. 

[ccc_my_favorite_select_button post_id="117539"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ಇಲ್ಲಿನ ನಿಸರ್ಗ ಯೋಗ ಕೇಂದ್ರದ ಯೋಗಪಟು ಎಂ. ಆರ್. ಜಾಹ್ನವಿ (M.R. Jahnavi) ಅವರಿಗೆ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ 2023-24ನೇ ಸಾಲಿಗೆ ನೀಡಲಾಗುವ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಬಾಲ

[ccc_my_favorite_select_button post_id="117462"]
ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ಸುಮಾರು 40 ಅಡಿ ಆಳದ ಪಾಳು ಬಾವಿಗೆ (Water well) ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ಶನಿವಾರ ಬೆಳಕಿಗೆ ಬಂದಿದೆ.

[ccc_my_favorite_select_button post_id="117569"]
ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ಕಂಟೇನರ್ (container) ಚಾಲಕ ನಿರ್ಲಕ್ಷ್ಯದಿಂದ ಏಕಾಏಕಿ ತಿರುವ ಪಡೆದ ವೇಳೆ ಎದುರು ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ‌ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ (Bike) ಸವಾರ ಸಾವನಪ್ಪಿರುವ ಘಟನೆ ಕನ್ನಮಂಗಲ ಗೇಟ್ ಬಳಿ

[ccc_my_favorite_select_button post_id="117565"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]
error: Content is protected !!