ಬೆಂಗಳೂರು: ತೆಲುಗು ಚಿತ್ರರಂಗದ ಖ್ಯಾತ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಚಿತ್ರ ‘ಪುಷ್ಪ’, ದಿ ರೈಸ್, ಶುಕ್ರವಾರ ಬಿಡುಗಡೆಯಾಗಲಿದ್ದು, ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದು, ಟ್ವಿಟರ್‌ನಲ್ಲಿ ಬಾಯ್ಕಾಟ್ ಪುಷ್ಪ ಇನ್ ಕರ್ನಾಟಕ ಟ್ರೆಂಡಿಂಗ್ ಆಗಿದೆ.
ಸುಕುಮಾರ್ ನಿರ್ದೇಶನದ ಚಿತ್ರವನ್ನು ಬಹಿಷ್ಕರಿಸಲು ಜನರನ್ನು ಕೋರುವ ಹ್ಯಾಶ್‌ಟ್ಯಾಗ್, ಚಿತ್ರ ಬಿಡುಗಡೆ ಮುಂಚೆ ಟ್ರೆಂಡಿಂಗ್ ಆಗಿದೆ.
ಚಿತ್ರದ ವಿತರಕರು ತೆಲುಗು ಆವೃತ್ತಿಯನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿರುವುದು ಹಲವಾರು ಅಭಿಮಾನಿಗಳನ್ನು ಅಸಮಾಧಾನಗೊಳಿಸಿದೆ.
ತೆಲುಗು ಭಾಷೆ ಮತ್ತು ಜನರನ್ನು ವಿರೋಧಿಸಿ ಚಿತ್ರ ಬಹಿಷ್ಕರಿಸುತ್ತಿಲ್ಲಎಂದು ಕರ್ನಾಟಕದಲ್ಲಿರುವ ಅಲ್ಲು ಅರ್ಜುನ್ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ, ವಾಸ್ತವವಾಗಿ, ವಿತರಕರು ಕನ್ನಡ ಆವೃತ್ತಿಯ ಬದಲಿಗೆ ತೆಲುಗು ಆವೃತ್ತಿಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಆಯ್ಕೆ ಮಾಡಿದ್ದರಿಂದ ಅಸಮಾಧಾನಗೊಂಡಿದ್ದಾರೆ.
“ಪ್ರೀತಿಯ ತೆಲುಗು ಜನರೇ, ನಾವು ಪುಷ್ಪ ಚಿತ್ರ ಅಥವಾ ತೆಲುಗು ಚಲನಚಿತ್ರಗಳನ್ನು ವಿರೋಧಿಸುವುದಿಲ್ಲ ಆದರೆ ಕರ್ನಾಟಕದ ವಿಷಯಕ್ಕೆ ಬಂದಾಗ, ಕನ್ನಡ ಆವೃತ್ತಿಯು ಅಗ್ರಸ್ಥಾನದಲ್ಲಿರಬೇಕು, ಅಲ್ಲಿ ಅರ್ಜುನ್ ಅಭಿಮಾನಿಗಳಿಂದ ಪ್ರೀತಿ ! ಕನ್ನಡಕ್ಕಿಂತ ಮೇಲೆ ನಮಗೆ ಯಾರೂ ಇಲ್ಲ! ಎಂದು ಟ್ವೀಟ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ತೆಲುಗು ವ್ಯಕ್ತಿಯೊಬ್ಬರು “ತೆಲುಗಿನ ವ್ಯಕ್ತಿಯಾಗಿ ಆದರೆ ಬೆಂಗಳೂರಿನಲ್ಲಿ ಉಳಿದುಕೊಂಡಿರುವ ನಾನು ನಮ್ಮ ಕನ್ನಡಿಗರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ಯಾವುದೇ ಭಾಷೆಯ ಚಿತ್ರ ನಮ್ಮ ಕರ್ನಾಟಕದಲ್ಲಿ ನಮ್ಮ ಕನ್ನಡದಲ್ಲಿ ಬಿಡುಗಡೆಯಾಗಬೇಕು ಎಂದು ಬರೆದಿದ್ದು ಭಾರಿ ಮೆಚ್ಚುಗೆ ಪಡೆದು ಸುದ್ದಿಯಾಗಿದೆ.
ಪ್ರೀತಿಯ ಅಲ್ಲುಅರ್ಜುನ್ ಅವರೇ , ನಿಮ್ಮ ತೆಲುಗು ಚಿತ್ರಕ್ಕಾಗಿ ಬೆಂಗಳೂರಿನಲ್ಲಿ 450 ಶೋಗಳನ್ನು ಬುಕ್ ಮಾಡಲಾಗಿದೆ. ಟಾಲಿವುಡ್ ತೆಲುಗು ಸಿನಿಮಾಗಳನ್ನು ಕರ್ನಾಟಕದಲ್ಲಿ ಏಕೆ ಡಂಪ್ ಮಾಡುತ್ತದೆ? ಕರ್ನಾಟಕ ತೆಲುಗು ಸಿನಿಮಾಗಳ ಡಂಪಿಂಗ್ ತಾಣವಲ್ಲ. ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಎಂದು ಹಲವಾರು ಮಂದಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಪುಷ್ಪ ಕನ್ನಡ ಆವೃತ್ತಿಗೆ 3 ಶೋಗಳು ಮಾತ್ರ ಸಿಕ್ಕಿವೆ. ತೆಲುಗು ಆವೃತ್ತಿಗೆ ಬರೋಬ್ಬರಿ 593, ತಮಿಳು – 10, ಮಲಯಾಳಂ 4 ಶೋಗಳನ್ನು ಪಡೆದುಕೊಂಡಿದೆ. ದೇಶದ ಒಂದು ಭಾಷೆ ಇತರ ಭಾಷೆಗಳಿಗಿಂತ ಕಡಿಮೆ ಪರದೆಯನ್ನು ಪಡೆಯುವುದು ಇತಿಹಾಸದಲ್ಲಿ ಮೊದಲನೆಯದು ಎಂದು ಬುಕ್ ಮೈ ಶೋ ಮೂಲ ಉಲ್ಲೇಖ ಮಾಡಿ, ಟ್ವೀಟ್ ಮಾಡಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….