ದೊಡ್ಡಬಳ್ಳಾಪುರ: ಪೊಲೀಸ್ ಇಲಾಖೆಯ ಅಪರಾಧ ತಡೆ ಮಾಸಾಚರಣೆ ಕುರಿತು ಅಳವಡಿಸಲಾಗಿದ್ದ ಪ್ಲೆಕ್ಸ್ ಮೇಲೆ ರಾಜಕೀಯ ಮುಖಂಡರೊಬ್ಬರ ಫ್ಲೆಕ್ಸ್ ಅಳವಡಿಸಿರುವುದ ಕಂಡು ಆಕ್ರೋಶ ವ್ಯಕ್ತಪಡಿಸಿದ ಪೊಲೀಸರು ಜನ್ಮದಿನದ ಪ್ಲೆಕ್ಸ್ ಕಿತ್ತೆಸೆದುರುವ ಘಟನೆ ನಗರದ ಹೊರವಲಯದ ಕಂಟನಕುಂಟೆ ಬಳಿ ನಡೆದಿದೆ.
ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಕಂಟನಕುಂಟೆ ಬಳಿ ಫ್ಲೆಕ್ಸ್ ಅಳವಡಿಸಿದ್ದಾರೆ. ಆದರೆ ಶುಕ್ರವಾರ ರಾತ್ರಿ ಬಿಜೆಪಿ ಮುಖಂಡರೊಬ್ಬರ ಜನ್ಮದಿನಕ್ಕೆ ಶುಭಕೋರುವ ಫ್ಲೆಕ್ಸ್ ಅನ್ನು ಅದೇ ಫ್ಲೆಕ್ಸ್ ಮೇಲೆ ಅಳವಡಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಕಾರಣ ಕಂಟನಕುಂಟೆ ಬಳಿ ಸ್ಥಾಪಿಸಿರುವ ಚೆಕ್ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು, ಸಮೀಪದಲ್ಲೇ ಅಳವಡಿಸಿದ್ದ ಅಪರಾಧ ತಡೆ ಮಾಸಾಚರಣೆ ಫ್ಲೆಕ್ಸ್ ಮೇಲೆ ಜನ್ಮದಿನದ ಫ್ಲೆಕ್ಸ್ ಹಾಕಿರುವುದ ಕಂಡು ಆಕ್ರೋಶ ವ್ಯಕ್ತಪಡಿಸಿದ್ದು, ಅಪರಾಧ ತಡೆ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಲು ಜಾಹಿರಾತು ಅಳವಡಿಸಿದರೆ, ಅದರ ಮೇಲೆ ಜನ್ಮದಿನದ ಫ್ಲೆಕ್ಸ್ ಆಕಿರುವುದು ಖಂಡನೀಯವೆಂದು ಜನ್ಮದಿನದ ಫ್ಲೆಕ್ಸ್ ಕಿತ್ತೆಸೆದಿದ್ದಾರೆ.
ಇತ್ತಿಚೆಗೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಫ್ಲೆಕ್ಸ್ ಹಾವಳಿ ಮಿತಿಮೀರಿದ್ದು, ಅನುಮತಿ ಇಲ್ಲದೆ ಬೇಕಾಬಿಟ್ಟಿ ಫ್ಲೆಕ್ಸ್ ಅಳವಡಿಸುತ್ತಿರುವುದರಿಂದ ಸಾರ್ವಜನಿಕರು, ವಾಹನ ಸವಾರರು ತೊಂದರೆಗೆ ಒಳಗಾಗುವಂತಾಗಿದೆ. ಈ ನಿಟ್ಟಿನಲ್ಲಿ ನಗರಸಭೆಯಂತೆ ಗ್ರಾಮಪಂಚಾಯಿತಿ ಹಾಗೂ ಪೊಲೀಸರ ಅನುಮತಿ ಪಡೆದು ಫ್ಲೆಕ್ಸ್ ಅಳವಡಿಸಲು ನಿರ್ಣಯ ಕೈಗೊಳ್ಳಬೇಕು ಇಲ್ಲವಾದಲ್ಲಿ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….