ನವದೆಹಲಿ: ಗೂಗಲ್ ವಿರುದ್ಧ ಭಾರತೀಯ ಸ್ಪರ್ಧಾತ್ಮಕ ಆಯೋಗ ತನಿಖೆಗೆ ಆದೇಶಿಸಿದೆ.
ಆನ್ಲೈನ್ ಸರ್ಚಿಂಗ್ ಸೇವೆಗಳಲ್ಲಿ ಪ್ರಾಬಲ್ಯ ಹೊಂದಿರುವ ಗೂಗಲ್, ಸುದ್ದಿ ಸಂಗ್ರಹಣೆ ವಿಚಾರದಲ್ಲಿ ತನ್ನ ಪ್ರಬಲ ಸ್ಥಾನದ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಡಿಜಿಟಲ್ ನ್ಯೂಸ್ ಪ್ರಕಾಶಕರ ಸಂಘ (DNPA) ನೀಡಿದ ದೂರಿನ ಮೇರೆಗೆ ಈ ತನಿಖೆ ನಡೆಸಲು ನಿರ್ಧರಿಸಿದ್ದಾಗಿ ಸಿಸಿಐ ತಿಳಿಸಿದೆ.
ಡಿಜಿಟಲ್ ಮಾಧ್ಯಮಗಳು ಟ್ರಾಫಿಕ್ ಗೂಗಲ್ ಮೇಲೆ ಅವಲಂಬಿತರಾಗಿರುತ್ತಾರೆ. ಹೀಗಾಗಿ ಗೂಗಲ್ ಎಂಬುದು ಅವರ ವ್ಯವಹಾರದಲ್ಲಿ ಅನಿವಾರ್ಯವಾಗಿ ಪಾಲುದಾರ ಆಗಿರುತ್ತದೆ. ಆದರೆ ಗೂಗಲ್ ಈ ಸುದ್ದಿ ಕ್ರೋಢಿಕರಣದ ವಿಚಾರದಲ್ಲಿ ತನ್ನ ಪ್ರಾಬಲ್ಯವನ್ನು ಬಳಸಿಕೊಂಡು ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ ಎಂದು ಸಿಸಿಐ ಮಾಹಿತಿ ನೀಡಿದೆ.
ಗೂಗಲ್ ವಿರುದ್ಧ ದೂರು ಕೊಟ್ಟ ಡಿಜಿಟಲ್ ನ್ಯೂಸ್ ಪಬ್ಲಿಶರ್ಸ್ ಅಸೋಸಿಯೇಶನ್, ಡಿಜಿಟಲ್ ಸುದ್ದಿ ಪ್ರಕಾಶಕರ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಒಂದು ಖಾಸಗಿ ಕಂಪನಿ. ಗೂಗಲ್ ತಮಗೆ ಬರುವ ಆದಾಯದಲ್ಲಿ ನಷ್ಟವುಂಟು ಮಾಡುತ್ತದೆ ಎಂದು ಆರೋಪಿಸಿರುವ ಈ ಕಂಪನಿ, ಸದ್ಯ ಅಲ್ಪಾಬೆಟ್ ಇಂಕ್, ಗೂಗಲ್ ಎಲ್ಎಲ್ಸಿ ಮತ್ತು ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ದೂರು ದಾಖಲಿಸಿದೆ. ಆಂಡ್ರ್ಯಾಯ್ಡ್ ಮಾರುಕಟ್ಟೆಯಲ್ಲಿ ಗಟ್ಟಿ ಸ್ಥಾನ ಹೊಂದಿರುವ ಗೂಗಲ್ನಿಂದಾಗಿ ಪ್ರಕಾಶಕರಿಗೆ ಜಾಹೀರಾತಿನಲ್ಲೂ ನಷ್ಟವಾಗಿದೆ. ಶೇ.51ರಷ್ಟನ್ನು ನಾವು ಪಡೆಯುವಂತಾಗಿದೆ ಎಂದೂ ಸಂಘ ಆರೋಪಿಸಿದೆ. ಡಿಜಿಟಲ್ ನ್ಯೂಸ್ ಪಬ್ಲಿಶರ್ಸ್ ಅಸೋಸಿಯೇಶನ್ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ, 60 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಿಸಿಐ, ಮಹಾನಿರ್ದೇಶಕರಿಗೆ ಸೂಚಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….