ದಾವಣಗೆರೆ: ತಾಲೋಕಿನ ಮಾಯಕೊಂಡ ಗ್ರಾಮ ಪಂಚಾಯಿತಿ ಗ್ರಾಮ ಒನ್ ಕೇಂದ್ರವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಚುಯಲ್ ವೇದಿಕೆಯ ಮೂಲಕ ಉಧ್ಘಾಟಿಸಲಿದ್ದಾರೆ.
ಬುಧವಾರ(ಜ.26) ಮಧ್ಯಾಹ್ನ 12 ಗಂಟೆಗೆ ರಾಜ್ಯದ 12 ಜಿಲ್ಲೆಗಳ 3 ಸಾವಿರ ಗ್ರಾಮ ಒನ್ ಕೇಂದ್ರಗಳಿಗೆ ಏಕಕಾಲಕ್ಕೆ ಚಾಲನೆ ನೀಡಲಿದ್ದು,ಮಾಯಕೊಂಡ ಗ್ರಾಮ ಪಂಚಾಯತಿ ಗ್ರಾಮ ಒನ್ ಕೇಂದ್ರ ಕೂಡ ಸೇರಿದೆ.
ಮಾಯಕೊಂಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ,ಎ,ಬಸವರಾಜ(ಬೈರತಿ) ಗ್ರಾಮ ಒನ್ ಕಾರ್ಯಪಡೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ,ಜಿ.ಪಂ.ಸಿಇಓ ವಿಜಯ ಮಹಾಂತೇಶ ದಾನಮ್ಮನವರ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಹಶೀಲ್ದಾರರು ಉಪಸ್ಥಿತರಿರಲಿದ್ದಾರೆ.
ಈ ಯೋಜನೆಯ ಮುಖಾಂತರ ನಾಗರೀಕರ ಮನೆಯ ಬಳಿಯೇ ಸೇವಾಸಿಂಧು ವೇದಿಕೆಯ ಮೂಲಕ 100 ಕ್ಕೂ ಹೆಚ್ಚು ಸೇವೆಗಳು ಲಭ್ಯವಾಗುವುದರಿಂದ ಗ್ರಾಮೀಣ ಜನತೆಗೆ ಪ್ರಯಾಣ ಮತ್ತು ಇತರೆ ವೆಚ್ಚದಲ್ಲಿ ಉಳಿತಾಯವಾಗುವುದರ ಜೊತೆಗೆ ಮಧ್ಯವರ್ತಿಗಳ ಹಾವಳಿ ಸಹ ಇರುವುದಿಲ್ಲ, ಸಕಾಲದಲ್ಲಿ ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಒನ್ ಯೋಜನೆಯನ್ನು ಸಕಾಲ ತಂತ್ರಾಂಶದೊಂದಿಗೆ ಏಕೀಕರಣ ಮಾಡಲ್ಪಟ್ಟಿರುವುದು ಈ ಯೋಜನೆಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….