ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿನ ಬಾಶೆಟ್ಟಿಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಿಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ದಿಢೀರ್ ಭೇಟಿ ನೀಡಿದ್ದರು.
ಕಳೆದ ವರ್ಷ ಎಸೆಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಪ್ರೌಢಶಾಲೆಗೆ ಭೇಟಿ ನೀಡಿ ಈ ಶಾಲೆಯ ಮಾಹಿತಿ ಪಡೆದಿದ್ದ ಅವರು, ಇಂದು ಶಾಲೆಗೆ ಬಂದು ಶಾಲೆಯ ಅಚ್ಚುಕಟ್ಟಾದ ವ್ಯವಸ್ಥೆಯನ್ನು ವೀಕ್ಷಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುರೇಶ್ ಕುಮಾರ್ ಅವರು, ಶಾಲೆಯಲ್ಲಿ ಸುಮಾರು 700 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಈ ಸರ್ಕಾರಿ ಶಾಲೆಗೆ ಅಜಾಕ್ಸ್ ಲ ಸಂಸ್ಥೆ 26 ಸುಸಜ್ಜಿತ ಕೊಠಡಿಗಳನ್ನು ಹೊಂದಿರುವ ಈ ಅದ್ಭುತವಾದ ಕಟ್ಟಡವನ್ನು ಸುಮಾರು ರೂ6 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿಕೊಟ್ಟಿದೆ.
ಈ ಶಾಲೆಯ ಕಲಾ ಶಿಕ್ಷಕ ಶ್ರೀ ತಾಯಪ್ಪ ಒಂದು ಸುಂದರವಾದ ಚಿತ್ರವನ್ನು ತಯಾರಿಸಿ ಅದನ್ನು ನನಗೆ ಕಟ್ಟಡದ ಲೋಕಾರ್ಪಣೆ ದಿನ ನೀಡಬೇಕೆಂದು ಬಯಸಿದ್ದರು.
ಕಾರಣಾಂತರಗಳಿಂದ ಕಟ್ಟಡದ ಲೋಕಾರ್ಪಣೆ ಆಗಲಿಲ್ಲ. ಆದರೆ ಈ ವರ್ಷ ಶಾಲೆ ಹೊಸ ಕಟ್ಟಡಕ್ಕೆ ಸ್ಥಳಾಂತರ ಗೊಂಡದ್ದರಿಂದ ಎಲ್ಲ ಮಕ್ಕಳು ನೂತನ ಕಟ್ಟಡದಲ್ಲಿ ಲವಲವಿಕೆಯಿಂದ ಶಿಕ್ಷಣ ಪಡೆಯುತ್ತಿದ್ದುದನ್ನು ನಾನು ಕಂಡೆ.
ಇಂದು ಶ್ರೀ ತಾಯಪ್ಪ ತನ್ನ ಎಲ್ಲಾ ಶಿಕ್ಷಕ ಸಹೋದ್ಯೋಗಿಗಳ ಸಮ್ಮುಖದಲ್ಲಿ ನನಗೆ ತಾವೇ ರಚಿಸಿದ ತೈಲಚಿತ್ರವನ್ನು ಕೊಡುಗೆಯಾಗಿ ನೀಡಿದರು.
ಗೋಕಾಕದ ಮೂಲದ ಶ್ರೀ ತಾಯಪ್ಪ ನವರ ಈ ಪ್ರೀತಿಯ ಕೊಡುಗೆಗೆ ನಾನು ಆಭಾರಿಯಾಗಿದ್ದೇನೆ, ಅವರ ಪ್ರೀತಿಗೆ ನನ್ನ ತಲೆ ಬಾಗಿದೆ ಎಂದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ಶಾಲೆಯ ಮುಖ್ಯಶಿಕ್ಷಕ ಎಂ.ಎಸ್.ರಾಜಶೇಖರ್, ಅಜಾಕ್ಸ್ ಸಂಸ್ಥೆಯ ಗಣಪತಿ, ಮಂಜುನಾಥ್, ಎಸ್ ಡಿಎಂಸಿ ಅಧ್ಯಕ್ಷ ಮುನಿಯಪ್ಪ, ಸಿಆರ್ಪಿ ರಾಮಚಂದ್ರಯ್ಯ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….