ಬೆಂ.ಗ್ರಾ.ಜಿಲ್ಲೆ: ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಜ.29ರ ಬುಲೆಟಿನ್ ಅನ್ವಯ ಇಂದು ಜಿಲ್ಲೆಯಲ್ಲಿ ಹೊಸದಾಗಿ 367 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಅಲ್ಲದೆ 1810 ಜನ ಗುಣಮುಖರಾಗಿದ್ದಾರೆ.
ವರದಿಯನ್ವಯ ಹೊಸಕೋಟೆ ತಾಲೂಕಿನ 86 ಪುರುಷರು, 52 ಮಹಿಳೆಯರು ಸೇರಿ 138.
ದೇವನಹಳ್ಳಿ ತಾಲೂಕಿನ 45 ಪುರುಷರು, 27 ಮಹಿಳೆಯರು ಸೇರಿ 72.
ದೊಡ್ಡಬಳ್ಳಾಪುರ ತಾಲೂಕಿನ 31 ಪುರುಷರು, 18 ಮಹಿಳೆಯರು ಸೇರಿ 49.
ನೆಲಮಂಗಲ ತಾಲೂಕಿನ 73 ಪುರುಷರು, 32 ಮಹಿಳೆಯರು ಸೇರಿ 105 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಉಳಿದಂತೆ ಬೆಂಗಳೂರು ಉತ್ತರ ಹಾಗೂ ಅನ್ಯ ಜಿಲ್ಲೆಯ 02 ಪುರುಷರು, ಓರ್ವ ಮಹಿಳೆ ಸೇರಿ 03 ಮಂದಿಗೆ ಸೋಂಕು ತಗುಲಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5576ಕ್ಕೆ ಇಳಿಕೆಯಾಗಿದೆ. ಅಲ್ಲದೆ 33198 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಅನ್ವಯ1903 ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಮೃತರ ವರದಿ: ದೇವನಹಳ್ಳಿ ತಾಲೂಕಿನ 47 ವರ್ಷದ ಪುರುಷ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
(ಆತಂಕ ಬೇಡಾ, ಮುಂಜಾಗ್ರತೆ ಇರಲಿ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….