ದೊಡ್ಡಬಳ್ಳಾಪುರ: ತೆರಿಗೆ ಕಟ್ಟದ ವಾಣಿಜ್ಯ ಕಟ್ಟಡದ ಮಾಲೀಕರಿಗೆ ನಗರಸಭೆ ಅಧಿಕಾರಿಗಳ ಶಾಕ್..!!

ದೊಡ್ಡಬಳ್ಳಾಪುರ, (ಡಿ.28): ತೆರಿಗೆ ಕಟ್ಟಡದ 25 ವಾಣಿಜ್ಯ ಕಟ್ಟಡಗಳ ತೆರಿಗೆ ಕಟ್ಟದ ಮಾಲೀಕರಿಗೆ ನಗರಸಭೆ ಅಧಿಕಾರಿಗಳು ಕಟ್ಟಡಗಳ ಅಳತೆ ಪರಿಶೀಲನೆ ನಡೆಸಿ, ನೋಟೀಸ್ ನೀಡಿದ್ದಾರೆ.

ವಾಣಿಜ್ಯ ಕಟ್ಟಡಗಳ ತೆರಿಗೆ ವಸೂಲಾತಿಯ ಕುರಿತು ನಗರಸಭೆ ಪೌರಾಯುಕ್ತ ಕೆ.ಜೆ.ಶಿವಶಂಕರ್ ನೇತೃತ್ವದಲ್ಲಿ ಕಂದಾಯ ವಿಭಾಗದ ಸಿಬ್ಬಂದಿಗಳು ಇಂದು ಕಾರ್ಯಾಚರಣೆ ನಡೆಸಿದರು.

ಈ ವೇಳೆ ಕಟ್ಟಡಗಳ ಸ್ಥಳ ಪರಿಶೀಲನೆ ಮಾಡಿ, ಅಳತೆ ಪಡೆದು, ಈಗಾಗಲೇ ತೆರಿಗೆ ಪಾವತಿಸಿದ್ದಲ್ಲಿ ವ್ಯತ್ಯಾಸದ ತೆರಿಗೆಯನ್ನು ಪಾವತಿಸಲು ಹಾಗೂ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ಮಾಲೀಕರುಗಳಿಗೆ ತೆರಿಗೆ ನೋಟಿಸ್ ನೀಡಿದರು‌.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ  ಕೆ.ಜೆ.ಶಿವಶಂಕರ್, ನಿಗದಿತ ಅವಧಿಯಲ್ಲಿ ನಗರಸಭೆಗೆ ಪಾವತಿಸಬೇಕಾದ ತೆರಿಗೆಗಳನ್ನು ಪಾವತಿಸಿ ಸರ್ಕಾರದಿಂದ ನೀಡಲಾಗುವ ತೆರಿಗೆ ರಿಯಾಯಿತಿಯ ಲಾಭಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಸ್ವತ್ತಿನ ಎಲ್ಲ ತೆರಿಗೆಗಳನ್ನು ಪ್ರತಿ ಆರ್ಥಿಕ ವರ್ಷದ ಏಪ್ರಿಲ್ ತಿಂಗಳಲ್ಲಿ ಪಾವತಿಸಿದಲ್ಲಿ, ಒಟ್ಟು ತೆರಿಗೆಯ ಮೇಲೆ ಶೇಕಡ ಐದರಷ್ಟು ರಿಯಾಯಿತಿ ಇರುವ ಬಗ್ಗೆ ಹಾಗೂ ಅದೇ ಆರ್ಥಿಕ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ತೆರಿಗೆ ಪಾವತಿಸಿದಲ್ಲಿ ಯಾವುದೇ ದಂಡ ರಹಿತ ತೆರಿಗೆ ಪಾವತಿಸಲು ಅವಕಾಶ ಇರುವ ಬಗ್ಗೆ ವಿವರಿಸಿದರು.

ನಿಗದಿತ ಅವಧಿಯಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ತಮ್ಮ ಸ್ವತ್ತುಗಳ ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ತೆರಿಗೆ ಹಾಗೂ ಇನ್ನುಳಿದ ತೆರಿಗೆಗಳನ್ನು ನಗರಸಭೆಗೆ ಪಾವತಿಸಿ ರಶೀದಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!