ದೊಡ್ಡಬಳ್ಳಾಪುರ: ಕೃಷಿ ಜಮೀನು ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಹುಲಿಕುಂಟೆ ಗ್ರಾಮಸ್ಥರ ಆಗ್ರಹ

ಬೆಂಗಳೂರು, (ಆ.04): ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಕೈಗಾರಿಕಾ ಪ್ರದೇಶ ಸ್ಥಾಪಿಸಲು ಕೃಷಿ ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ KIADB ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಭೂ ಸ್ವಾಧೀನ ಅಧಿಕಾರಿಗೆ ಈ ಕುರಿತಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಹುಲಿಕುಂಟೆ ಗ್ರಾಮದ ಕೃಷಿ ಜಾಮೀನನ್ನು ಭೂ ಸ್ವಾಧೀನ ಪ್ರಕ್ರಿಯಿಂದ ಕೈಬಿಡದೆ ಹೋದಲ್ಲಿ ಈ ಹಿಂದೆ ಮಾಡಿದ್ಧ ಉಗ್ರ ಹೋರಾಟ ಮಾಡಲಾಗವುದು ಎಂದು ಎಚ್ಚರಿಕೆ ನೀಡಿದ್ದಾರೆ‌

ಈ ವೇಳೆ  ಕೊಡಿಗೇಹಳ್ಳಿ ಮಠದ ಲಕ್ಷ್ಮಣ ಸ್ವಾಮೀಜಿ ಆಶ್ರಮದ ಮೋಹನ ರಾಮ್ ಸ್ವಾಮೀಜಿ, ತಾಪಂ ಮಾಜಿ ಅಧ್ಯಕ್ಷ ಜಿ.ವೆಂಕಟೇಶ್, ಹುಲಿಕುಂಟೆ ರೈತ ಮುಖಂಡರಾದ  ವಿವೇಕ್, ಕೀರ್ತಿಶ್ ಹೆಚ್.ವಿ., ದೇವರಾಜು, ಗೋಪಿನಾಥ್, ರವಿ, ರಾಜಣ್ಣ, ಸಿದ್ದಣ್ಣ, ರಂಗನಾಥ  ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….