ಬೆಂಗಳೂರು, ಸೆ. (18): ಸುಳ್ಳು ಆರೋಪದ ಮಾಡಿ, ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಬಹಿರಂಗವಾಗಿ ಕ್ಷಮೆ ಕೇಳಬೇಕು, ಹಾಗೂ ನನಗೆ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹಾಕ್ತಿನಿ ಎಂದು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಎಚ್ಚರಿಕೆ ನೀಡಿದ್ದಾರೆ.
ಇಂದು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ನಾನು ಚಿಕ್ಕವಯಸ್ಸಿನಿಂದಲೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದೀನಿ ಎಂದು ಹೇಳ್ಕೊಂಡು ಬಂದಿದ್ದೀರಾ, ನನ್ನ ಮೇಲಿನ ಆರೋಪಕ್ಕೆ ದಾಖಲೆಗಳನ್ನು ಕೊಡಿ ಎಂದು ಕೇಳಿದ್ದೇನೆ. ಆರೋಪಗಳಿಗೆ ಯಾವುದೇ ದಾಖಲೆಗಳಿಲ್ಲ ಸುಳ್ಳು ಕಾರಣ ಕೊಟ್ಟು ಈ ರೀತಿ ಮಾಡಿದ್ದಾರೆ. ನಾನು ಮಾರಾಕಾಸ್ತ್ರ ಹಿಡಿದು ಓಡಾಡ್ತೀನಿ ಅಂದಿದ್ದಾರೆ. ಅದಕ್ಕೆಲ್ಲಾ ಸರ್ಕಾರ ದಾಖಲೆ ಕೊಡಬೇಕು ಇಲ್ಲವಾದರೆ ಸರ್ಕಾರ ಕ್ಷಮೆ ಕೇಳಿ, ಪರಿಹಾರ ನೀಡಬೇಕು ಎಂದಿದ್ದಾರೆ.
‘ನನ್ನ ಬಂಧನಕ್ಕೆ ಬೆಂಗಳೂರು ಪೊಲೀಸ್ ಆಯುಕ್ತರೆ ನೇರ ಕಾರಣ, ಸಿಸಿಬಿ ಪೊಲೀಸರ ಮೇಲೆ ಒತ್ತಡ ಹಾಕಿ ನನ್ನನ್ನು ಬಂಧಿಸಿದ್ದರು. ನಾವು ಧಾರ್ಮಿಕವಾಗಿ ಹೋರಾಟ ಮಾಡ್ತಿದ್ದೇವೆ. ಸಿದ್ದರಾಮಯ್ಯ ಜಮೀರ್ ಕುರಿತು ಮಾತನಾಡಿಲ್ಲ ರಾಜ್ಯದ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡ್ತಿದೆ ಎಂದು ಆರೋಪಿಸಿದರು.
ಕೆಂಪೇಗೌಡರ ಕುರಿತು ಅವಹೇಳನಕಾರಿ ಮಾತನಾಡಿರುವೆ ಎಂದು ಜಮೀರ್ ಅವರು ಟ್ವೀಟ್ ಮಾಡಿದ್ದಾರೆ, ದಾಖಲೆ ಕೊಡಿ, ಎಲ್ ಮಾತಾಡಿದ್ದೇನೆ.?, ವಿಡಿಯೋ ಕೊಡಿ ಎಂದರೆ ಎದೆ ಬಡ್ಕೊಂಡ್ ನನ್ ಮುಂದೆ ಬಾ ಅಂತಾರೆ. ಏಕೆ ನ್ಯಾಯಾಲಯ ಇಲ್ವಾ..? ಅಲ್ಲದೆ ನಾನು ಮಾರಾಕಾಸ್ತ್ರಹಿಡಿದು ಓಡಾಡ್ತೀನಿ ಅಂದಿದ್ದಾರೆ. ಇದು ಬಂಧಿಸಲು ಕಾರಣ ಎಂದಿದ್ದಾರೆ..! ಅದಕ್ಕೆಲ್ಲಾ ಸರ್ಕಾರ ದಾಖಲೆ ಕೊಡಬೇಕು. ನನ್ನ ಮೇಲೆ ಗೂಂಡಾ ಕಾಯ್ದೆ ದಾಖಲಿಸಿರುವ ಹಿಂದೆ ಸಚಿವ ಜಮೀರ್ ಅಹಮದ್ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದರು.
ಲೋಕಸಭೆಯಲ್ಲಿ ಹಿಂದೂ ಮತಗಳು ಕೈ ತಪ್ಪಬಹುದು ಅನ್ನೋ ಆತಂಕದಿಂದ ನಮ್ಮ ಮೇಲೆ ಈ ರೀತಿ ಮಾಡ್ತಿದ್ದಾರೆ. ಇದ್ರಿಶ್ ಪಾಷ ಕೊಲೆಯಾಗಿರಲಿಲ್ಲ, ಆದರೆ ಕೊಲೆಯಾಗಿದೆ ಎಂದು ಬಿಂಬಿಸಿದರು. ಇದ್ರಿಷ್ ಪಾಷ ಸಾವಿಗೆ 25 ಲಕ್ಷ ರೂ ಪರಿಹಾರ ಎಂದು ಕೊಟ್ಟರು. ಏಕೆ ಕೊಟ್ಟರು ಎಂದು ಪ್ರಶ್ನಿಸಿದರು.
ಕನಕಪುರ ನ್ಯಾಯಾಲಯಕ್ಕೆ ಹೋಗುವಾಗ ಏಕಾಏಕಿ ಕಾರು ಅಡ್ಡಗಟ್ಟಿ ಸಿಸಿಬಿ ಎಂದು ಹೇಳಿ, ಗೂಂಡಾ ಕಾಯ್ದೆಯಡಿ ನನ್ನನ್ನು ಬಂಧಿಸ್ತಾರೆ. ರಾತ್ರಿ 9 ಗಂಟೆವರೆಗೆ ಊಟ, ನೀರು ಕೊಡದೆ ಅಜ್ಞಾತ ಸ್ಥಳದಲ್ಲಿ ಇಟ್ಟಿದ್ದರು.
ನಾನು ಏನೇ ಪ್ರಶ್ನೆ ಮಾಡಿದರೂ ನಮಗೆ ಗೊತ್ತಿಲ್ಲ ಎಂದಿದ್ದರು. ಕೊನೆಗೆ ವಕೀಲರಿಗೆ ಪೋನ್ ಮಾಡಲು ಅವಕಾಶ ಕೊಟ್ಟರು. ಇಷ್ಟು ದಿನ ಗೂಂಡಾ ಕಾಯ್ದೆಯಡಿ ಬಂಧಿಸಿ ಈಗ ಬಿಡುಗಡೆ ಮಾಡಿದ್ರೆ ಹೇಗೆ’ ನನಗೆ ನ್ಯಾಯ ಬೇಕು ಎಂದು ಪುನೀತ್ ಕೆರೆಹಳ್ಳಿ ಕೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….