ಬೆಂಗಳೂರು, (ಸೆ.18): ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಪರ್ಧೆ ಕುರಿತಂತೆ ವಂಚನೆಗೆ ಒಳಗಾಗಿರುವ ಗೋವಿಂದ ಬಾಬು ಪೂಜಾರಿ ಬಹಳ ಆತ್ಮೀಯರಾಗಿದ್ದು, ದೂರು ನೀಡುವ ಕೆಲ ದಿನ ಮುಂಚೆಯೇ ಕರೆ ಮಾಡಿ, ಹಣಕೊಟ್ಟು ಮೋಸ ಹೋದ ವಿಚಾರವಾಗಿ ಹೇಳಿಕೊಂಡಿದ್ದರೆಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ಚೈತ್ರಾ ಕುಂದಾಪುರ ವಂಚನೆ ವಿಚಾರ ಚಕ್ರವರ್ತಿ ಸೂಲಿಬೆಲೆ ಮೂಲಕ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತು ಎಂದು ರಾಜಶೇಖರಾನಂದ ಸ್ವಾಮೀಜಿ ಹೇಳಿಕೆ ಬೆನ್ನಲ್ಲೇ ಖಾಸಗಿ ಸುದ್ದಿ ವಾಹಿನಿಗೆ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ.
ಬಹಳ ಆತ್ಮೀಯರಾಗಿದ್ದು ಕೂಡ ಗೋವಿಂದ ಬಾಬು ಪೂಜಾರಿ ವಂಚನೆಗೆ ಒಳಗಾಗಿರುವ ಕುರಿತು ಮಾಹಿತಿ ನೀಡಲಿಲ್ಲ. ಮೊದಲೇ ಹೇಳಿದ್ದರೆ ಇದೆಲ್ಲ ನಡೆಯೋದಿಲ್ಲ ಎಂದು ಮೊದಲೇ ಹೇಳ್ತಾ ಇದ್ದೆ. ಇದಾದ ಬಂತರ ವಜ್ರದೇಹಿ ಶ್ರೀಗಳು ಕರೆ ಮಾಡಿದ್ದರು, ಆಗ ತಮಾಷೆ ಮಾಡಿ ಹೇಳಿದ್ದೆ ಏಕೆಂದರೆ ಈ ಪ್ರಕರಣದಲ್ಲಿ ಗೋವಿಂದ ಬಾಬು ಪೂಜಾರಿ ಹೇಳಿದ್ದ ಹೆಸರುಗಳಲ್ಲಿ ವಜ್ರದೇಹಿ ಶ್ರೀಗಳ ಹೆಸರು ಇರಲಿಲ್ಲ.
ಇದೆಲ್ಲ ವಿಚಾರ ಗೊತ್ತಿರುವುದಾಗಿ ಶ್ರೀಗಳಿಗೆ ತಿಳಿಸಿದ್ದೆ, ಆಗ ಅವರು ಇದು ಹೊರಬಂದರೆ ಬಹಳ ಕೆಟ್ಟಾದಾಗುತ್ತೆ, ಏನಾದ್ರು ಮಾಡಬೇಕಲ್ಲ ಎಂದಿದ್ದರು. ಆಗ ನಾನು ದುಡ್ಡು ಮತ್ತು ವಂಚನೆ ಆಗಿದ್ದು ಅವರವರ ವಿಚಾರ ಬಗೆ ಹರಿಸಿಕೊಳ್ಳಲಿ ಎಂದು ಹೇಳಿದ್ದೀನಿ. ಅಲ್ಲದೆ ಈ ಕುರಿತಂತೆ ಕೆಲ ಪ್ರಮುಖರ ಗಮನಕ್ಕೆ ತಂದಿದ್ದೆ.
ಇದು ನನಗೆ ಮುಂಚಿತವಾಗಿ ಗೊತ್ತಿದ್ದ ಸಂಗತಿಯೇ, ಗೋವಿಂದ ಬಾಬು ಪೂಜಾರಿ ಅವರಿಗೆ ನಾನೇ ಹೇಳಿದ್ದೆ ಕುಳಿತು ದುಡ್ಡು ಸೇರಿದಂತೆ ಏನ್ ಏನ್ ಪಡ್ಕೋಬೇಕೋ ಎಲ್ಲ ಪಡ್ಕೊಳಿ ಎಂದು ಸಲಹೆ ನೀಡಿದ್ದೆ.
ಚೈತ್ರಾ ಕುಂದಾಪುರ ಸಂಪರ್ಕ ಹೆಚ್ಚು ಕಡಿಮೆ ಇಲ್ಲವೇ ಎನ್ನಬಹುದು. ಈ ಮುಂಚೆ ಆಕೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುವ ವೇಳೆ ಸಂದರ್ಶನದ ಸಂದರ್ಭದಲ್ಲಿ ಆಕೆಯೊಂದಿಗೆ ಮಾತನಾಡಿದ್ದು ಮಾತ್ರ. ಅದು ಬಿಟ್ಟು ಆಕೆಯೊಂದಿಗೆ ಮಾತಾಗಲಿ, ವೇದಿಕೆ ಹಂಚಿಕೊಂಡಿದ್ದಾಗಲ್ಲಿ ಇಲ್ಲ.
ಹಾಲಶ್ರೀಗಳು ಈ ಪ್ರಕರಣದಲ್ಲಿ ಅವರ ಪಾತ್ರ ಇಲ್ಲವೆಂದಿದ್ದರು. ಅವರಿಗೂ ಹೇಳಿದೆ, ಮಾತಾಡಿ ಕ್ಲಿಯರ್ ಮಾಡಿಕೊಳ್ಳಿ, ದುಡ್ಡಿದ್ರೆ ವಾಪಸ್ ಕೊಡಿ ಎಂದು ಸಲಹೆ ನೀಡಿದ್ದೆ ಎಂದು ಹೇಳಿದ್ದೆ.
ಪ್ರವಾಸ, ಕಾರ್ಯಕ್ರಮ ಹೆಚ್ಚಾಗಿರುವ ಕಾರಣ ಸಾಧುಗಳ ಸಂಪರ್ಕ ಎಲ್ಲರೊಂದಿಗಿದ್ದು, ಅದು ವಿಶೇಷವೇನಲ್ಲ. ಅಂತೆಯೇ ಹಾಲಶ್ರೀ ಸ್ವಾಮಿಗಳು ಅನೇಕ ವೇದಿಕೆಗಳಲ್ಲಿ ಇದ್ದರು. ಆದರೆ ಅದುಕ್ಕೂ, ಇದಕ್ಕು ತಳಕು ಹಾಕುವ ಅಗತ್ಯವಿಲ್ಲ. ಈ ಪ್ರಕರಣದಲ್ಲಿ ದೂರ ದೂರಕ್ಕೂ ನಾನು ಸಂಬಂಧ ಹೊಂದಿಲ್ಲ. ಕಾರಣ ಈ ಪ್ರಕರಣದಲ್ಲಿ ದುಡ್ಡು ಕಳೆದುಕೊಂಡ ಗೋವಿಂದ ಬಾಬು ಪೂಜಾರಿ ನನಗೆ ಅತ್ಯಂತ ಆತ್ಮೀಯರು ಎಂದು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….