ಹೈದರಾಬಾದ್, (ನ.26); ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ರಾತ್ರಿ ಹೈದರಾಬಾದ್‌ನ ಅಶೋಕ ನಗರದಲ್ಲಿ ನಿರುದ್ಯೋಗಿ ಯುವಕರೊಂದಿಗೆ ಸಂವಾದ ನಡೆಸಿದರು.
ನವೆಂಬರ್ 30 ರಂದು ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯದ ನಿಮಿತ್ತ ತೆಲಂಗಾಣದಲ್ಲಿರುವ ರಾಹುಲ್ ಗಾಂಧಿ, ನಗರದ ಅಶೋಕ ನಗರದಲ್ಲಿ ನಿರುದ್ಯೋಗಿ ಯುವಕರೊಂದಿಗೆ ಮಾತುಕತೆ ನಡೆಸಿದರು, ಈ ವೇಳೆ ಯುವಕರು ರಾಹುಲ್ ಗಾಂಧಿ ಅವರನ್ನು ಕಂಡು ಆಶ್ಚರ್ಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಅವರೊಂದಿಗೆ ಸಲ್ಲಿ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ನಂತರ, ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ನಿರುದ್ಯೋಗಿ ಯುವಕರನ್ನು ಭೇಟಿ ಮಾಡಲು ಸಿಟಿ ಸೆಂಟ್ರಲ್ ಲೈಬ್ರರಿಗೆ ಭೇಟಿ ನೀಡಿದರು. ಉದ್ಯೋಗಾಕಾಂಕ್ಷಿಗಳು TSPSC ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕುರಿತು ರಾಹುಲ್ ಗಾಂಧಿ ವಿಚಾರಿಸಿದರು.
ಕಳೆದ 10 ವರ್ಷಗಳಿಂದ ಬಿಆರ್‌ಎಸ್ ಸರ್ಕಾರದ ದುರಾಡಳಿತದಿಂದ ಯುವಕರು ಕಂಗಾಲಾಗಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎರಡು ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದರು.
ಪರೀಕ್ಷೆಯ ದಿನಾಂಕಗಳು, ಫಲಿತಾಂಶಗಳು ಮತ್ತು ಉದ್ಯೋಗ ಅಧಿಸೂಚನೆಗಳೊಂದಿಗೆ ಉದ್ಯೋಗ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….