ಬೆಳಗಾವಿ, (ನ.26); ವಿದ್ಯುತ್ ತಂತಿ ತಗುಲಿದ ಪರಿಣಾಮ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ತಂದೆ ಮಲ್ಲಿಕಾರ್ಜುನ ಪೂಜಾರಿ (32 ವರ್ಷ), ಮಗ ಪ್ರೀತಮ್ (7 ವರ್ಷ) ಮೃತ ರ್ದುದೈವಿಗಳೆಂದು ಗುರುತಿಸಲಾಗಿದೆ.
ಪ್ರೀತಮ್ನನ್ನು ತಂದೆ ಮಲ್ಲಿಕಾರ್ಜುನ ತೋಟಕ್ಕೆ ಕರೆದುಕೊಂಡು ಹೋಗಿದ್ದ ಈ ವೇಳೆ ಮೋಟಾರ್ ಆನ್ ಮಾಡಿ ವಾಟರ್ವಾಲ್ ಟರ್ನ್ ಮಾಡುವಾಗ ಮಲ್ಲಿಕಾರ್ಜುನ್ಗೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ನೋಡಿದ ಮಗ, ತಂದೆಯನ್ನು ರಕ್ಷಿಸಲು ಕೈಹಿಡಿದಿದ್ದಾನೆ. ಈ ವೇಳೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….