ಹಾಸಿಗೆ ಹಿಡಿದ ಹಿರಿಯ ನಟಿ ಲೀಲಾವತಿ; ಆರೋಗ್ಯ ವಿಚಾರಿಸಿದ ಖ್ಯಾತ ನಟ ದರ್ಶನ್

ನೆಲಮಂಗಲ, (ನ.26); ವಯೋ ಸಹಜ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿರುವ ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಖ್ಯಾತನಟ ದರ್ಶನ್ ಅವರು ಲೀಲಾವತಿ ಅವರ ಮನೆಗೆ ಇಂದು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ತಾಲೂಕಿನ ಸೋಲದೇವನಹಳ್ಳಿ ತೋಟದ ಮನೆಗೆ ಬಂದಿದ್ದ ದರ್ಶನ್ ಅವರು,ಕೆಲವು ಸಮಯ ಲೀಲಾವತಿ ಅವರ ಮನೆಯಲ್ಲಿ ಇದ್ದು, ಆರೋಗ್ಯ ವಿಚಾರಿಸಿದರು. ಈ ವೇಳೆ ವಿನೋದ್ ರಾಜ್‌ ಮತ್ತಿತರರಿದ್ದರು.

87 ವರ್ಷದ ಹಿರಿಯ ನಟಿ ಲೀಲಾವತಿಯವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಪಡೆಯುತ್ತಿದ್ದು, ಚಿತ್ರರಂಗದ ಅನೇಕರು ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….