ಹೈದರಾಬಾದ್, (ನ.26): ‘ಹಲಾಲ್ ಸರ್ಟಿಫಿಕೇಟ್ ನಿಷೇಧಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಈವರೆಗೂ ಇಲ್ಲ. ಅಂಥನಿರ್ಣಯ ವನ್ನೂ ಕೈಗೊಂಡಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಲಾಲ್ ಸರ್ಟಿಫಿ ಕೇಟ್ ಹೊಂದಿರುವ ವಸ್ತುಗಳನ್ನು ರಾಜ್ಯ ಸರ್ಕಾರನಿಷೇಧಿಸಿದೆ. ಇದರ ಬೆನ್ನಲ್ಲೇ ಹಲಾಲ್ ನಿಷೇಧಕ್ಕೆ ದೇಶದ ವಿವಿಧೆಡೆ ಕೂಗು ಎದ್ದಿದೆ ಆದರೆ ಅಮಿತ್ ಶಾ ಮಾತು ಬಿಜೆಪಿ ಹಾಗೂ ಬಲಪಂಥೀಯರಿಗೆ ನಿರಾಸೆಯನ್ನುಂಟು ಮಾಡಿದೆ.
ಇದರ ನಡುವೆಯೇ, ತೆಲಂಗಾಣ ವಿಧಾನಸಭೆ ಚುನಾವಣೆ ನಿಮಿತ್ತ ಹೈದರಾಬಾದ್‌ಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುದ್ದಿಗಾರರ ಜೊತೆ ಮಾತನಾಡಿ, ‘ದೇಶದಲ್ಲಿ ಹಲಾಲ್ ಉತ್ಪನ್ನ ನಿಷೇಧಿಸುವ ಯಾವುದೇ ನಿರ್ಧಾರವನ್ನು ಕೇಂದ್ರ ಸರ್ಕಾರ ಈವರೆಗೂ ಕೈಗೊಂಡಿಲ್ಲ’ ಎಂದರು.
ನಕಲಿ ಹಲಾಲ್ ಟ್ಯಾಗ್ ಹಾಕಿ ಉತ್ಪನ್ನಗಳಿಗೆ ಹಲಾಲ್ ಪರವಾನಗಿ ನೀಡಲಾಗುತ್ತಿದೆ. ಇದರ ಹಿಂದೆ ಹಣ ಮಾಡುವ ತಂತ್ರ ಅಡಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಹಲಾಲ್ ಪ್ರಮಾಣಪತ್ರದ ಪದಾರ್ಥಗಳ ಮೇಲೆ ನಿಷೇಧ ಹೇರಿತ್ತು.
ಏನಿದು ಹಲಾಲ್ ಪ್ರಮಾಣಪತ್ರ?: ‘ಆಹಾರವನ್ನು ಇಸ್ಲಾಮಿಕ್ ಕಾನೂನಿಗೆ ಅನುಸಾರವಾಗಿ ಹಾಗೂ ಕಲಬೆರಕೆ ಇಲ್ಲದೆ ತಯಾರಿಸಲಾಗಿದೆ’ ಎಂಬ ಪ್ರಮಾಣಪತ್ರವನ್ನು ಆಹಾರೋತ್ಪನ್ನ ಕಂಪನಿಗಳಿಗೆ ಕೆಲವು ನೋಂದಾಯಿತ ಇಸ್ಲಾಮಿಕ್ ಸಂಸ್ಥೆಗಳು ನೀಡುತ್ತವೆ. ಇದಕ್ಕೆ ಹಲಾಲ್ ಸರ್ಟಿಫಿಕೇಶನ್ ಎನ್ನುತ್ತಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….