ಚೆನ್ನೈ, (ಡಿ.29); ಅನಾರೋಗ್ಯದಿಂದ ನಿಧನರಾದ ತಮಿಳು ಚಿತ್ರರಂಗದ ಹಿರಿಯ ನಟ, ರಾಜಕಾರಣಿ ವಿಜಯ್ಕಾಂತ್ ಅವರ ಅಂತಿಮ ದರ್ಶನವನ್ನು ತಲೈವ ರಜನೀಕಾಂತ್ ಸೇರಿದಂತೆ ತಮಿಳು ಚಿತ್ರರಂಗದ ಹಲವು ಗಣ್ಯರು ವಿಜಯ್ಕಾಂತ್ರ ಅಂತಿಮ ದರ್ಶನ ಪಡೆದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಅಂತೆಯೇ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಸಹ ತಮ್ಮ ಚಿತ್ರರಂಗದ ಹಿರಿಯ ನಟನ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಅಪರಿಚಿತ ದುಷ್ಕರ್ಮಿಗಳು ವಿಜಯ್ ಮೇಲೆ ಚಪ್ಪಲಿ ಎಸೆದಿದ್ದಾರೆ.
ಚೆನ್ನೈನಲ್ಲಿ ವಿಜಯ್ಕಾಂತ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದಳಪತಿ ವಿಜಯ್, ಕಿಕ್ಕಿರಿದು ತುಂಬಿದ್ದ ಜನಗಳ ಮಧ್ಯದಿಂದ ಬಂದು ವಿಜಯ್ಕಾಂತ್ರ ದರ್ಶನ ಪಡೆದು ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.
ಬಳಿಕ ಕಿಕ್ಕಿರಿದು ತುಂಬಿದ್ದ ಜನಗಳ ಮಧ್ಯದಿಂದಲೇ ಬಹಳ ಕಷ್ಟಪಟ್ಟು ತಮ್ಮ ಕಾರಿನ ಬಳಿ ಹೋದರು. ಈ ವೇಳೆ ಅಪರಿಚಿತ ದುಷ್ಕರ್ಮಿ ವಿಜಯ್ ಮೇಲೆ ಚಪ್ಪಲಿ ಎಸೆದಿದ್ದಾರೆ. ಚಪ್ಪಲಿ ವಿಜಯ್ ಅವರ ಬೆನ್ನಿಗೆ ತಾಗಿಗೊಂಡು ಮುಂದೆ ಹೋಗಿ ಬಿದ್ದಿದೆ.
ವಿಜಯ್ ಮೇಲೆ ಚಪ್ಪಲಿ ಎಸೆದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದಳಪತಿ ವಿಜಯ್ ಅಭಿಮಾನಿಗಳು ಈ ವಿಡಿಯೋವನ್ನು ತೀವ್ರವಾಗಿ ಖಂಡಿಸಿದ್ದಾರೆ. ತಮ್ಮ ಚಿತ್ರರಂಗದ ಹಿರಿಯ ನಟನಿಗೆ ಅಂತಿಮ ನಮನ ಸಲ್ಲಿಸಲು ಬಂದ ವ್ಯಕ್ತಿಯೊಟ್ಟಿಗೆ ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೆಲ ತಿಂಗಳುಗಳ ಹಿಂದೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ದರ್ಶನ್ ಮೇಲೆಯೂ..ಅಪರಿಚಿತ ಕಿಡಿಗೇಡಿಗಳು ಚಪ್ಪಲಿ ತೂರಿದ್ದು, ಹಿರಿಯ ನಟರು ಹಾಗೂ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….