ದೊಡ್ಡಬಳ್ಳಾಪುರ, (ಡಿ.29); ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿ, ಕನ್ನಡ ಬಳಕೆಗೆ ಆದ್ಯತೆ ನೀಡಲೇ ಬೇಕಿದ್ದು, ಈ ದಿಸೆಯಲ್ಲಿ ಹೋರಾಟ ನಡೆಸುತ್ತಿರುವ ಕನ್ನಡಪರ ಹೋರಾಟಗಾರರ ಬಂಧನ ಖಂಡನೀಯವಾಗಿದೆ. ಕಡ್ಡಾಯವಾಗಿ ಕನ್ನಡ ಬಳಕೆ ಮಾಡುವಂತೆ ಆಗ್ರಹಿಸಿ ನಗರದ ಡಿ.ಮಾರ್ಟ್ ಮೊದಲಾದ ವಾಣಿಜ್ಯ ಮಳಿಗೆಗಳಲ್ಲಿ ಹೋರಾಟ ಮಾಡುವ ಮೂಲಕ ಕನ್ನಡಿಗರ ಹಕ್ಕನ್ನು ಕೇಳುತ್ತೇವೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರನ್ನು ಬಂಸಿರುವುದು ಖಂಡನೀಯವಾಗಿದೆ. ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಗಾಲು ಹಾಕುವ ಮರಾಠಿ ಪುಂಡರನ್ನು ಬಂಧಿಸಿಲ್ಲ. ರಾಜ್ಯದಲ್ಲಿ ಬಿಜೆಪು ಶಾಸಕ ತಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿಗಳ ಮೇಲೆ 40 ಸಾವಿರ ಕೋಟಿ ರೂಗಳ ಅಕ್ರಮ ಹಗರಣದ ಬಗ್ಗೆ ದನಿ ಎತ್ತಿದ್ದರೂ ಈ ಬಗ್ಗೆ ತನಿಖೆಯಾಗಲೀ, ಗಂಬೀರ ಕ್ರಮಗಳಾಗಲೀ ಕಾಣುತ್ತಿಲ್ಲ. ಜನರ ತೆರಿಗೆ ಹಣವನ್ನು ಪೋಲು ಮಾಡುವ ರಾಜಕಾರಣಿಗಳ ಬಗ್ಗೆ ಕ್ರಮ ಕೈಗೊಳ್ಳದ ಸರ್ಕಾರ ಕನ್ನಡ ಪರ ಹೋರಾಟಗಾರರನ್ನು ಗೂಂಡಾಗಳಂತೆ ನೋಡುತ್ತಿದೆ.
ಮೊನ್ನೆ ನಡೆದ ಗಲಭೆಯಲ್ಲಿ ಯಾವುದೇ ಹೋರಾಟಗಾರರ ಪಾತ್ರವಿಲ್ಲ. ಇದು ಬೇಕೆಂತಲೇ ಅವರ ಕಡೆಯ ಕಿಡಿಗೇಡಿಗಳೇ ಮಾಡಿರುವ ಕೃತ್ಯವಾಗಿದ್ದು ಈ ಬಗ್ಗೆ ತನಿಖೆಯಾಗಬೇಕು ಎಂದರು.
ನಗರದಲ್ಲಿ ಡಿ.ಮಾರ್ಟ್‍ನಲ್ಲಿ ಕನ್ನಡ ಬಳಕೆ ಯಾಗುತ್ತಿಲ್ಲ. ಈ ಬಗ್ಗೆ ಡಿ.30ರಂದು ತಹಸೀಲ್ದಾರ್ ಹಾಗೂ ಉಪವಿಭಾಗಾಕಾರಿಗಳ ಗಮನಕ್ಕೆ ತಂದು, ನಮ್ಮ ಹೋರಾಟವನ್ನು ಆರಂಭಿಸಿ,ದೇವನಹಳ್ಳಿ ಸೇರಿದಂತೆ ವಿವಿದೆಡೆಗಳಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತೇವೆ. ನಂಜುಂಡಸ್ವಾಮಿ ಅವರ ಹೋರಾಟವನ್ನು ಪ್ರಶಂಸಿಸುವ ಮುಖ್ಯಮಂತ್ರಿಗಳು ಕನ್ನಡಿಗರ ಹೋರಾಟಕ್ಕೂ ಬೆಂಬಲ ನೀಡಿ ಕನ್ನಡದ ಆದ್ಯತೆಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.
ಸುದ್ಧಿಗೋಷ್ಟಿಯಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್, ಸಂಘಟನಾ ಕಾರ್ಯದರ್ಶಿ ಅರವಿಂದ್, ತಾಲೂಕು ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ, ಮಹಿಳಾ ಘಟಕದ ಉಪಾಧ್ಯಕ್ಷೆ ಕಮಲಾಕ್ಷಿ, ಮುಖಂಡರಾದ ವಿನಯ್, ಶಿವಾನಂದ್ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….