ದೊಡ್ಡಬಳ್ಳಾಪುರ, (ಡಿ.29); ತಾಲೂಕಿನ ಮಧುರೆ ಹೋಬಳಿಯ ಮುಪ್ಪಡಿಘಟ್ಟ ಗ್ರಾಮದಲ್ಲಿಂದು ಓಂ ಶಕ್ತಿ ಮಾಲಾಧಾರಿಗಳ ಯಾತ್ರೆಗೆ ಚಾಲನೆ ನೀಡಲಾಯಿತು.
ಕಾಂಗ್ರೆಸ್ ಯುವ ನಾಯಕ, ಎಂ.ಎಸ್.ರಾಮಯ್ಯ ಯೂಥ್ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ರಕ್ಷಾ ರಾಮಯ್ಯರ ಸೇವಾರ್ಥವಾಗಿ ಓಂ ಶಕ್ತಿ ದೇವಿಯ ಮಾಲಾಧಾರಿಗಳಿಗೆ ಕಲ್ಪಿಸಿದ್ದ ಉಚಿತವಾಗಿ ಬಸ್ ವ್ಯವಸ್ಥೆ ಗೆ ಚಾಲನೆ ದೊರಕಿತು..
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಳ ಶಂಕರಪ್ಪ, ಜಿಲ್ಲಾ ಸಹಕಾರ ಬ್ಯಾಂಕಿನ ನಿವೃತ್ತ ಮೇಲ್ವಿಚಾರಕ ಕೆಂಪೇಗೌಡ, ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಿ.ಮಾರೇಗೌಡ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪುನೀತ್ ಗೌಡ ಮಲ್ಲೋಹಳ್ಳಿ ಮತ್ತಿತರರಿದ್ದರು
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….