ಅಂತಿಮ‌ ದರ್ಶನಕ್ಕೆ ಬಂದ ಹಿರಿಯ ನಟನ ಮೇಲೆ ಚಪ್ಪಲಿ ಎಸೆತ..!| ವಿಡಿಯೋ ನೋಡಿ

ಚೆನ್ನೈ, (ಡಿ.29); ಅನಾರೋಗ್ಯದಿಂದ ನಿಧನರಾದ ತಮಿಳು ಚಿತ್ರರಂಗದ ಹಿರಿಯ ನಟ, ರಾಜಕಾರಣಿ ವಿಜಯ್​ಕಾಂತ್ ಅವರ ಅಂತಿಮ ದರ್ಶನವನ್ನು ತಲೈವ ರಜನೀಕಾಂತ್ ಸೇರಿದಂತೆ ತಮಿಳು ಚಿತ್ರರಂಗದ ಹಲವು ಗಣ್ಯರು ವಿಜಯ್​ಕಾಂತ್​ರ ಅಂತಿಮ ದರ್ಶನ ಪಡೆದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಅಂತೆಯೇ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್​ ಸಹ ತಮ್ಮ ಚಿತ್ರರಂಗದ ಹಿರಿಯ ನಟನ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಅಪರಿಚಿತ ದುಷ್ಕರ್ಮಿಗಳು ವಿಜಯ್​ ಮೇಲೆ ಚಪ್ಪಲಿ ಎಸೆದಿದ್ದಾರೆ.

ಚೆನ್ನೈನಲ್ಲಿ ವಿಜಯ್​ಕಾಂತ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದಳಪತಿ ವಿಜಯ್, ಕಿಕ್ಕಿರಿದು ತುಂಬಿದ್ದ ಜನಗಳ ಮಧ್ಯದಿಂದ ಬಂದು ವಿಜಯ್​ಕಾಂತ್​ರ ದರ್ಶನ ಪಡೆದು ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. 

ಬಳಿಕ ಕಿಕ್ಕಿರಿದು ತುಂಬಿದ್ದ ಜನಗಳ ಮಧ್ಯದಿಂದಲೇ ಬಹಳ ಕಷ್ಟಪಟ್ಟು ತಮ್ಮ ಕಾರಿನ ಬಳಿ ಹೋದರು. ಈ ವೇಳೆ ಅಪರಿಚಿತ  ದುಷ್ಕರ್ಮಿ ವಿಜಯ್ ಮೇಲೆ ಚಪ್ಪಲಿ ಎಸೆದಿದ್ದಾರೆ. ಚಪ್ಪಲಿ ವಿಜಯ್​ ಅವರ ಬೆನ್ನಿಗೆ ತಾಗಿಗೊಂಡು ಮುಂದೆ ಹೋಗಿ ಬಿದ್ದಿದೆ.

ವಿಜಯ್​ ಮೇಲೆ ಚಪ್ಪಲಿ ಎಸೆದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದಳಪತಿ ವಿಜಯ್ ಅಭಿಮಾನಿಗಳು ಈ ವಿಡಿಯೋವನ್ನು ತೀವ್ರವಾಗಿ ಖಂಡಿಸಿದ್ದಾರೆ. ತಮ್ಮ ಚಿತ್ರರಂಗದ ಹಿರಿಯ ನಟನಿಗೆ ಅಂತಿಮ ನಮನ ಸಲ್ಲಿಸಲು ಬಂದ ವ್ಯಕ್ತಿಯೊಟ್ಟಿಗೆ ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೆಲ ತಿಂಗಳುಗಳ ಹಿಂದೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ದರ್ಶನ್ ಮೇಲೆಯೂ..ಅಪರಿಚಿತ ಕಿಡಿಗೇಡಿಗಳು ಚಪ್ಪಲಿ ತೂರಿದ್ದು, ಹಿರಿಯ ನಟರು ಹಾಗೂ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….