ಕಾಟೇರ’ ಟಿಕೆಟ್ ಪ್ರದರ್ಶಿಸಿದ ಆರಾಧನಾ

ಬೆಂಗಳೂರು, (ಡಿ.29); ಹಿರಿಯ ನಟಿ ಮಾಲಾಶ್ರೀಯ ಪುತ್ರಿ ಆರಾಧನಾ ರಾಮ್​ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ಕಾಟೇರ’ ಡಿ.29ರಂದು ಬಿಡುಗಡೆ ಆಗಿದೆ.

ಚೊಚ್ಚಲ ಸಿನಿಮಾದಲ್ಲೇ ನಟ ದರ್ಶನ್​ಗೆ ಜೋಡಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಅವರೂ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದರು. ಈ ಹಿನ್ನೆಲೆ ಟಿಕೆಟ್ ಪಡೆದ ಪೋಟೋವನ್ನು ಹಂಚಿಕೊಂಡಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಕಾಟೇರ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಗುರು ಮೂವೀ ಸೂಪರ್ ಆಗಿದೆ. ಬಾಸ್‌ಗೆ ಇರುವ ಕ್ರೇಜ್ ಯಾರಿಗೂ ಬರಲ್ಲ. ಜಾತಿ, ಮತ ಅನ್ನೋರು ಈ ಸಿನಿಮಾ ನೋಡಿ’ ಎಂದು ದರ್ಶನ್‌ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಫ್ಯಾನ್ಸ್‌.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….